ಬಕಾಸುರ ಟೈಟಲ್ ಕೊಟ್ಟಿದ್ದು ರವಿಚಂದ್ರನ್!
Team Udayavani, Jun 15, 2017, 12:34 PM IST
ರವಿಚಂದ್ರನ್ ಅವರು “ಬಕಾಸುರ’ ಎಂಬ ಸಿನಿಮಾದಲ್ಲಿ ನಟಿಸುತ್ತಿರೋದು ನಿಮಗೆ ಗೊತ್ತೇ ಇದೆ. ಈಗಾಗಲೇ 30 ದಿನಗಳ ಚಿತ್ರೀಕರಣ ಮುಗಿದೇ ಹೋಗಿದೆ. “ಬಕಾಸುರ’ ಎಂಬ ಟೈಟಲ್ ಇಟ್ಟ ದಿನದಿಂದಲೂ ಅನೇಕರಿಗೆ ಒಂದು ಕುತೂಹಲವಿತ್ತು. ರವಿಚಂದ್ರನ್ ಸಿನಿಮಾಕ್ಕೆ “ಬಕಾಸುರ’ ಎಂಬ ಟೈಟಲ್ ಇಡಲು ಕಾರಣವೇನು, ಯಾವ ತರಹದ ಪಾತ್ರ ಮಾಡುತ್ತಿರಬಹುದು ಎಂಬ ಪ್ರಶ್ನೆ ಅವರ ಅಭಿಮಾನಿಗಳಲ್ಲಿತ್ತು. ಆದರೆ, “ಬಕಾಸುರ’ ಎಂಬ ಟೈಟಲ್ ಕೊಟ್ಟಿದ್ದೇ ರವಿಚಂದ್ರನ್ ಎಂಬ ವಿಚಾರ ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ನಿರ್ದೇಶಕ ನವನೀತ್ ಕಥೆ ಸಿದ್ಧಪಡಿಸಿ, ರವಿಚಂದ್ರನ್ ಅವರು ಕೂಡಾ ನಟಿಸಿಲು ಒಪ್ಪಿಕೊಂಡ ಮೇಲೆ ಚಿತ್ರಕ್ಕೆ ಯಾವ ಟೈಟಲ್ ಇಡೋದು ಎಂದು ತಲೆಕೆಡಿಸಿಕೊಂಡಿದ್ದರು. ಕಥೆ ಕೇಳಿದ ರವಿಚಂದ್ರನ್‌ಗೆ ಹೊಳೆದಿದ್ದು “ಬಕಾಸುರ ಫಾರ್ ಮನಿ’. ಹೌದು, ಅನೇಕರು ಚಿತ್ರದ ಶೀರ್ಷಿಕೆ “ಬಕಾಸುರ’ ಎಂದುಕೊಂಡಿದ್ದಾರೆ. ಸಿನಿಮಾದ ಪೂರ್ಣ ಶೀರ್ಷಿಕೆ “ಬಕಾಸುರ ಫಾರ್ ಮನಿ’. ಆದರೆ, ಫಾರ್ ಮನಿ ಅನ್ನೋದನ್ನು ಟ್ಯಾಗ್‌ಲೈನ್ ರೀತಿ ಬಳಸಲಾಗಿದೆ. ಹಾಗಾಗಿ, “ಬಕಾಸುರ’ ಅಷ್ಟೇ ಹೈಲೈಟ್ ಆಗಿದೆ.
ಚಿತ್ರದಲ್ಲಿ ರವಿಚಂದ್ರನ್ ಅವರು ದೊಡ್ಡ ಬಿಝಿನೆಸ್ ಮ್ಯಾನ್ ಆಗಿ ಕಾಣಿಸಿಕೊಂಡಿದ್ದಾರೆ. ಇಡೀ ಸಿನಿಮಾದಲ್ಲಿ ಅವರ ಲುಕ್ ಸ್ಟೈಲಿಶ್ ಆಗಿ ಮೂಡಿಬರಲಿದೆಯಂತೆ. ರವಿಚಂದ್ರನ್ ಜೊತೆ ಕೆಲಸ ಮಾಡಿ ನಿರ್ದೇಶಕ ನವನೀತ್ ಖುಷಿಯಾಗಿದ್ದಾರೆ. “ಹೊಸಬರನ್ನು ಅವರು ಪ್ರೋತ್ಸಾಹಿಸುವ ರೀತಿ ನಿಜಕ್ಕೂ ಖುಷಿಯಾಗುತ್ತದೆ. ಸಿನಿಮಾ ಕೂಡಾ ನಾವಂದುಕೊಂಡಂತೆಯೇ ಚೆನ್ನಾಗಿ ಮೂಡಿಬರುತ್ತಿದೆ’ ಅನ್ನೋದು ನವನೀತ್ ಮಾತು.
ಚಿತ್ರದಲ್ಲಿ ಆರ್‌ಜೆ ರೋಹಿತ್ ಕೂಡಾ ನಟಿಸಿದ್ದಾರೆ. ಇಲ್ಲಿ ಲಾಯರ್ ಆಗಿ ಕಾಣಿಸಿಕೊಂಡಿರುವ ರೋಹಿತ್‌ಗೆ ಕಾವ್ಯಾ ನಾಯಕಿ. ಮಕರಂದ್ ದೇಶಪಾಂಡೆ ಕೂಡಾ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಶಶಿಕುಮಾರ್ ಕೂಡಾ “ಬಕಾಸುರ’ದಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ. ನವನೀತ್ ಅವರಿಗೆ ಮೊದಲ ಚಿತ್ರಕ್ಕಿಂತ ಇದು ತುಂಬಾ ಭಿನ್ನವಾದ ಸಿನಿಮಾವಂತೆ. ಅದು ಹಾರರ್ ಸಿನಿಮಾವಾದರೆ, ಇದು ಪಕ್ಕಾ ಥ್ರಿಲ್ಲರ್ ಕಂ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾವಂತೆ. ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಚಿತ್ರೀಕರಣವಾದ ಭಾಗದ ಎಡಿಟಿಂಗ್ ಕೂಡಾ ನಡೆದಿದೆ. ಆಗಸ್ಟ್‌ನಲ್ಲಿ ಕೊನೆಯಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಚನೆ ಕೂಡಾ ಚಿತ್ರತಂಡಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.