ಪಡ್ಡೆಹುಲಿ ಜೊತೆಗೆ ರವಿಚಂದ್ರನ್
Team Udayavani, May 21, 2018, 3:11 PM IST
ನಿರ್ಮಾಪಕ ಕೆ. ಮಂಜು ಮಗ ಶ್ರೇಯಸ್ ನಾಯಕನಾಗಿ ಅಭಿನಯಿಸುತ್ತಿರುವ ಮೊದಲ ಚಿತ್ರ “ಪಡ್ಡೆಹುಲಿ’ಯ ಚಿತ್ರೀಕರಣ ಭರದಿಂದ ಸಾಗಿದೆ. ಹೊಸ ವಿಷಯವೇನೆಂದರೆ, ಈ ಚಿತ್ರದಲ್ಲಿ ರವಿಚಂದ್ರನ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರಿಗೆ ಜೋಡಿಯಾಗಿ ಸುಧಾರಾಣಿ ನಟಿಸುತ್ತಿದ್ದು, “ಮನೆ ದೇವ್ರು’ ಚಿತ್ರದ ನಂತರ ಇಬ್ಬರೂ ಮತ್ತೂಮ್ಮೆ ಒಟ್ಟಾಗಿ ನಟಿಸುತ್ತಿದ್ದಾರೆ.
“ಪಡ್ಡೆಹುಲಿ’ಯಲ್ಲಿ ರವಿಚಂದ್ರನ್ ಅವರ ಪಾತ್ರವೇನು ಎಂಬ ಪ್ರಶ್ನೆ ಸಹಜ. ಈ ಚಿತ್ರದಲ್ಲಿ ಶ್ರೇಯಸ್ನ ಗುರುಗಳಾಗಿ ರವಿಚಂದ್ರನ್ ಅವರು ನಟಿಸುತ್ತಿದ್ದಾರಂತೆ. “ನಾಗರಹಾವು’ ಚಿತ್ರದಲ್ಲಿ ರಾಮಾಚಾರಿಗೆ ಚಾಮಯ್ಯ ಮೇಷ್ಟ್ರು ಹೇಗೆ ಗುರುಗಳಾಗಿದ್ದರೋ, ಇಲ್ಲೂ ಶ್ರೇಯಸ್ಗೆ ರವಿಚಂದ್ರನ್ ಅವರು ಇರುತ್ತಾರಂತೆ. ಚಾಮಯ್ಯ ಮೇಷ್ಟ್ರ ಸಮನಾಂತರವಾದ ಪಾತ್ರದಲ್ಲಿ ರವಿಚಂದ್ರನ್ ಅವರು ಕಾಣಿಸಿಕೊಳ್ಳುತ್ತಿದ್ದು, ಚಿತ್ರದಲ್ಲಿ ಅವರ ಗೆಟಪ್ ವಿಶಿಷ್ಟವಾಗಿರಲಿದೆಯಂತೆ.
ಅಷ್ಟೇ ಅಲ್ಲ, ಅವರು ವಾಸಿಸುವ ಮನೆಯನ್ನು ಹೊಸದಾಗಿ ಡಿಸೈನ್ ಮಾಡಿ, ಅಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಸೋಮವಾರದಿಂದ ರವಿಚಂದ್ರನ್ ಅವರು ಚಿತ್ರೀಕರಣದಲ್ಲಿ ಭಾಗವಹಿಸಿದ್ದು, ಅವರ ಹುಟ್ಟುಹಬ್ಬಕ್ಕೆ (ಮೇ 30) ಚಿತ್ರದ ಅವರ ಮೊದಲ ಟೀಸರ್ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಮುಂದಾಗಿದೆ. “ಪಡ್ಡೆಹುಲಿ’ ಚಿತ್ರವನ್ನು “ಉಪ್ಪು ಹುಳಿ ಖಾರ’ ನಿರ್ಮಿಸಿದ ರಮೇಶ್ ರೆಡ್ಡಿ ಅವರು ನಿರ್ಮಿಸುತ್ತಿದ್ದು, ಗುರು ದೇಶಪಾಂಡೆ ನಿರ್ದೇಶನ ಮಾಡುತ್ತಿದ್ದಾರೆ.
ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಕೆ.ಎಸ್. ಚಂದ್ರಶೇಖರ್ ಅವರ ಛಾಯಾಗ್ರಹಣವಿದೆ. ಈಗಾಗಲೇ ನಾಯಕ ಮತ್ತು ಅವನ ಸ್ನೇಹಿತರ ಭಾಗದ ಚಿತ್ರೀಕರಣ ಮುಗಿದಿದ್ದು, ಈಗ ಶ್ರೇಯಸ್ ಮತ್ತು ರವಿಚಂದ್ರನ್ ಅವರ ಕಾಂಬಿನೇಷನ್ನಲ್ಲಿ ಚಿತ್ರೀರಣ ನಡೆಯುತ್ತಿದೆ. ಚಿತ್ರದಲ್ಲಿ ಶ್ರೇಯಶ್ಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ಅಭಿನಯಿಸುತ್ತಿದ್ದು, ಅಮಿತ್ ಮುಂತಾದವರು ಇದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್
Pani movie: ಕನ್ನಡದಲ್ಲಿ ಜೋಜು ಜಾರ್ಜ್ ಪಣಿ
Dasarahalli Kannada Movie: ದಾಸರಹಳ್ಳಿಯಲ್ಲಿ ಧರ್ಮ ಸಂಘರ್ಷ
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.