ರವಿಚಂದ್ರನ್ ಸಂಗೀತ ಲೋಕ
Team Udayavani, May 30, 2018, 10:55 AM IST
ರವಿಚಂದ್ರನ್ ಅವರ ಅಭಿಮಾನಿಗಳು ಖುಷಿಯಾಗುವ ಕಾಲ ಮತ್ತೆ ಬಂದಿದೆ. ಕಳೆದ ವರ್ಷ ರವಿಚಂದ್ರನ್ ಅಭಿನಯದ ಒಂದೇ ಒಂದು ಚಿತ್ರ ಬಿಡುಗಡೆಯಾಗಿತ್ತು. ಅದು “ಹೆಬ್ಬುಲಿ’. ಆದರೆ, ಈ ವರ್ಷ ಅವರ ನಾಲ್ಕು ಚಿತ್ರಗಳು ಬಿಡುಗಡೆಯಾಗುತ್ತಿವೆ. ಈಗಾಗಲೇ ಮೊದಲ ಹಂತವಾಗಿ “ಸೀಜರ್’ ಮತ್ತು “ಬಕಾಸುರ – ಫಾರ್ ಮನಿ’ ಚಿತ್ರಗಳು ಬಿಡುಗಡೆಯಾಗಿವೆ. ಮುಂದಿನ ದಿನಗಳಲ್ಲಿ “ಕುರುಕ್ಷೇತ್ರ’ ಮತ್ತು “ರಾಜೇಂದ್ರ ಪೊನ್ನಪ್ಪ’ ಚಿತ್ರಗಳು ಬಿಡುಗಡೆಯಾಗಲಿವೆ.
ರವಿಚಂದ್ರನ್ ಅವರು ಅದೆಷ್ಟೇ ಹೊಸ ಚಿತ್ರಗಳನ್ನು ಮಾಡಲಿ, ಜನ ಅವರನ್ನು ಇನ್ನೂ ನೆನಪಿಸಿಕೊಳ್ಳುವುದು ಅವರ ಹಾಡುಗಳಿಂದಾಗಿ ಎಂದರೆ ತಪ್ಪಿಲ್ಲ. ಬಹುಶಃ ಕನ್ನಡ ಚಿತ್ರರಂಗದಲ್ಲಿ ಡಾ. ರಾಜಕುಮಾರ್, ಡಾ. ವಿಷ್ಣುವರ್ಧನ್, ಅನಂತ್ ನಾಗ್, ಶ್ರೀನಾಥ್ ಅವರನ್ನು ಹೊರತುಪಡಿಸಿದರೆ, ಅತೀ ಹೆಚ್ಚು ಸೂಪರ್ ಹಿಟ್ ಹಾಡುಗಳು ಸಿಗುವುದು ರವಿಚಂದ್ರನ್ ಅವರ ಚಿತ್ರಗಳಲ್ಲಿ. ರವಿಚಂದ್ರನ್ ಅವರ ಮೊದಲ ಮ್ಯೂಸಿಕಲ್ ಹಿಟ್ “ಪ್ರೇಮಲೋಕ’ವಾದರೂ ಅದಕ್ಕೂ ಮುನ್ನ “ನಾನು ನನ್ನ ಹೆಂಡ್ತಿ’, “ಸ್ವಾಭಿಮಾನ’ ಮುಂತಾದ ಚಿತ್ರಗಳಲ್ಲೂ ಹಲವು ಒಳ್ಳೆಯ ಹಾಡುಗಳು ಇವೆ.
“ಪ್ರೇಮ ಲೋಕ’ದಿಂದ ಪ್ರಾರಂಭವಾಗುವ ರವಿಚಂದ್ರನ್ ಅವರ ಹಿಟ್ ಗೀತೆಗಳ ಪಯಣ ನಿರಂತರವಾಗಿ ಮುಂದುವರೆದಿದೆ. ಈ ಪಯಣದಲ್ಲಿ ದೊಡ್ಡ ಕೊಡುಗೆ ನೀಡಿದವರು ಹಂಸಲೇಖ. “ಪ್ರೇಮ ಲೋಕ’ದಿಂದ “ಪ್ರೀತೋದ್ ತಪ್ಪಾ’ವರೆಗೂ ನಿರಂತರವಾಗಿ ರವಿಚಂದ್ರನ್ ಸಿನಿಮಾಗಳೊಂದಿಗೆ ಹಂಸಲೇಖ ಇದ್ದರು. 25ಕ್ಕೂ ಹೆಚ್ಚು ಚಿತ್ರಗಳಲ್ಲಿ ರವಿಚಂದ್ರನ್ ಮತ್ತು ಹಂಸಲೇಖ ಅವರ ಜೊತೆಯಾಟ ಹಾಡುಗಳ ಮೂಲಕ ಮಾಡಿದಮೋಡಿಯನ್ನು ಕನ್ನಡಿಗರು ಮರೆಯುವುದಕ್ಕೆ ಸಾಧ್ಯವೇ ಇಲ್ಲ.
ಸಾಮಾನ್ಯವಾಗಿ ಒಂದು ಚಿತ್ರದಲ್ಲಿ ಒಂದೆರೆಡು ಹಿಟ್ ಹಾಡುಗಳು ಇರುತ್ತವೆ. ಆದರೆ, ರವಿಚಂದ್ರನ್ ಅವರ ಚಿತ್ರಗಳನ್ನು ನೋಡಿದರೆ ಒಂದೊಂದು ಚಿತ್ರದಲ್ಲಿ ನಾಲ್ಕೈದು ಹಿಟ್ ಹಾಡುಗಳು ಸಿಗುತ್ತವೆ. “ನಾನು ನನ್ನ ಹೆಂಡ್ತಿ’, “ಪ್ರೇಮ ಲೋಕ’, “ರಣಧೀರ’, “ಅಂಜದ ಗಂಡು’, “ಯುಗಪುರುಷ’, “ಯುದ್ಧಕಾಂಡ’, “ಕಿಂದರಿ ಜೋಗಿ’, “ರಾಮಾಚಾರಿ’, “ಶಾಂತಿ ಕ್ರಾಂತಿ’, “ಹಳ್ಳಿ ಮೇಷ್ಟ್ರು’, “ಶ್ರೀರಾಮಚಂದ್ರ’, “ಗಡಿಬಿಡಿ ಗಂಡ’, “ಪುಟ್ನಂಜ’, “ಮನೆ ದೇವ್ರು’, “ಸಿಪಾಯಿ’, “ಕಲಾವಿದ’, “ಯಾರೇ ನೀನು ಚೆಲುವೆ’, “ಪ್ರೀತ್ಸೋದ್ ತಪ್ಪಾ’ ಮುಂತಾದ ಹಲವು ಚಿತ್ರಗಳಲ್ಲಿ ಈ ಮಾತಿಗೆ ಸಾಕ್ಷಿ ಸಿಗುತ್ತದೆ.
ಇವೆಲ್ಲವೂ ಒಂದರ್ಥದಲ್ಲಿ ಆಲ್ಬಂ ಹಿಟ್‌ಗಳೇ. ಬಹುಶಃ ಇಷ್ಟೊಂದು ಸಂಖ್ಯೆಯ ಆಲ್ಬಂ ಹಿಟ್‌ಗಳನ್ನು ಕೊಟ್ಟ ಮತ್ತೂಬ್ಬ ನಟ ಇಡೀ ಭಾರತೀಯ ಚಿತ್ರರಂಗದಲ್ಲೇ ಸಿಗುವುದಿಲ್ಲ.ಈ ಮೊದಲೇ ಹೇಳಿದಂತೆ, ರವಿಚಂದ್ರನ್ ಅವರ ಸಂಗೀತ ಪಯಣದಲ್ಲಿ ಅವರಿಗೆ ಬಲಗೈ ತರಹ ಇದ್ದವರು ಹಂಸಲೇಖ. ಮೇಲೆ ಹೇಳಿದ ಚಿತ್ರಗಳ ಪೈಕಿ, “ನಾನು ನನ್ನ ಹೆಂಡ್ತಿ’ ಚಿತ್ರವನ್ನು ಹೊರತುಪಡಿಸಿದರೆ, ಮಿಕ್ಕೆಲ್ಲಾ ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವುದೂ ಅವರೇ. ಅವರು ಬಿಟ್ಟರೆ ವಿ. ಮನೋಹರ್, ಎಲ್.ಎನ್. ಶಾಸಿ, ರಾಜೇಶ್ ರಾಮನಾಥ್, ವಿ. ಹರಿಕೃಷ್ಣ ಮುಂತಾದವರು ಸಿಗುತ್ತಾರೆ.
ಇದಲ್ಲದೆ ಸ್ವತಃ ರವಿಚಂದ್ರನ್ ಕೆಲವು ಗುನುಗುವಂಥ ಹಾಡುಗಳನ್ನು ಸಂಯೋಜಿಸಿದ್ದಾರೆ. “ನಾನು ನನ್ನ ಹೆಂಡ್ತೀರು’ ಚಿತ್ರದ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾದ ರವಿಚಂದ್ರನ್, ನಂತರದ ದಿನಗಳಲ್ಲಿ “ಓ ನನ್ನ ನಲ್ಲೆ’, “ಏಕಾಂಗಿ’, “ಕೋದಂಡ ರಾಮ’, “ಮಲ್ಲ’, “ಅಹಂ ಪ್ರೇಮಾಸ್ಮಿ’, “ಹಠವಾದಿ’, “ಹೂ’, “ಕ್ರೇಜಿ ಸ್ಟಾರ್’, “ಅಪೂರ್ವ’ ಮುಂತಾದ ಚಿತ್ರಗಳಲ್ಲಿ ಒಂದಿಷ್ಟು ಜನಪ್ರಿಯ ಹಾಡುಗಳು ಸಿಗುತ್ತವೆ.
ಈ ಬಾರಿಯ ರವಿಚಂದ್ರನ್ ಅವರ ಹುಟ್ಟುಹಬ್ಬದ ನೆಪದಲ್ಲಿ(ಮೇ 30) ಅವರ ಹಾಡುಗಳನ್ನು ಮೆಲುಕು ಹಾಕುವ ಪ್ರಯತ್ನವನ್ನು “ರೂಪತಾರಾ’ ಮಾಡಿದೆ. ರವಿಚಂದ್ರನ್ ಚಿತ್ರಗಳಿಂದ ಆಯ್ದ ಜನಪ್ರಿಯ ಡ್ಯುಯೆಟ್ ಮತ್ತು ಸೋಲೋ ಹಾಡುಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಇಲ್ಲಿ ಕೆಲವು ಹಾಡುಗಳು ಮಿಸ್ ಆಗಿವೆ ಎಂದನಿಸಬಹುದು. ಉದಾಹರಣೆಗೆ, “ಯಾರಿವನು ಈ ಮನ್ಮಥನು …’ ಎಂಬ ಸೂಪರ್ ಹಿಟ್ ಹಾಡು.
ಈ ಚಿತ್ರದಲ್ಲಿ ರವಿಚಂದ್ರನ್ ಅವರು ನಟಿಸಿರುವುದು ಹೌದಾದರೂ, ಈ ಹಾಡನ್ನು ನಾಯಕಿ ಹಾಡಿದ್ದಾಳೆಂದು ತೋರಿಸಲಾಗಿದೆ. ಅದೇ ರೀತಿ, “ಗಡಿಬಿಡಿ ಗಂಡ’ ಮತ್ತು “ಸಿಪಾಯಿ’ ಚಿತ್ರಗಳ “ನೀನು ನೀನೇ …’ ಹಾಗೂ “ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ …’ ಹಾಡುಗಳು. ಈ ಹಾಡುಗಳಲ್ಲಿ ರವಿಚಂದ್ರನ್ ಇದ್ದರೂ, ಇಲ್ಲಿ ಬರೀ ಡ್ಯುಯೆಟ್ ಮತ್ತು ಸೋಲೋ ಹಾಡುಗಳನ್ನು ಮಾತ್ರ ನೀಡಲಾಗಿದೆ. ಹಾಗಾಗಿ ಕೆಲವು ಹಾಡುಗಳು ಮಿಸ್ ಆಗಿರಬಹುದು. ಆ ತಪ್ಪನ್ನು ಪಕ್ಕಕ್ಕಿಟ್ಟು, ರವಿಚಂದ್ರನ್ ಅವರ ಸಂಗೀತ ಲೋಕದಲ್ಲೊಮ್ಮೆ ಸುತ್ತು ಹಾಕಿ ಬನ್ನಿ.
ರವಿಚಂದ್ರನ್ ಅವರ ಜನಪ್ರಿಯ ಡ್ಯುಯೆಟ್‌ಗಳು
-ದೂರದ ಊರಿಂದ ಹಮ್ಮಿàರ ಬಂದ (ಸ್ವಾಭಿಮಾನ)
-ಪ್ರೇಮಲೋಕದಿಂದ ಬಂದ ಪ್ರೇಮದ ಸಂದೇಶ (ಪ್ರೇಮ ಲೋಕ)
-ಚೆಲುವೆ ಒಂದು ಕೇಳ್ತೀನಿ ಇಲ್ಲ ಅಂದೆ ಕೊಡ್ತೀಯ (ಪ್ರೇಮ ಲೋಕ)
-ಇದು ನನ್ನ ನಿನ್ನ ಪ್ರೇಮಗೀತೆ ಚಿನ್ನ (ಪ್ರೇಮ ಲೋಕ)
-ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು (ರಣಧೀರ)
-ಒಂದಾನೊಂದು ಕಾಲದಲ್ಲಿ (ರಣಧೀರ)
-ಯಾರೆ ನೀನು ಸುಂದರ ಚೆಲುವೆ (ರಣಧೀರ)
-ಪ್ರೀತಿಯಲ್ಲಿ ಇರೊ ಸುಖ (ಅಂಜದ ಗಂಡು)
-ಏಕೆ ಹೀಗಾಯೊ (ಅಂಜದ ಗಂಡು)
-ಗಂಗೆ ಬಾರೆ ತುಂಗೆ ಬಾರೆ (ಕಿಂದರಿ ಜೋಗಿ)
-ಕೊಟ್ಟಳ್ಳೋ ಕೊಟ್ಟಳಮ್ಮ (ಕಿಂದರಿ ಜೋಗಿ)
-ಕೆಂಪು ತೋಟದಲ್ಲಿ (ಯುದ್ಧ ಕಾಂಡ)
-ರಾಮ ರಾಮ ರಾಮ (ಚಿಕ್ಕೆಜಮಾನ್ರು)
-ಕೊಟ್ಟಳ್ಳೋ ಕೊಟ್ಟಳಮ್ಮ (ಕಿಂದರಿ ಜೋಗಿ)
-ಸ್ವಾತಿ ಮುತ್ತಿನ ಮಳೆ ಹನಿಯೇ (ಬಣ್ಣದ ಗೆಜ್ಜೆ)
-ಪ್ರೇಮ ಗೀಮ ಜಾನೆ ದೋ (ಬಣ್ಣದ ಗೆಜ್ಜೆ)
-ಮಧ್ಯರಾತ್ರಿಲೀ ಹೈವೆರಸ್ತೇಲಿ (ಶಾಂತಿ ಕ್ರಾಂತಿ)
-ಕಾಯಿಕಾಯಿ ನುಗ್ಗೆಕಾಯಿ ಮಹಿಮೆಯೇ (ಹಳ್ಳಿ ಮೇಷ್ಟ್ರು)
-ಹಳ್ಳಿ ಮೇಷ್ಟ್ರೇ ಹಳ್ಳಿ ಮೇಷ್ಟ್ರೇ (ಹಳ್ಳಿ ಮೇಷ್ಟ್ರು)
-ಸಂಕ್ರಾಂತಿ ಬಂತು ರಥೋರಥೋ (ಹಳ್ಳಿ ಮೇಷ್ಟ್ರು)
-ಓಹೋ ವಸಂತ (ಗೋಪಿಕೃಷ್ಣ)
-ಚೋರಿಚೋರಿ (ಗೋಪಿಕೃಷ್ಣ)
-ಗಗನದಲಿ ಮಳೆಯ ದಿನ (ಶ್ರೀರಾಮಚಂದ್ರ)
-ಏನಾಯಿತು ನನಗೀದಿನ ಏನಾಯಿತು (ಶ್ರೀರಾಮಚಂದ್ರ)
-ಬಿದ್ದೆ ಬಿದ್ದೆ ಬಾತ್‌ರೂಮಲ್ಲಿ (ಗಡಿಬಿಡಿ ಗಂಡ)
-ಮುದ್ದಾಡೆಂದಿದೆ ಮಲ್ಲಿಗೆ ಹೂ (ಗಡಿಬಿಡಿ ಗಂಡ)
-ಗಡಿಬಿಡಿ ಗಂಡ ನೀನು (ಗಡಿಬಿಡಿ ಗಂಡ)
-ಆಹಾ ಓಹೋ (ಅಣ್ಣಯ್ಯ)
-ಬೊಂಬೆ ಬೊಂಬೆ (ಅಣ್ಣಯ್ಯ)
-ಕಾಮಾನು ಡಾರ್ಲಿಂಗ್ ಅಯ್ಯೋ ಅಯ್ಯೋ (ಅಣ್ಣಯ್ಯ)
-ರಾಗಿ ಹೊಲದಾಗೆ ಖಾಲಿ ಗುಡಿಸಲು (ಅಣ್ಣಯ್ಯ)
-ಆಕಾಶದಾಗೆ ಯಾರೊ (ರಾಮಾಚಾರಿ)
-ಆರಂಭ ಪ್ರೇಮದಾರಂಭ (ಮನೆದೇವ್ರು)
-ಅಪರಂಜಿ ಚಿನ್ನವೋ (ಮನದೇವ್ರು)
-ನನ್ನವಳು ನನ್ನವಳು (ಚಿನ್ನ)
-ಪ್ರೇಮಾನೆ ನನ್ನ ಪ್ರಾಣ (ಜಾಣ)
-ಪ್ರೇಮಲೋಕದ ಪಾರಿಜಾತವೇ (ಜಾಣ)
-ನಾನು ಪುಟ್ನಂಜ (ಪುಟ್ನಂಜ)
-ಬಂಗಾರದ ಗೊಂಬೆ ನನ್ನ ಹಾಡು ಕೇಳಮ್ಮಾ (ಸಿಪಾಯಿ)
-ಓ ನವಿಲೇ (ಕಲಾವಿದ)
-ಪ್ರೇಮಾ ಪ್ರೇಮಾ (ಕಲಾವಿದ)
-ಕುಶಲವೆ ಕ್ಷೇಮವೇ (ಯಾರೇ ನೀನು ಚೆಲುವೆ)
-ದಿರ್‌ದಿರ್ ತಿಲ್ಲಾನ (ಮಾಂಗಲ್ಯಂ ತಂತು ನಾನೇನ)
-ಪದಪದ ಸೇರಿ (ಮಾಂಗಲ್ಯಂ ತಂತು ನಾನೇನ)
-ಸೋನೆ ಸೋನೆ (ಪ್ರೀತ್ಸೋದ್ ತಪ್ಪಾ)
-ಬಂಗಾರದಿಂದ (ಪ್ರೀತ್ಸೋದ್ ತಪ್ಪಾ)
-ಎಲ್ಲೋ ಅದು ಎಲ್ಲೋ (ಕನಸುಗಾರ)
-ಚೋರಿಯಾಗಿದ ನನ್ನ ದಿಲ್ (ಪ್ರೀತ್ಸೋದ್ ತಪ್ಪಾ)
-ಯಮ್ಮೊ ಯಮ್ಮೊà ನೋಡೆª ನೋಡೆª (ಮಲ್ಲ)
ರವಿಚಂದ್ರನ್ ಅವರ ಜನಪ್ರಿಯ ಸೋಲೋ ಹಾಡುಗಳು
-ಮುಂದೆ ನೀ ಹೋದಾಗ ಹಿಂದೆ ನಾ ಬರುವೆ (ಸ್ವಾಭಿಮಾನ)
-ಯಾರೆ ನೀನು ರೋಜಹೂವೇ (ನಾನು ನನ್ನ ಹೆಂಡ್ತಿ)
-ಕರುನಾಡ ತಾಯಿ ಸದಾ ಚಿನ್ಮಯಿ (ನಾನು ನನ್ನ ಹೆಂಡ್ತಿ)
-ಯಾರೇ ನೀನು ಚೆಲುವೆ (ನಾನು ನನ್ನ ಹೆಂಡ್ತಿ)
-ಗೆಳೆಯರೆ ನನ್ನ ಗೆಳತಿಯರೆ (ಪ್ರೇಮ ಲೋಕ)
-ಮೂರು ಕಾಸಿನ ಕುದುರೆ (ಅಂಜದ ಗಂಡು)
-ಕುಡಿಯೋದೆ ನನ್ನ ವೀಕೆ°ಸ್ಸು (ಯುದ್ಧ ಕಾಂಡ)
-ಸಂಗೀತವೇ ನನ್ನ ದೇವರು (ಯುಗಪುರಷ)
-ಯಾವುದೋ ಈ ಗೊಂಬೆ ಯಾವುದೋ (ಯುಗಪುರುಷ)
-ಭೂಲೋಕವೆಲ್ಲ ನಾನು ಸುತ್ತಿಸುತ್ತಿಸುತ್ತಿ ಬಂದೆ (ಯುಗಪುರುಷ)
-ಕೇಳಿ ಪ್ರೇಮಿಗಳೇ (ಯುಗಪುರುಷ)
-ಸುಂದರಿ ಸುಂದರಿ (ಶ್ರೀರಾಮಚಂದ್ರ)
-ಭೂತವಿಲ್ಲ ಪಿಶಾಚಿಯಿಲ್ಲ (ಶ್ರೀರಾಮಚಂದ್ರ)
-ಅಮ್ಮಯ್ಯ ಅಮ್ಮಯ್ಯ ಬಾರೇ (ಅಣ್ಣಯ್ಯ)
-ಯಾರಿವಳು ಯಾರಿವಳು (ರಾಮಾಚಾರಿ)
-ನಮ್ಮೂರ ಯುವರಾಣಿ (ರಾಮಾಚಾರಿ)
-ರಾಮಚಾರಿ ಹಾಡುವ (ರಾಮಾಚಾರಿ)
-ಬುರುಡೆ ಬುರುಡೆ (ರಾಮಾಚಾರಿ)
-ಹಾಡೊಂದು ಹಾಡಬೇಕಲು (ರಸಿಕ)
-ಅಂಬರವೇರಿ ಅಂಬರವೇರಿ (ರಸಿಕ)
-ಹೇ ರುಕ್ಕಮ್ಮಾ (ಸಿಪಾಯಿ)
-ಯಾರಿಗೆ ಬೇಕು ಈ ಲೋಕ (ಸಿಪಾಯಿ)
-ಚಿಟ್ಟೆಗಳೇ ಚಿಟ್ಟೆಗಳೇ (ಸಿಪಾಯಿ)
-ಹೂವಾ ರೋಜ ಹೂವಾ (ಕಲಾವಿದ)
-ದಸರಾ ಗೊಂಬೆ (ಪುಟ್ನಂಜ)
-ಬುಲ್‌ಬುಲ್‌ಕಿ ಗಿಲ್‌ಗಿಲ್‌ಕಿ ಚಂದ್ರಮುಖೀ (ಯಾರೇ ನೀನು ಚೆಲುವೆ)
-ಯಾರಿವನು ಡ್ರೀಮ್ ಬಾಯ್ (ಮಾಂಗಲ್ಯಂ ತಂತು ನಾನೇನ)
-ಬಣ್ಣಬಣ್ಣದಾ ಲೋಕ (ಏಕಾಂಗಿ)
-ನನ್ನಾಣೆ ಕೇಳೆ ನನ್ನ ಪ್ರಾಣವೇ (ಏಕಾಂಗಿ)
-ಒನ್ಸ್ ಅಪಾನ್ ಎ ಟೈಮ್ (ಏಕಾಂಗಿ)
-ಕರುನಾಡೇ ಕೈ ಚಾಚಿದೆ ನೋಡೆ (ಮಲ್ಲ)
-ಕನಸುಗಾರನ ಒಂದು ಕವನ ಕೇಳಮ್ಮಾ (ಓ ನನ್ನ ನಲ್ಲೆ)
-ಈ ಪ್ರೀತಿಗೇ ಕಣ್ಣು ಇಲ್ಲ (ಓ ನನ್ನ ನಲ್ಲೆ)
-ಒಬ್ಬನೆ ಒಬ್ಬನೆ ಯಜಮಾನ (ಸಾಹುಕಾರ)
-ಆಟ ಹುಡುಗಾಟವೋ (ಹಠವಾದಿ)
-ಯಾರು ಯಾರು (ಹಠವಾದಿ)
-ಪ್ರಪಂಚವು ಕಾಣದು (ಅಪೂರ್ವ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.