ಸಿನಿಮಾ ಬಿಡುಗಡೆ ಕುರಿತು ರವಿಚಂದ್ರನ್‌ ಹೊಸ ಪ್ಲ್ಯಾನ್‌

ಎಲ್ಲಾ ಚಿತ್ರ ಮಂದಿರಗಳಲ್ಲೂ ಮೊದಲು ತೆರೆಕಾಣುವ ಚಿತ್ರವಷ್ಟೇಪ್ರದರ್ಶನ ಕಾಣಲಿ...

Team Udayavani, Oct 28, 2020, 12:16 PM IST

CINEMA-TDY1

“ದರ್ಶನ್‌ ನಟನೆಯ “ರಾಬರ್ಟ್‌’ ಚಿತ್ರವನ್ನು ರಿಲೀಸ್‌ ಮಾಡಿದರೆ ಕರ್ನಾಟಕದ ಎಲ್ಲಾ ಚಿತ್ರಮಂದಿರಗಳಲ್ಲೂ ಅದೊಂದೇ ಸಿನಿಮಾ ಪ್ರದರ್ಶನ ಕಾಣಬೇಕು. ಅದರ ಜೊತೆ ಬೇರೆ ಯಾವ ಸಿನಿಮಾವೂ ಬರಬಾರದು. “ರಾಬರ್ಟ್‌’ ರಿಲೀಸ್‌ ಮಾಡದಿದ್ದರೆ ನಾನು ನನ್ನ ಸಿನಿಮಾ ರಿಲೀಸ್‌ ಮಾಡುತ್ತೇನೆ… ಆಗಲೂ ಅಷ್ಟೇ … ಎಲ್ಲಾ ಚಿತ್ರಮಂದಿರಗಳಲ್ಲೂ ನಂದೊಂದೇ ಸಿನಿಮಾ ಇರಲು ಅವಕಾಶ ಮಾಡಿಕೊಡಬೇಕು …’- ಹೀಗೆ ನೇರವಾಗಿ ಹೇಳಿದರು ಕ್ರೇಜಿಸ್ಟಾರ್‌ ರವಿಚಂದ್ರನ್‌.

ಅವರ ಮಾತುಗಳೇ ಹಾಗೆ, ಏನೇ ಇದ್ದರೂ ಮನಸ್ಸಿನಿಂದ ನೇರವಾಗಿ ಮಾತನಾಡುತ್ತಾರೆ. ಈ ಬಾರಿಯೂ ಅದೇ ರೀತಿ ಮಾತನಾಡಿದರು. ಕೋವಿಡ್ ಲಾಕ್‌ಡೌನ್‌ ತೆರವಾಗಿ ಚಿತ್ರಮಂದಿರಗಳು ಓಪನ್‌ ಆಗಿವೆ. ಸಿನಿಮಾಗಳು ಮರುಬಿಡುಗಡೆಯಾಗುತ್ತಿವೆ. ಆದರೆ, ರವಿಚಂದ್ರನ್‌ ಅವರ ಪ್ರಕಾರ, ಸಿನಿಮಾಗಳ ಮರುಬಿಡುಗಡೆಯಿಂದ ಯಾವುದೇ ಪ್ರಯೋಜನವಿಲ್ಲ. ಅದರ ಬದಲು ಯಾವುದಾದರೂ ಹೊಸ ಸಿನಿಮಾ ಬಿಡುಗಡೆಯಾಗಬೇಕು. ಅದರಲ್ಲೂ ಸ್ಟಾರ್‌ಗಳ, ಮಾಸ್‌ ಆಡಿಯನ್ಸ್‌ ಸೆಳೆಯುವ ನಟನ ಸಿನಿಮಾ ರಿಲೀಸ್‌ ಆದರೆ ಜನ ಚಿತ್ರಮಂದಿರಕ್ಕೆ ಬರುತ್ತಾರೆ. ಸದ್ಯಕ್ಕೆ ದರ್ಶನ್‌ ಅವರ “ರಾಬರ್ಟ್‌’ ರಿಲೀಸ್‌ಗೆ ರೆಡಿ ಇದೆ. ದರ್ಶನ್‌ಗೆ ದೊಡ್ಡ ಅಭಿಮಾನಿ ವರ್ಗವಿದೆ.

ಹಾಗಾಗಿ, ಆ ಚಿತ್ರ ಬಿಡುಗಡೆಯಾಗಲಿ ಎನ್ನುವುದು ರವಿಚಂದ್ರನ್‌ ಮಾತು. “ಜನರಲ್ಲಿ ಈಗ ಕೊರೊನಾ ಭಯವಿಲ್ಲ. ಸಿನಿಮಾ ಬಿಡುಗಡೆಯಾದರೆ ಚಿತ್ರಮಂದಿರಕ್ಕೆ ಬರುತ್ತಾರೆ. ಇವತ್ತಿಗೆ ಜನರನ್ನು ಸೆಳೆಯುವಂತಹ ಸ್ಟಾರ್‌ ಸಿನಿಮಾ ರಿಲೀಸ್‌ ಆಗಬೇಕು. ದರ್ಶನ್‌, “ರಾಬರ್ಟ್‌’ನಂತಹ ಚಿತ್ರಗಳು ಬರಬೇಕು. ಆದರೆ, ಆ ಚಿತ್ರಗಳ ಜೊತೆ ಬೇರೆ ಯಾವ ಚಿತ್ರವೂ ಬರಬಾರದು. ಕರ್ನಾಟಕದ ಅಷ್ಟೂ ಚಿತ್ರಮಂದಿರಗಳಲ್ಲಿ ಆ ಚಿತ್ರ ಮಾತ್ರ ಪ್ರದರ್ಶನ ಕಾಣಬೇಕು. “ರಾಬರ್ಟ್‌’ ಬರದಿದ್ದರೆ, ನಾನು “ರವಿ ಬೋಪಣ್ಣ’ ರಿಲೀಸ್‌ ಮಾಡುತ್ತೇನೆ. ಆಗಲೂ ಅಷ್ಟೇ, ನನ್ನದೊಂದೇ ಚಿತ್ರ ರಿಲೀಸ್‌ ಆಗಬೇಕು. ಅಷ್ಟೂ ಚಿತ್ರಮಂದಿರಗಳಲ್ಲಿ ಅದೊಂದೇ ಪ್ರದರ್ಶನವಾಗಲಿ.

ಸರ್ಕಾರ ಸದ್ಯ ಶೇ 50ರಷ್ಟು ಪ್ರೇಕ್ಷಕರಿಗೆ ಅವಕಾಶ ಮಾಡಿಕೊಟ್ಟಿದೆ. ನನಗೆ ಆ ಬೇಸರವಿಲ್ಲ. 10 ಜನ ಬಂದರೂ ಪರಾವಗಿಲ್ಲ. ಆದರೆ, ಕರ್ನಾಟಕದ ಎಲ್ಲಾ ಚಿತ್ರಮಂದಿರಗಳಲ್ಲಿ ಒಂದೇ ಸಿನಿಮಾ ಪ್ರದರ್ಶನವಾಗಬೇಕು. ಇದಕ್ಕೆ ಅವಕಾಶ ಮಾಡಿಕೊಡುತ್ತಾರಾ’ ಎನ್ನುವುದು ರವಿಚಂದ್ರನ್‌ ಅವರ ಮಾತು. ಇದರ ಹಿಂದೆ ಸದುದ್ದೇಶವಿದೆ. ಯಾವ ಸಿನಿಮಾ ಬಿಡುಗಡೆಯಾಗುತ್ತದೋ, ಆ ಸಿನಿಮಾಕ್ಕೆ ಬೇರೆ ಸಿನಿಮಾಗಳು ತೊಂದರೆ ಮಾಡಿ, ನಿರ್ಮಾಪಕ ನಷ್ಟ ಅನುಭವಿಸಬಾರದು ಎನ್ನುವುದು ಅವರ ಕಾಳಜಿ. ಹಾಗಾಗಿ, ಮೊದಲು ಬಿಡುಗಡೆಯಾದ ಚಿತ್ರಕ್ಕೆ ಪ್ರೋತ್ಸಾಹ ನೀಡಬೇಕು ಎನ್ನುತ್ತಾರೆ ರವಿಚಂದ್ರನ್‌. ಇನ್ನು ಕ್ರೇಜಿಸ್ಟಾರ್‌ ರವಿಚಂದ್ರನ್‌ ಮತ್ತೆ ಶೂಟಿಂಗ್‌ ಮೂಡ್‌ಗೆ ಬಂದಿದ್ದಾರೆ.

ಕೋವಿಡ್ ಲಾಕ್‌ಡೌನ್‌ ತೆರವಾದ ಬಳಿಕ ಅವರ ಹೊಸ ಸಿನಿಮಾ “ಕನ್ನಡಿಗ’ ಮುಹೂರ್ತ ಸೋಮವಾರ ನಡೆದಿದೆ. ಚಿತ್ರ ವನ್ನು ಎನ್‌. ಎಸ್‌ ರಾಜ್‌ಕುಮಾರ್‌ ನಿರ್ಮಿಸುತ್ತಿದ್ದಾರೆ.

ಟಾಪ್ ನ್ಯೂಸ್

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijay Raghavendra is in Rudrabhishekam Movie

Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್‌ ರಾಘವೇಂದ್ರ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

Love Reddy movie released today

Love Reddy: ತೆರೆಗೆ ಬಂತು ʼಲವ್‌ ರೆಡ್ಡಿʼ

tenant kannada movie

Sandalwood: ತೆರೆಗೆ ಬಂತು ʼಟೆನೆಂಟ್ʼ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.