‘ದಿ ಜಡ್ಜ್ ಮೆಂಟ್’: ಲೀಗಲ್ ಥ್ರಿಲ್ಲರ್ ನಲ್ಲಿ ಕ್ರೇಜಿಸ್ಟಾರ್
Team Udayavani, May 22, 2023, 2:42 PM IST
ರವಿಚಂದ್ರನ್ ಮುಖ್ಯಭೂಮಿಕೆಯಲ್ಲಿರುವ “ದಿ ಜಡ್ಜ್ ಮೆಂಟ್’ ಚಿತ್ರದ ಚಿತ್ರೀಕರಣ ಜೋರಾಗಿ ನಡೆಯುತ್ತಿದೆ. ಈ ಹಿಂದೆ “ಅಮೃತ್ ಅಪಾರ್ಟ್‌ಮೆಂಟ್’ ಸಿನಿಮಾವನ್ನು ನಿರ್ದೇಶಿ ಸಿದ್ದ ಗುರುರಾಜ ಬಿ. ಕುಲಕರ್ಣಿ (ನಾಡಗೌಡ) “ದಿ ಜಡ್ಜ್ ಮೆಂಟ್’ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಶೇ 35 ಚಿತ್ರೀಕರಣ ಪೂರ್ಣಗೊಳಿಸಲಾಗಿದೆ.
ಇನ್ನು ಸಿನಿಮಾದ ಹೆಸರೇ ಹೇಳುವಂತೆ “ದ ಜಡ್ಜ್ಮೆಂಟ್’ ಕಾನೂನು ವ್ಯವಸ್ಥೆಯ ಸುತ್ತ ನಡೆಯುವ ಥ್ರಿಲ್ಲರ್ ಕಥಾಹಂದರದ ಸಿನಿಮಾ. ಕನ್ನಡದಲ್ಲಿ ಅಪರೂಪ ಎಂದೇ ಹೇಳಲಾಗುತ್ತಿರುವ ಲೀಗಲ್ ಥ್ರಿಲ್ಲರ್ ಶೈಲಿಯ ಸಿನಿಮಾದಲ್ಲಿ ಮೊದಲ ಬಾರಿಗೆ ರವಿಚಂದ್ರನ್ ಅಭಿನಯಿಸುತ್ತಿದ್ದಾರೆ.
ನಮ್ಮ ಲೀಗಲ್ ಸಿಸ್ಟಂನಲ್ಲಿರುವ ಒಂದಷ್ಟು ಥ್ರಿಲ್ಲರ್ ಎಲಿಮೆಂಟ್ಸ್ ಇಟ್ಟುಕೊಂಡು ಈ ಸಿನಿಮಾ ಮಾಡಲಾಗುತ್ತಿದೆ. ನಿರ್ದೇಶಕರು ನನ್ನನ್ನು ಮುಂದಿಟ್ಟುಕೊಂಡು, ಅವರು ಹಿಂದೆಯಿದ್ದು ಹೊಸಥರದ ಸಿನಿಮಾವನ್ನು ಮಾಡಲು ಹೊರಟಿದ್ದಾ. ಇಲ್ಲಿ ನಾನು, ದಿಗಂತ್ ಸೇರಿ ಅನೇಕರು ನಟಿಸುತ್ತಿದ್ದೇವೆ. ಆರಂಭದಲ್ಲಿ ದಿಗಂತ್ ತಪ್ಪಿತಸ್ಥ ಎಂದು ನಾನು ಭಾವಿಸಿ, ಆತನಿಗೆ ಶಿಕ್ಷೆ ಕೊಡಿಸಲು ಮುಂದಾಗುತ್ತೇನೆ. ಆ ನಂತರ ಆತ ನಿರಾಪರಾಧಿ ಎಂದು ತಿಳಿದು ಆತನನ್ನು ಶಿಕ್ಷೆಯಿಂದ ತಪ್ಪಿಸಲು ಪ್ರಯತ್ನಿಸುತ್ತೇನೆ’ ಎಂದು ಚಿತ್ರದ ಬಗ್ಗೆ ಹೇಳಿದರು
ನಾಯಕ ದಿಗಂತ್ ಮಾತನಾಡಿ, “ನನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವ ಪಾತ್ರ ನನ್ನದು. ನನ್ನ ನಿಜ ಜೀವನದಲ್ಲೂ ನನ್ನದಲ್ಲದ ತಪ್ಪು ನನ್ನ ಮೇಲೆ ಬಂದಿತ್ತು’ ಎಂದು ಪಾತ್ರದ ಬಗ್ಗೆ ಹೇಳಿಕೊಂಡರು.
ಇನ್ನು, ಚಿತ್ರದಲ್ಲಿ ಧನ್ಯಾ ರಾಮ್ ಕುಮಾರ್ ಇಲ್ಲಿ ವಿದೇಶದಿಂದ ಬಂದು ಯಾವುದೋ ಒಂದು ಘಟನೆಯಲ್ಲಿ ಸಿಲುಕಿಕೊಳ್ಳುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಚಿತ್ರದಲ್ಲಿ ಮೇಘನಾ ಗಾಂವ್ಕರ್ ಕೂಡಾ ನಟಿಸಿದ್ದು, ರವಿಚಂದ್ರನ್ ಪತ್ನಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ನಿರ್ದೇಶಕ ಗುರುರಾಜ ಕುಲಕರ್ಣಿ, “ಇದೊಂದು ಲೀಗಲ್ ಥ್ರಿಲ್ಲರ್ ಶೈಲಿಯ ಸಿನಿಮಾ. ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ನಡೆ ಯುವ ಕೆಲ ಬೆಳವಣಿಗೆಗಳು ಮತ್ತು ಬದಲಾವಣೆಗಳ ಸುತ್ತ ಇಡೀ ಸಿನಿಮಾ ನಡೆಯುತ್ತದೆ. ಕನ್ನಡದಲ್ಲಿ ಇದೊಂದು ಅಪರೂಪದ ಪ್ರಯತ್ನ. ಸಾಕಷ್ಟು ಥ್ರಿಲ್ಲಿಂಗ್ ಅಂಶಗಳ ಜೊತೆ ಒಂದು ಮೆಸೇಜ್ ಕೂಡ ಸಿನಿಮಾದಲ್ಲಿದೆ’ ಎಂದರು.
“ದ ಜಡ್ಜ್ಮೆಂಟ್’ ಸಿನಿಮಾದಲ್ಲಿ ನಟ ರವಿಚಂದ್ರನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡರೆ, ಉಳಿದಂತೆ ದಿಗಂತ್, ಲಕ್ಷ್ಮೀ ಗೋಪಾಲಸ್ವಾಮಿ, ಧನ್ಯಾ ರಾಮಗ ಕುಮಾರ್, ಟಿ. ಎಸ್ ನಾಗಾಭರಣ, ರೂಪಾ ರಾಯಪ್ಪ, ಪ್ರಕಾಶ್ ಬೆಳವಾಡಿ, ರಂಗಾಯಣ ರಘು, ರಾಜೇಂದ್ರ ಕಾರಂತ್, ಕೃಷ್ಣ ಹೆಬ್ಟಾಳೆ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಈ ಹಿಂದೆ “ಆ್ಯಕ್ಸಿಡೆಂಟ್’, “ಲಾಸ್ಟ್‌ಬಸ್’, “ಅಮೃತ್ ಅಪಾರ್ಟ್‌ಮೆಂಟ್’ ಸಿನಿಮಾಗಳನ್ನು ನಿರ್ಮಿಸಿದ್ದ “ಜಿ 9 ಕಮ್ಯುನಿಕೇ ಶನ್ ಮೀಡಿಯಾ ಆ್ಯಂಡ್ ಎಂಟರ್‌ಟೈನ್ಮೆಂಟ್’ ಬ್ಯಾನರಿನಲ್ಲಿ ನಿರ್ಮಾಣವಾಗುತ್ತಿರುವ ನಾಲ್ಕನೇ ಸಿನಿಮಾ ಇದಾಗಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sandalwood: ಮಾಸ್ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.