Sandalwood; ಟೈಟಲ್ ಟ್ರ್ಯಾಕ್ ನಲ್ಲಿ ‘ರವಿಕೆ ಪ್ರಸಂಗ’
Team Udayavani, Sep 23, 2023, 11:30 AM IST
ಹೆಣ್ಣು ಮಕ್ಕಳು ನಿತ್ಯ ಧರಿಸುವ ಸೀರೆ, ಓಲೆ, ಬಳೆ, ಗೆಜ್ಜೆ ಹೀಗೆ ಎಲ್ಲದರ ಮೇಲೂ ಹಾಡುಗಳು ಬಂದಿರುವುದು ನಿಮಗೆ ಗೊತ್ತಿರಬಹುದು. ಆದರೆ ಹೆಣ್ಣು ಮಕ್ಕಳು ಸಾಕಷ್ಟು ಗಮನ ಕೊಡುವ, ಕಾಳಜಿ ವಹಿಸುವ ರವಿಕೆ ಬಗ್ಗೆ ಇಲ್ಲಿಯವರೆಗೂ ಯಾವುದೇ ಹಾಡು ಬಂದಿಲ್ಲ. ಆದರೆ ಇದೇ ಮೊದಲ ಬಾರಿಗೆ ರವಿಕೆ ಮೇಲೆ ಕೂಡ ಹಾಡೊಂದು ಮೂಡಿಬಂದಿದೆ! ಅದು “ರವಿಕೆ ಪ್ರಸಂಗ’ ಸಿನಿಮಾದಲ್ಲಿದೆ.
ಹೌದು, ರವಿಕೆ ಬಗ್ಗೆಯೇ ಕುರಿತಾಗಿ ನಿರ್ಮಾಣವಾಗುತ್ತಿರುವ “ರವಿಕೆ ಪ್ರಸಂಗ’ ಸಿನಿಮಾದಲ್ಲಿ ಇಂಥದ್ದೊಂದು ವಿಭಿನ್ನ ಹಾಡು ಮೂಡಿಬಂದಿದೆ. ಇತ್ತೀಚೆಗೆ ಈ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಗಾಯಕಿ ಚೈತ್ರಾ ಹಾಗೂ ಚೇತನ್ ನಾಯಕ್ ಈ ಹಾಡಿಗೆ ಧ್ವನಿಯಾಗಿದ್ದು, ಕಿರಣ್ ಕಾವೇರಪ್ಪ ಅವರು ಬರೆದಿರುವ “ರವಿ.., ರವಿ.., ರವಿಕೆ ಪ್ರಸಂಗ…’ ಎಂಬ ಟೈಟಲ್ ಸಾಂಗ್‌ನಲ್ಲಿ ರವಿಕೆಯ ಮಹತ್ವ, ಅದರ ಹಿಂದಿನ ಮಾನಸಿಕತೆ ಎಲ್ಲವನ್ನೂ ಸಾಲುಗಳಲ್ಲಿ ಬಣ್ಣಿಸಲಾಗಿದೆ. ವಿನಯ್ ಶರ್ಮ ಸಂಗೀತ ಸಂಯೋಜನೆಯಲ್ಲಿ ಈ ಹಾಡು ಮೂಡಿಬಂದಿದೆ.
“ದೃಷ್ಟಿ ಮೀಡಿಯಾ ಪೊ›ಡಕ್ಷನ್’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ “ರವಿಕೆ ಪ್ರಸಂಗ’ ಸಿನಿಮಾಕ್ಕೆ ಸಂತೋಷ್ ಕೊಡಂಕೇರಿ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. “ಈಗಾಗಲೇ ಈ ಸಿನಿಮಾದ ಬಹುತೇಕ ಎಲ್ಲ ಕೆಲಸಗಳು ಪೂರ್ಣಗೊಂಡಿದ್ದು, ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ.
ಸಿನಿಮಾದ ಕಥೆ ಮತ್ತು ಅದರ ವಿಷಯವನ್ನು ಈ ಹಾಡಿನಲ್ಲಿ ಚಿತ್ರಿಸಲಾಗಿದೆ. ಶೀಘ್ರದಲ್ಲಿಯೇ ಸಿನಿಮಾವನ್ನು ತೆರೆಗೆ ಬರಲಿದೆ’ ಎಂಬುದು ನಿರ್ದೇಶಕ ಸಂತೋಷ್ ಮಾತು.
ಇನ್ನು “ರವಿಕೆ ಪ್ರಸಂಗ’ ಸಿನಿಮಾದಲ್ಲಿ ಗೀತಾ ಭಾರತಿ ಭಟ್ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ. “ಮಹಿಳೆಯರ ಮನಮುಟ್ಟುವ ಸಿನಿಮಾ ಇದಾಗಿದೆ. ನನ್ನ ಪಾತ್ರ ತುಂಬ ಚೆನ್ನಾಗಿ ಮೂಡಿಬಂದಿದೆ. ಈಗ ಬಿಡುಗಡೆಯಾಗಿರುವ ರವಿಕೆ ಹಾಡು ಹಾಗೂ ಚಿತ್ರ ಎಲ್ಲರ ಮನ ಗೆಲ್ಲಲಿದೆ’ ಎಂಬುದು ನಾಯಕಿ ಗೀತಾ ಭಾರತಿ ಭಟ್ ವಿಶ್ವಾಸದ ಮಾತು.
ಚಿತ್ರಕ್ಕೆ ಕಥೆ ಹಾಗೂ ಸಂಭಾಷಣೆ ಬರೆದಿರುವ ಪಾವನ ಸಂತೋಷ್, ನಟಿ ಪದ್ಮಜಾರಾವ್, ಗಾಯಕಿ ಚೈತ್ರಾ ಮೊದಲಾದವರು ಈ ಸಿನಿಮಾದ ಕಥೆ ಮತ್ತು ಹಾಡಿನ ಬಗ್ಗೆ ಸಾಕಷ್ಟು ನಿರೀಕ್ಷೆಯ ಮಾತುಗಳನ್ನಾಡಿದರು.
“ರವಿಕೆ ಪ್ರಸಂಗ’ ಸಿನಿಮಾದಲ್ಲಿ ಗೀತಾ ಭಾರತಿ ಭಟ್ ಅವರೊಂದಿಗೆ ಸಂಪತ್ ಮೈತ್ರೇಯ, ರಾಕೇಶ್ ಮಯ್ಯ, ಸುಮನ್ ರಂಗನಾಥ್, ಪದ್ಮಜಾರಾವ್, ರಘು ಪಾಂಡೇಶ್ವರ್, ಕೃಷ್ಣಮೂರ್ತಿ ಕವತ್ತಾರ್, ಪ್ರವೀಣ್ ಅಥರ್ವ, ಮೀನಾ ಮುಂತಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sathish Ninasam: ಅಶೋಕನಿಗೆ ನೀನಾಸಂ ಸತೀಶ್ ಸಾಥ್
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್ ಬಗ್ಗೆ ರಮ್ಯಾ ಮಾತು
Toxic Movie: ಫ್ಯಾನ್ಸ್ ನಶೆಯೇರಿಸಿದ ಯಶ್; ಹಾಲಿವುಡ್ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.