ಬೆಂಕೋಶ್ರೀ ಪುತ್ರ ನಟನೆಗೆ ರೆಡಿ
Team Udayavani, Jan 24, 2019, 5:47 AM IST
ಸಾಮಾನ್ಯವಾಗಿ ಸಿನಿಮಾಗಳಲ್ಲಿ ನಾಯಕ ನಟನಾಗಬೇಕೆನ್ನುವವರು ಫೋಟೋಶೂಟ್ ಮಾಡಿಸುವುದು, ಫ್ಯಾಷನಿಂಗ್, ಮಾಡೆಲಿಂಗ್, ಆಡಿಷನ್, ಹೀಗೆ ಹತ್ತಾರು ಥರದ ಪ್ರಯತ್ನ ಮಾಡುವುದು ಸಹಜ. ಆ ಮೂಲಕ ಅಭಿನಯದ ಕಡೆಗಿರುವ ತಮ್ಮ ತುಡಿತ, ಆಸಕ್ತಿಯನ್ನು ಪ್ರದರ್ಶಿಸುವುದೂ ಸಾಮಾನ್ಯ. ಆದರೆ, ನಿರ್ಮಾಪಕ ಬಿ.ಕೆ ಶ್ರೀನಿವಾಸ್ (ಬೆಂಕೋಶ್ರೀ) ಮಾತ್ರ ಇದೆಲ್ಲದಕ್ಕಿಂತ ವಿಭಿನ್ನವಾಗಿ ತಮ್ಮ ಪುತ್ರ ಅಕ್ಷರ್‌ನನ್ನು ಮೊಟ್ಟ ಮೊದಲು ಕ್ಯಾಲೆಂಡರ್ ಮೂಲಕ ಸಿನಿಪ್ರಿಯರಿಗೆ ಪರಿಚಯಿಸುತ್ತಿದ್ದಾರೆ.
ಹೌದು, ಕನ್ನಡದಲ್ಲಿ ಈಗಾಗಲೇ ಆರು ಚಿತ್ರಗಳನ್ನು ನಿರ್ಮಿಸಿರುವ, ಹಲವು ಚಿತ್ರಗಳನ್ನು ಹಂಚಿಕೆ ಮಾಡಿರುವ ಬೆಂಕೋಶ್ರೀ, ತಮ್ಮ ಪುತ್ರ ಅಕ್ಷರ್‌ನನ್ನು ಪರಿಚಯಿಸುವ ಸಲುವಾಗಿ 12 ವಿಭಿನ್ನ ಗೆಟಪ್‌ಗ್ಳಿರುವ ಕ್ಯಾಲೆಂಡರ್ ಅನ್ನು ಬಿಡುಗಡೆಗೊಳಿಸಿದ್ದಾರೆ. ತಮ್ಮ ಪುತ್ರ ತೆರೆಮೇಲೆ ಮತ್ತು ಕ್ಯಾಮರಾ ಕಣ್ಣಲ್ಲಿ ಹೇಗೆ ಕಾಣುತ್ತಾನೆ ಎಂಬುದನ್ನು ನೋಡುವ ಸಲುವಾಗಿಯೇ ಬೆಂಕೋಶ್ರೀ ಇಂಥದ್ದೊಂದು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ಇನ್ನು ಈ ಕ್ಯಾಲೆಂಡರ್‌ನಲ್ಲಿ ಪ್ರತಿ ತಿಂಗಳಿಗೊಂದರಂತೆ ಒಟ್ಟು ಹನ್ನೆರಡು ಪುಟಗಳಿದ್ದು, ಪ್ರತಿ ತಿಂಗಳ ಪುಟದಟಲ್ಲೂ ಅಕ್ಷರ್ ಒಂದೊಂದು ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದು, ಪ್ರತಿ ಪುಟಗಳು ಒಂದು ಪುಟ್ಟ ಕಥೆ ಹೇಳುವಂತೆ ಕ್ಯಾಲೆಂಡರ್‌ನ್ನು ವಿನ್ಯಾಸಗೊಳಿಸಿರುವುದು ವಿಶೇಷ. ಕ್ಯಾಲೆಂಡರ್ ಹೊರತಂದ ಖುಷಿಯಲ್ಲಿ ಮಾತನಾಡಿದ ಅಕ್ಷರ್, “ಕಲಾದನಾಗುವವನು ಎಲ್ಲಾ ಪಾತ್ರಕ್ಕೆ ಒಗ್ಗಿಕೊಳ್ಳುತ್ತಾನೆಂದು ತೋರಿಸುವ ಸಲುವಾಗಿ ಇದನ್ನು ಸಿದ್ದಪಡಿಸಲಾಗಿದೆ.
ಹಾಗಂತ ನಮ್ಮ ತಂದೆ ನಿರ್ಮಾಣ ಮಾಡುವ ಸಿನಿಮಾಕ್ಕೂ ಇದಕ್ಕೂ ಸಂಬಂಧವಿಲ್ಲ. ಸ್ವಯಂ ಪರಿಚಯಿಸಿಕೊಳ್ಳುವ ಸಲುವಾಗಿ ಈ ರೀತಿ ಮಾಡಬೇಕಾಯಿತು. ಇದಕ್ಕಾಗಿ ಐದು ತಿಂಗಳು ತಂಡದೊಂದಿಗೆ ಶ್ರಮಿಸಿರುವುದಾಗಿ ಹೇಳುತ್ತಾರೆ ಅಕ್ಷರ್. 2019ರ ಈ ಕ್ಯಾಲೆಂಡರ್ ಅನ್ನು ನಿರ್ದೇಶಕ ಸಿಂಪಲ್ ಸುನಿ ಮತ್ತು ಅದರ ಮೇಕಿಂಗ್ ವಿಡಿಯೋವನ್ನು ನಿರ್ದೇಶಕ ಸತ್ಯ ಪ್ರಕಾಶ್ ಅನಾವರಣಗೊಳಿಸಿ, ಹೊಸಬರ ಹೊಸ ಪ್ರಯತ್ನಕ್ಕೆ ಶುಭ ಹಾರೈಸಿದರು.
ಇದೇ ವೇಳೆ ಮಾತನಾಡಿದ ನಿರ್ಮಾಪಕ ಬೆಂಕೋಶ್ರೀ, “ಅಕ್ಷರ್ ಯಾವ ತರಹದ ಪಾತ್ರಗಳಿಗೆ ಹೊಂದಿಕೊಳ್ಳುತ್ತಾರೆ ಎನ್ನುವ ಹಾಗೆ ಕಲ್ಪನೆಗೆ ತಕ್ಕಂತೆ ಫೋಟೋ ಶೂಟ್ ಮಾಡಿಸಲಾಗಿದ್ದು, ಇದೇ ವರ್ಷದಲ್ಲಿ ಮಗನ ನಾಯಕತ್ವದಲ್ಲಿ ಎರಡು ಸಿನಿಮಾಗಳನ್ನು ನಿರ್ಮಾಣ ಮಾಡಲು ಯೋಚಿಸಿದ್ದು, ಒಂದು ಚಿತ್ರದಲ್ಲಿ ಹೊಸಬರೊಂದಿಗೆ ಮತ್ತೂಂದು ಅನುಭವಿ ತಂಡದೊಂದಿಗೆ ಮಾಡಲಿದ್ದೇವೆ. ಈ ಸಿನಿಮಾ ವಿವರಗಳನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದು’ ಎಂದಷ್ಟೇ ಹೇಳುತ್ತಾರೆ ಬೆಂಕೋಶ್ರೀ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ
PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್
Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ
Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು
Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್ ಸಿಬಂದಿ ಪರಾರಿ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.