ʼಯುಐʼ ಮೊದಲು ʼಎʼ ಸರ್ಪ್ರೈಸ್ ಕೊಟ್ಟ ಉಪ್ಪಿ: ರೀ- ರಿಲೀಸ್ ಆಗಲಿದೆ ಸೂಪರ್ ಹಿಟ್ ಚಿತ್ರ
Team Udayavani, May 11, 2024, 10:51 AM IST
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಬಹು ಸಮಯದ ಬಳಿಕ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ʼಯುಐʼ ಸಿನಿಮಾದ ಗ್ರಾಫಿಕ್ಸ್ ಕೆಲಸಗಳು ಭರದಿಂದ ಸಾಗುತ್ತಿದೆ. ಈಗಾಗಲೇ ಸಿನಿಮಾದ ಹಾಡು,ಟೀಸರ್ ಗಳು ಸಿಕ್ಕಾಪಟ್ಟೆ ಹೈಪ್ ಹೆಚ್ಚಿಸಿದೆ.
ಉಪೇಂದ್ರ ಅವರು ನಿರ್ದೇಶನ ಮಾಡುವ ಸಿನಿಮಾಗಳಿಗೆ ನೋಡುಗರ ವರ್ಗ ಹೆಚ್ಚೇ ಇರುತ್ತದೆ. ʼಯುಐʼ ಮೂಲಕ ಮತ್ತೊಮ್ಮೆ ಉಪ್ಪಿ ನಿರ್ದೇಶನದಲ್ಲಿ ಮಿಂಚಲಿದ್ದಾರೆ. ಈ ಸಿನಿಮಾ ಚರ್ಚೆಯಲ್ಲಿರುವಾಗಲೇ ʼಬುದ್ಧಿವಂತʼ ಮತ್ತೊಂದು ಸರ್ಪ್ರೈಸ್ ನೀಡಿದ್ದಾರೆ.
1998 ರಲ್ಲಿ ಉಪ್ಪಿ ನಿರ್ದೇಶನ ಮಾಡಿ ಎಲ್ಲೆಡೆ ಮಿಂಚಿದ ʼಎʼ ಸಿನಿಮಾವನ್ನು ನೀವೆಲ್ಲಾ ನೋಡಿರಬಹುದು. 25 ವರ್ಷಗಳ ಹಿಂದೆ ರಿಲೀಸ್ ಆಗಿದ್ದರೂ ಇಂದಿಗೂ ಚಂದನವನದಲ್ಲಿ ʼಎʼ ಸಿನಿಮಾಕ್ಕೆ ಪ್ರತ್ಯೇಕವಾದ ಫ್ಯಾನ್‌ಬೇಸ್ ಇದೆ. ಉಪೇಂದ್ರ ಅವರು ನಿರ್ದೇಶಿಸಿ, ಹೀರೋ ಆಗಿ ಅಭಿನಯಿಸಿದ ಚೊಚ್ಚಲ ʼಎʼ ಸಿನಿಮಾದ ಒಂದೊಂದು ದೃಶ್ಯಗಳು ಅಂದು ಬೆಳ್ಳಿಪರದೆಯಲ್ಲಿ ಮೋಡಿ ಮಾಡಿತ್ತು.
ಅಂದು ರಿಲೀಸ್ ಆಗಿದ್ದ ʼಎʼ ಮತ್ತೊಮ್ಮೆ ತೆರೆಗೆ ಬರಲಿದೆ. ಹೌದು ಅಂದು ದೊಡ್ಡ ಹಿಟ್ ಆಗಿ ತೆಲುಗಿಗೂ ಡಬ್ ಆಗಿ ಮಿಂಚಿದ್ದ ಕನ್ನಡದ ʼಎʼ ರೀ ರಿಲೀಸ್ ಆಗುವ ತಯಾರಿಯಲ್ಲಿದೆ. ʼಎʼ ಸಿನಿಮಾವನ್ನು ಇಂದಿನ ಕಾಲಕ್ಕೆ ತಕ್ಕಂತೆ ಸಿದ್ಧಪಡಿಸುವ ಕೆಲಸಗಳು ನಡೆದಿದೆ. ಡಿಜಿಟಲ್ ರೂಪದಲ್ಲಿ ಸಿನಿಮಾವನ್ನು ತೆರೆಗೆ ತರುವ ಪ್ರಯತ್ನ ನಡೆದಿದೆ.
ಮೂಲಗಳ ಪ್ರಕಾರ ಮುಂದಿನ ವಾರವೇ ʼಎʼ ಸಿನಿಮಾ ತೆರೆಗೆ ಅಪ್ಪಳಿಸಲಿದೆ. ಉಪೇಂದ್ರ ಅವರು ಸಿನಿಮಾದ ತುಣಕನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ʼಎʼ ಸಿನಿಮಾವನ್ನು ಬಿ. ಜಗನ್ನಾಥ್ ಹಾಗೂ ಬಿ. ಜಿ ಮಂಜುನಾಥ್ ಅಂದಾಜು 1.25 ಕೋಟಿ ಬಜೆಟ್ ನಲ್ಲಿ ನಿರ್ಮಾಣ ಮಾಡಿದ್ದರು. ಅಂದು ಸಿನಿಮಾ 20 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿತ್ತು.
‘ಎ’ ಸಿನಿಮಾದಲ್ಲಿ ಚಾಂದಿನಿ, ಅರ್ಚನಾ ನಾಯಕಿಯರಾಗಿ ನಟಿಸಿದ್ದರು. ‘ಕಡ್ಡಾಯವಾಗಿ ಬುದ್ಧಿವಂತರಿಗೆ ಮಾತ್ರ’ ಎನ್ನುವ ಕ್ಯಾಪ್ಷನ್ ಸಿನಿಮಾಕ್ಕೆ ನೀಡಲಾಗಿತ್ತು.
ಗಣೇಶನ ವಿಗ್ರಹಕ್ಕೆ ಗನ್ ಇಟ್ಟು ಹೇಳುವ ಡೈಲಾಗ್, ʼಪ್ರಪಂಚ ತುಂಬಾ ದೊಡ್ಡದಿದೆʼ ಎನ್ನುವ ಡೈಲಾಗ್ ಸೇರಿದಂತೆ ಉಪ್ಪಿ ಅವರ ಅಭಿನಯ ಹಾಗೂ ಗುರುಕಿರಣ್ ಅವರ ಕ್ಲಾಸ್ ಮ್ಯೂಸಿಕ್ ನಿಂದ ʼಎʼ ಚಂದನವನದಲ್ಲಿ ಎವರ್ ಗ್ರೀನ್ ಸೂಪರ್ ಹಿಟ್ ಸಿನಿಮಾವಾಗಿ ಇಂದಿಗೂ ಉಳಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Toxic Movie: ʼಟಾಕ್ಸಿಕ್ʼನಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು?
Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್ ಮಾಡಿದ ಯಶ್ ʼಟಾಕ್ಸಿಕ್ʼ
Teertharoopa Tandeyavarige: ತೀರ್ಥರೂಪರ ಜೊತೆ ರಚನಾ
Sathish Ninasam: ಅಶೋಕನಿಗೆ ನೀನಾಸಂ ಸತೀಶ್ ಸಾಥ್
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.