ರೆಬಲ್ ಹುಡುಗರ ರಿವೇಂಜ್ ಸ್ಟೋರಿ!
Team Udayavani, Nov 28, 2019, 6:01 AM IST
ನಟ ಅಂಬರೀಶ್ ತಮ್ಮ ಚಿತ್ರದಲ್ಲಿ ರೆಬಲ್ ಪಾತ್ರಗಳ ಮೂಲಕವೇ ಪ್ರೇಕ್ಷಕರಿಗೆ ಇಷ್ಟವಾಗಿ “ರೆಬಲ್ ಸ್ಟಾರ್’ ಅನ್ನೋ ಬಿರುದು ಪಡೆದುಕೊಂಡವರು. ಅಂಬರೀಶ್ ಚಿತ್ರಗಳಲ್ಲಿ ಅವರ ಅಭಿಮಾನಿಗಳಿಗಂತೂ “ರೆಬಲ್’ ಪಾತ್ರಗಳು ಇನ್ನಿಲ್ಲದಂತೆ ಆಸ್ವಾಧಿಸುತ್ತಿದ್ದರು. ಈಗ ಅಂಥದ್ದೆ ರೆಬಲ್ ಪಾತ್ರವನ್ನು ನೆನಪಿಸುವಂತೆ ಹೊಸ ಹುಡುಗರ ಚಿತ್ರವೊಂದು ತೆರೆಗೆ ಬರುತ್ತಿದೆ. ಅಂದಹಾಗೆ, ಆ ಚಿತ್ರದ ಹೆಸರು “ರೆಬಲ್ ಹುಡುಗರು’.
ಬಹುತೇಕ ಹೊಸಬರೇ ಸೇರಿಕೊಂಡು ಸಿದ್ದಪಡಿಸುತ್ತಿರುವ ಈ ಚಿತ್ರ ಪ್ರೀತಿ-ಸ್ನೇಹದ ಸುತ್ತ ನಡೆಯುತ್ತದೆಯಂತೆ. ನಾಲ್ವರು ಕುಚುಕು ಗೆಳಯರ ನಡುವೆ ಒಬ್ಬನ ಕೊಲೆಯಾಗುತ್ತದೆ. ಇದರಿಂದ ಮೂವರು ಕೋಪಗೊಂಡು ಕೊಲೆಯ ಹಿನ್ನಲೆ ಹುಡುಕಲು ಹೋದಾಗ ಅಪರಾಧಿ ಯಾರೆಂದು ಗೊತ್ತಾಗುತ್ತಾದೆ. ಮುಂದೆ ರೆಬಲ್ ಆಗಿ ಆ ಹುಡುಗರು ಹೇಗೆ ಸೇಡು ತೀರಿಸಿಕೊಳ್ಳುತ್ತಾರೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ.
ಧನುಷ್ ಗೌಡ. ವಿ ರಚನೆ, ನಿರ್ದೇಶನದ ಸಾರಥ್ಯ ವಹಿಸಿಕೊಂಡಿದ್ದಾರೆ. ಗೆಳೆಯರುಗಳಾಗಿ ವೇಣು. ವಿ ಡಿ ಹೆಚ್, ಪ್ರಶಾಂತ್ ಸಾಹು, ದರ್ಶನ್ ಗೌಡ ಮತ್ತು ಶ್ರೀನಿವಾಸ ಗೌಡ. ನಾಯಕಿಯಾಗಿ ಶೃತಿ ಗೌಡ. ಖಳನಾಗಿ ಅಭಿ. ಉಳಿದಂತೆ ಹೊನ್ನವಳ್ಳಿ ಕೃಷ್ಣ, ಹಾವಳಿ ಹೇಮು, ಶ್ರೀಸಾಸ್ತ, ತೇಜಸ್ ಶೆಟ್ಟಿ, ವಿಘ್ನೇಶ್ ವಿಕ್ಕಿ, ಹರ್ಷ ಗುಬ್ಬಿ, ಯಶವಂತ್, ನಚಿಕೇತ್ ಗೌಡ ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.
“ಆರ್‌ಜೆ ಸಿನಿ ಕ್ರಿಯೇಶನ್ಸ್’ ಮೂಲಕ ಶ್ರೀನಿವಾಸಗೌಡ ವಿ.ಪಿ. ನಿರ್ಮಾಣ ಮಾಡಿರುವ ಚಿತ್ರವು ಮುಂದಿನ ವರ್ಷದ ಮಾರ್ಚ್ ತಿಂಗಳಲ್ಲಿ ತೆರೆ ಕಾಣುವ ಸಾಧ್ಯತೆ ಇದೆ. ಮಂಡ್ಯ, ಮದ್ದೂರು ಕಡೆಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಇತ್ತೀಚೆಗೆ ಈ ಚಿತ್ರದ ಪ್ರಚಾರದ ಮೊದಲ ಹಂತವಾಗಿ ಟೀಸರ್‌ನ್ನು ನಟ ಅಭಿಷೇಕ್ ಅಂಬರೀಷ್ ಅನಾವರಣಗೊಳಿಸಿ “ರೆಬಲ್ ಹುಡುಗರ’ ತಂಡಕ್ಕೆ ಶುಭ ಹಾರೈಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
Professional Life: ಚಿತ್ರರಂಗಕ್ಕೆ ನಟ ದರ್ಶನ್ ಮರುಪ್ರವೇಶ!
Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ
Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್.ಷಡಾಕ್ಷರಿ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.