ರೀಲ್‌ ಮದುವೆ ಅನುಭವ ಅನನ್ಯ!


Team Udayavani, May 7, 2018, 12:45 PM IST

Harshika-(1).jpg

ಅಂತೂ ಇಂತೂ ಹರ್ಷಿಕಾ ಪೂಣಚ್ಚ ಲೈಫ‌ಲ್ಲಿ ಮದುವೆ ಅಗಿ, ಹಾಗೊಂದು ಅನನ್ಯ ಅನುಭವ ಪಡೆದುಕೊಂಡಿದ್ದಾರೆ! ಹೀಗೆ‌ಂದಾಕ್ಷಣ ಅರೇ,  ಹರ್ಷಿಕಾ ಮದುವೆ ಆಗೋಯ್ತಾ ಎಂಬ ಪ್ರಶ್ನೆ ಎದುರಾಗೋದು ಸಹಜ. ಅದು ರಿಯಲ್‌ ಲೈಫ್ನಲ್ಲಿ ಅಲ್ಲ. ರೀಲ್‌ ಲೈಫ್ನಲ್ಲಿ. ಹೌದು, ಹರ್ಷಿಕಾ ಪೂಣಚ್ಚ ಇದೇ ಮೊದಲ ಸಲ ಗೃಹಿಣಿಯಾಗಿ ಕಾಣಿಸಿಕೊಂಡಿದ್ದಾರೆ. ಹಾಗೆ ಕಾಣಿಸಿಕೊಂಡಿರುವ ಚಿತ್ರ “ಚಿಟ್ಟೆ’.

ಈ ಚಿತ್ರದಲ್ಲಿ ನಿರ್ದೇಶಕ ಪ್ರಸನ್ನ ಅವರು ಹರ್ಷಿಕಾ ಅವರನ್ನಿಲ್ಲಿ ಗೃಹಿಣಿಯನ್ನಾಗಿಸಿದ್ದಾರೆ. ಹರ್ಷಿಕಾ ಇದುವರೆಗೆ ಸುಮಾರು ಹದಿನೆಂಟು ಚಿತ್ರಗಳಲ್ಲಿ ನಟಿಸಿದ್ದಾರೆ. ಯಾವ ಚಿತ್ರದಲ್ಲೂ ಅವರು ಗೃಹಿಣಿಯಾಗಿ ಕಾಣಿಸಿಕೊಂಡಿಲ್ಲ. ಕ್ಲೈಮ್ಯಾಕ್ಸ್‌ ವೇಳೆಗೆ ಮದುವೆ ಆಗಿರುವ ಉದಾಹರಣೆ ಬಿಟ್ಟರೆ, ಇಡೀ ಸಿನಿಮಾದುದ್ದಕ್ಕೂ ಹೆಂಡತಿ ಪಾತ್ರ ನಿರ್ವಹಿಸಿಲ್ಲ. ಇದೇ ಮೊದಲ ಸಲ “ಚಿಟ್ಟೆ’ ಮೂಲಕ ಅವರು ಒಬ್ಬ ಒಳ್ಳೆಯ ಗಂಡನಿಗೆ ಒಳ್ಳೆಯ ಹೆಂಡತಿಯಾಗಿ ನಟಿಸಿದ್ದಾರೆ. 

“ಚಿಟ್ಟೆ’ ಎಂಬ ಶೀರ್ಷಿಕೆ ಪಾತ್ರದಲ್ಲೇ ಹರ್ಷಿಕಾ ಕಾಣಿಸಿಕೊಂಡಿರುವುದು ಇನ್ನೊಂದು ವಿಶೇಷ. “ಬಿ3′ ನಂತರ ಅವರು ಮಾಡಿದ ಚಿತ್ರಗಳೆಲ್ಲವೂ ಶೀರ್ಷಿಕೆಗೆ ಹತ್ತಿರವಾದ ಚಿತ್ರಗಳೇ. “ತಮಸ್ಸು’ ಅಂದರೆ ಕತ್ತಲು. ಆ ಚಿತ್ರದಲ್ಲಿ ಹರ್ಷಿಕಾ ಪಾತ್ರ ಕೂಡ ಕತ್ತಲ ಕೂಪದಲ್ಲಿರುವ ಪಾತ್ರ. ಅಲ್ಲೂ ಅದೊಂದು ಮುಖ್ಯ ಪಾತ್ರ ಮಾಡಿದ್ದ ಹರ್ಷಿಕಾಗೆ, ಟೈಟಲ್‌ ಮೇಲೆ ಸಾಗುವ ಪಾತ್ರ ಸಿಗುತ್ತಾ ಬಂದವು. ಹರ್ಷಿಕಾಗೆ ಮರಸುತ್ತುವ ಪಾತ್ರಗಳಿಗಿಂತ, ಕಥೆ, ಪಾತ್ರದಲ್ಲಿ ಗಟ್ಟಿತನವಿದ್ದರೆ ಖುಷಿಯಂತೆ. ಅದು “ಚಿಟ್ಟೆ’ಯಲ್ಲಿದೆಯಂತೆ.

ಒಳ್ಳೆಯ ಕಥೆ ಬಗ್ಗೆಯಷ್ಟೇ ಗಮನಹರಿಸುತ್ತ ಬಂದಿರುವ ಹರ್ಷಿಕಾ, ಯಾವತ್ತಿಗೂ ಸುಮ್ಮನೆ ಕೂತಿಲ್ಲ. ಒಂದಲ್ಲ ಒಂದು ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳುತ್ತಿರುವ ಹರ್ಷಿಕಾಗೆ, “ಚಿಟ್ಟೆ’ ಚಿತ್ರದ ಮೇಲೆ ಇನ್ನಿಲ್ಲದ ನಂಬಿಕೆ ಇದೆ. ಅದಕ್ಕೆ ಕಾರಣ, ಕಥೆ ಮತ್ತು ಪಾತ್ರವಂತೆ. ಕಲರ್‌ಫ‌ುಲ್‌ ಆಗಿರುವ ಪಾತ್ರದಲ್ಲಿ ಹಲವು ವಿಶೇಷತೆಗಳಿದ್ದು, ಆಗಷ್ಟೇ ಮದುವೆಯಾದ ಒಂದು ಜೋಡಿ, ಹೇಗೆಲ್ಲಾ ತಮ್ಮೊಳಗಿನ ಆಸೆ,

ಆಕಾಂಕ್ಷೆಗಳನ್ನು ವ್ಯಕ್ತಪಡಿಸುತ್ತಾ, ಖುಷಿಯಾಗಿ ಒಬ್ಬರನ್ನೊಬ್ಬರು ಕಾಲೆಳೆಯುತ್ತ ಲೈಫ್ ಎಂಜಾಯ್‌ ಮಾಡುತ್ತಾರೆ ಎಂಬುದರ ಮೇಲೆ ಕಥೆ ಸಾಗಲಿದೆಯಂತೆ. ಈಗಾಗಲೇ ಹರ್ಷಿಕಾ ಹುಟ್ಟುಹಬ್ಬದಂದು “ಚಿಟ್ಟೆ’ಯ ಟೀಸರ್‌ ಬಿಡುಗಡೆಯಾಗಿದ್ದು, ಎಲ್ಲೆಡೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿರುವ ಬಗ್ಗೆ ಹರ್ಷಿಕಾಗೂ ಖುಷಿ ಇದೆ.

ಹಲವು ಟ್ರೋಲ್‌ ಪೇಜ್‌ಗಳಲ್ಲಿ ಫೋಟೋ ಹಾಕಿ ವಿಭಿನ್ನ ಶೀರ್ಷಿಕೆ ಮೂಲಕ ಪೋಸ್ಟ್‌ ಮಾಡುತ್ತಿರುವುದನ್ನು ನೋಡಿ, “ಚಿಟ್ಟೆ’ ಇನ್ನಷ್ಟು ಸ್ವತ್ಛಂದವಾಗಿ ಹಾರಾಡುವ ಕನಸು ಕಾಣುತ್ತಿದೆ ಎನ್ನುತ್ತಾರೆ ಹರ್ಷಿಕಾ. ಚಿತ್ರ ಪೂರ್ಣಗೊಂಡಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಚುನಾವಣೆ ಮುಗಿದ ಬಳಿಕ ಆಡಿಯೋ ಬಿಡುಗಡೆ ಮಾಡಿ, ಪ್ರೇಕ್ಷಕರ ಮುಂದೆ ತರುವ ಯೋಚನೆ ನಿರ್ದೇಶಕರಿಗಿದೆ. ಅದೇನೆ ಇರಲಿ,

“ಚಿಟ್ಟೆ’ ಹೊಸ ಜೋಡಿಗೊಂದು ವಿಶೇಷ ಪ್ಯಾಕೇಜ್‌ ಸಿನಿಮಾ ಎಂಬುದು ಹರ್ಷಿಕಾ ಮಾತು. ಸದ್ಯಕ್ಕೆ ಹರ್ಷಿಕಾ ಈಗ ಚ್ಯೂಸಿಯಾಗಿದ್ದಾರೆ. ಕಥೆ, ಪಾತ್ರದ ಬಗ್ಗೆ ಹೆಚ್ಚು ಗಮನಹರಿಸುತ್ತಿದ್ದಾರೆ. ಹೊಸಬರ ಕಥೆಗಳೇ ಹೆಚ್ಚೆಚ್ಚು ಬರುತ್ತಿರುವುದರಿಂದ ಮತ್ತದೇ ಪಾತ್ರಗಳೇ ಅಲ್ಲಿ ಕಾಣಸಿಗುತ್ತಿವೆಯಂತೆ. ಹಾಗಾಗಿ, ಹೊಸದೇನನ್ನೋ ಬಯಸುತ್ತಿರುವ ಅವರಿಗೆ ಈಗ ಒಂದು ಕಥೆ ಸಿಕ್ಕಿದ್ದು, ಇಷ್ಟರಲ್ಲೇ ದೊಡ್ಡ ಪ್ರಾಜೆಕ್ಟ್ ಬಗ್ಗೆ ವಿಷಯ ಹಂಚಿಕೊಳ್ಳುವ ಭರವಸೆ ಕೊಡುತ್ತಾರೆ.

ಟಾಪ್ ನ್ಯೂಸ್

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

tirupati

Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್‌!

RD-Parede

Parade: ಗಣರಾಜ್ಯೋತ್ಸವಕ್ಕೆ 15 ಸ್ತಬ್ಧಚಿತ್ರ ಆಯ್ಕೆ: ಮತ್ತೆ ದೆಹಲಿಗೆ ಕೊಕ್‌

YOutube

Click Bite: ಹಾದಿ ತಪ್ಪಿಸಿದರೆ ವೀಡಿಯೋ ಡಿಲೀಟ್‌: ಯೂಟ್ಯೂಬ್‌!

Mandya-Sahitya

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?

KSG-Terrorist

Kasaragodu: ಸ್ಲೀಪರ್‌ ಸೆಲ್‌ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gurunandan

Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್‌ ಬಾಂಡ್‌’ ಚಿತ್ರ

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

KD

Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್‌

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?

Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

tirupati

Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್‌!

RD-Parede

Parade: ಗಣರಾಜ್ಯೋತ್ಸವಕ್ಕೆ 15 ಸ್ತಬ್ಧಚಿತ್ರ ಆಯ್ಕೆ: ಮತ್ತೆ ದೆಹಲಿಗೆ ಕೊಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.