Renuka Swamy Case:ದರ್ಶನ್ ಮತ್ತೆ ಕಸ್ಟಡಿಗೆ,ಪವಿತ್ರಾ ಸೇರಿ 7 ಮಂದಿ ನ್ಯಾಯಾಂಗ ಬಂಧನಕ್ಕೆ
Team Udayavani, Jun 20, 2024, 5:43 PM IST
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಕುಣಿಕೆ ನಟ ದರ್ಶನ್‌ಗೆ ಮತ್ತಷ್ಟು ಬಿಗಿಯಾಗಿದೆ. ಹೆಚ್ಚಿನ ವಿಚಾರಣೆಗಾಗಿ ನಟ ದರ್ಶನ್, ಧನರಾಜ್, ವಿನಯ್ ಹಾಗೂ ಪ್ರದೂಶ್‌ನನ್ನು 2 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ 24ನೇ ಎಸಿಎಂಎಂ ನ್ಯಾಯಾಲಯ ಆದೇಶ ನೀಡಿದೆ. ದರ್ಶನ್ ಗೆಳತಿ ಪವಿತ್ರಾ ಗೌಡ ಸೇರಿ 7 ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ನಾಲ್ವರು ಆರೋಪಿಗಳು ಪ್ರಕರಣಕ್ಕೆ ಬೇಕಾದ ಮಾಹಿತಿ ಹಾಗೂ ಕೆಲವೊಂದು ಮಹತ್ವದ ವಿಚಾರಗಳ ಬಾಯಿಬಿಡಲು ಹಿಂದೇಟು ಹಾಕುತ್ತಿದ್ದಾರೆ. ಜತೆಗೆ ಕೃತ್ಯ ಮರೆಮಾಚಲು ಹಣಕಾಸಿನ ವ್ಯವಹಾರ ನಡೆಸಿದ್ದು, ಈ ಹಣದ ಮೂಲ ಪಡೆಯಬೇಕು. ಮೃತನ ಮೊಬೈಲ್ ಹಾಗೂ ಕೃತ್ಯದ ಪ್ರಮುಖ ಸಾಕ್ಷ್ಯವಾದ ಮತ್ತೂಂದು ಮೊಬೈಲ್ ಪತ್ತೆ ಹಚ್ಚುವ ಉದ್ದೇಶದಿಂದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳನ್ನು ಮತ್ತೆ ವಶಕ್ಕೆ ಪಡೆಯಲು ಎಸ್‌ಐಟಿ ಮುಂದಿಟ್ಟ ಕಾರಣ
ನಟ ದರ್ಶನ್ ಮನೆಯಿಂದ 37.40 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ. ಹಾಗೆಯೇ ಆತನ ಪತ್ನಿ ವಿಜಯಲಕ್ಷಿ$¾àಗೆ ನೀಡಿದ್ದ 3 ಲಕ್ಷ ರೂ. ಅನ್ನು ಜಪ್ತಿ ಮಾಡಲಾಗಿದೆ. ಆದರೆ, ದರ್ಶನ್ ಈ ಹಣದ ಮೂಲದ ಬಗ್ಗೆ ಬಾಯಿಬಿಡುತ್ತಿಲ್ಲ. ಅದರ ದಾಖಲಾತಿ ಪಡೆಯಬೇಕು. ಕೃತ್ಯ ಎಸಗಿದ ಬಳಿಕ ಸಮಾಜದ ಕೆಲ ಪ್ರತಿಷ್ಠಿತ ವ್ಯಕ್ತಿಗಳನ್ನು ದರ್ಶನ್ ಸಂಪರ್ಕಿಸಿದ್ದು, ಅದರ ಉದ್ದೇಶ ಹಾಗೂ ಕಾರಣಗಳ ಕುರಿತು ವಿಚಾರಣೆ ನಡೆಸಬೇಕು.
ಇನ್ನು ಪ್ರದೂಶ್ ಸಾಕ್ಷ್ಯನಾಶ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ. ಈತ ಕೂಡ ತನಿಖೆಗೆ ಸಹಕಾರ ನೀಡುತ್ತಿಲ್ಲ. ಪ್ರಮುಖವಾಗಿ ಈತ ಕೃತ್ಯದ ಸ್ಥಳಕ್ಕೆ ಮತ್ತೂಬ್ಬ ವ್ಯಕ್ತಿಯನ್ನು ಕರೆದೊಯ್ದಿದ್ದಾನೆ. ಆ ಅಪರಿಚಿತ ವ್ಯಕ್ತಿ ಬಗ್ಗೆ ಈತನಿಗೆ ಮಾತ್ರ ತಿಳಿದಿದ್ದು, ಆತ ಯಾರೆಂಬ ಬಗ್ಗೆ ಪ್ರದೂಶ್‌ನಿಂದ ಮಾಹಿತಿ ಪಡೆಯಬೇಕು.
ರೇಣುಕಾಸ್ವಾಮಿಗೆ ಎಲೆಕ್ಟ್ರಿಕ್ ಶಾಕ್ ನೀಡಲು ಬಳಸಿದ್ದ ಸಾಧನವನ್ನು ಎಲ್ಲಿ ಖರೀದಿಸಿದ್ದಾನೆ ಎಂಬುದನ್ನು ಆತನ ಹೇಳುತ್ತಿಲ್ಲ. ಆತನ ವಿಚಾರಣೆ ಅಗತ್ಯವಿದೆ. ಅಲ್ಲದೆ, ಈತ ಕೃತ್ಯದ ಸ್ಥಳಕ್ಕೆ ಬೇರೆ ವ್ಯಕ್ತಿಗಳ ಜತೆ ಬಂದು ಹೋಗಿದ್ದಾನೆ ಎಂಬುದು ತನಿಖೆಯಲ್ಲಿ ಕಂಡು ಬಂದಿದೆ. ಈ ಮಾಹಿತಿ ಪಡೆಯಬೇಕು.
ವಿನಯ್ ಮೊಬೈಲ್‌ನಲ್ಲಿ ಪ್ರಕರಣಕ್ಕೆ ಬೇಕಾದ ಅತೀ ಮುಖ್ಯವಾದ ಸಾಕ್ಷ್ಯ ದೊರೆತಿದ್ದು, ಅದನ್ನು ಕಳುಹಿಸಿದ್ದ ವ್ಯಕ್ತಿ ಯಾರೆಂದು ವಿನಯ್‌ನಿಂದ ತಿಳಿಯಬೇಕು.
ಕೃತ್ಯ ನಡೆದ ಶೆಡ್‌ನಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರಿಗೆ ಕೆಲವರು ಸಾಕ್ಷ್ಯ ನುಡಿಯದಂತೆ ಹಣದ ಆಮಿಷವೊಡ್ಡಿದ್ದಾರೆ. ಆ ವ್ಯಕ್ತಿಗಳು ಯಾರೆಂದು ಈ ನಾಲ್ವರಿಂದ ಮಾಹಿತಿ ಪಡೆಯಬೇಕು.
ವಿನಯ್ ಮತ್ತು ದೀಪಕ್ ಮೂಲಕ ನಟ ದರ್ಶನ್ ಕೃತ್ಯ ಮರೆಮಾಚಲು ಕೇಶವಮೂರ್ತಿಗೆ 5 ಲಕ್ಷ ರೂ. ನೀಡಿದ್ದು, ಈ ಹಣವನ್ನು ಕೇಶವಮೂರ್ತಿ ತನ್ನ ಸ್ನೇಹಿತನಿಗೆ ನೀಡಿದ್ದಾಗಿ ತಿಳಿಸಿದ್ದಾನೆ. ಈ ಹಣ ಪಡೆದ ವ್ಯಕ್ತಿಯ ಪತ್ತೆಯಾಗಿಲ್ಲ. ಆ ಹಣ ವಶಕ್ಕೆ ಪಡೆಯಬೇಕಿದೆ.
ಯಾರೆಲ್ಲ ನ್ಯಾಯಾಂಗ ಬಂಧನಕ್ಕೆ?
ದರ್ಶನ್ ಗೆಳತಿ ಪವಿತ್ರಾ ಗೌಡ, ಚಿತ್ರದುರ್ಗದ ರಾಘವೇಂದ್ರ, ಅನುಕುಮಾರ್, ನಾಗರಾಜು, ಲಕ್ಷ್ಮಣ್, ಕೇಶವಮೂರ್ತಿ, ದೀಪಕ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇತರ ಆರು ಮಂದಿಯನ್ನು ಈ ಹಿಂದೆಯೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು
Drone Prathap: ಸಿನಿಮಾರಂಗಕ್ಕೆ ಡ್ರೋನ್ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.