ಸಾರ್ವಜನಿಕರಲ್ಲಿ ವಿನಂತಿ! ದೇವಸ್ಥಾನದಲ್ಲಿ ಟೈಟಲ್ ಸಿಗ್ತು,
Team Udayavani, Jul 27, 2017, 11:49 AM IST
ತಮಿಳು ಚಿತ್ರದಿಂದ ಸ್ಫೂರ್ತಿ ಸಿಗ್ತು “ದಯವಿಟ್ಟು ಗಮನಿಸಿ’, “ಕನ್ನಡಕ್ಕಾಗಿ ಒಂದನ್ನು ಒತ್ತಿ’, “ಈ ಪಟ್ಟಣಕ್ಕೆ ಏನಾಗಿದೆ’, “ತೆರೆಯೋ ಬಾಗಿಲನು’ … ಇಂತಹ ಹಲವು ಚಂದದ ಹೆಸರಿನ ಟೈಟಲ್‌ಗಳಿರುವ ಚಿತ್ರಕ್ಕೆ ಇನ್ನೊಂದು ಚಿತ್ರ ಸೇರ್ಪಡೆಯಾಗಿದೆ. ಅದೇ “ಸಾರ್ವಜನಿಕರಲ್ಲಿ ವಿನಂತಿ’. ಈ ಹಿಂದೆ ನಂದಕಿಶೋರ, ಸತೀಶ್ ಪ್ರಧಾನ್ ಮುಂತಾದವರ ಜೊತೆಗೆ ಕೆಲಸ ಮಾಡಿರುವ ಕೃಪಾಸಾಗರ್, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಈ ಚಿತ್ರದ ಮೂಲಕ ಮದನ್ ಮತ್ತು ಅಮೃತಾ ಅವರನ್ನು ಚಿತ್ರರಮಗಕ್ಕೆ ಪರಿಚಯಿಸುತ್ತಿದ್ದು, ಈಗಾಗಲೇ ಚಿತ್ರದ ಮೊದಲಾರ್ಧದ ಚಿತ್ರೀಕರಣ ಮುಗಿದಿದೆ.
ಕೃಪಾಸಾಗರ್‌ಗೆ “ಸಾರ್ವಜನಿಕರಲ್ಲಿ ವಿನಂತಿ’ ಎಂಬ ಹೆಸರು ಸಿಕ್ಕಿದ್ದು ದೇವಸ್ಥಾನವೊಂದರಲ್ಲಂತೆ. ಅಲ್ಲಿ ಫಲಕವೊಂದರಲ್ಲಿ ಸಾರ್ವಜನಿಕರಲ್ಲಿ ವಿನಂತಿ ಎಂದು ಬರೆಯಲಾಗಿತ್ತಂತೆ. ಅದನ್ನು ನೋಡಿ, ಅದೇ ಹೆಸರಿನ ಚಿತ್ರ ಮಾಡಿದರೆ ಹೇಗೆ ಎಂದನಿಸಿ ಅವರು ಚಿತ್ರಕ್ಕೆ ಹೆಸರಿಟ್ಟಿದ್ದಾರೆ.
ಇನ್ನು ಈ ಚಿತ್ರಕ್ಕೆ ಅವರಿಗೆ ಸ್ಫೂರ್ತಿಯಾಗಿದ್ದು, ತಮಿಳಿನ “ವಿಸಾರಣೈ’ ಚಿತ್ರ. ಇನ್ನು ಈ ಚಿತ್ರದಲ್ಲಿ ಅವರು ಏನು ವಿನಂತಿ ಮಾಡಿಕೊಳ್ಳುತ್ತಿದ್ದಾರೆ ಎಂದು ಕೇಳಿದರೆ, “ಕ್ರೈಮ್ ರೇಟ್ ಬಹಳ ಹೆಚ್ಚಿದೆ. ಅದರ ಕುರಿತಾಗಿ ನಾನು
ಸಾರ್ವಜನಿಕರಲ್ಲಿ ಒಂದು ವಿನಂತಿ ಮಾಡಿಕೊಳ್ಳುತ್ತಿದ್ದೇನೆ. ಅಷ್ಟೇ ಅಲ್ಲ, ಒಂದು ಹಾಡನ್ನು ಪೊಲೀಸ್ ಇಲಾಖೆಗೆ ಅರ್ಪಿಸುತ್ತಿದ್ದೇವೆ’ ಎನ್ನುತ್ತಾರೆ ಅವರು.
“ಸಾರ್ವಜನಿಕರಲ್ಲಿ ವಿನಂತಿ’ ಚಿತ್ರಕ್ಕೆ ಅಜಿತ್ ಸಿ.ಕೆ. ಅಜಿತ್ ಅವರು ಸಂಗೀತ ಸಂಯೋಜಿಸಿದರೆ, ಅನಿಲ್ ಕುಮಾರ್
ಅವರು ಛಾಯಾಗ್ರಹಣ ಮಾಡಿದ್ದಾರೆ. ಚಿತ್ರದ ಮೊದಲಾರ್ಧದ ಚಿತ್ರೀಕರಣ ಈಗಾಗಲೇ ತುಮಕೂರು, ಗೊರವನಹಳ್ಳಿ
ಮುಂತಾದ ಕಡೆ ನಡೆದಿದೆ. ಇನ್ನು ಆಗಸ್ಟ್‌ನಲ್ಲಿ ಚಿತ್ರದ ದ್ವಿತೀಯ ಹಂತದ ಚಿತ್ರೀಕರಣ ನಡೆ ಯಲಿದೆ. ಈ ಚಿತ್ರವನ್ನು ಕೃಪಾಸಾಗರ್ ಅವರ ತಂದೆ ನಿರ್ಮಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.