ಮಡಿಕೇರಿ ಸುತ್ತಮುತ್ತ ಪುನಾರಂಭ
Team Udayavani, Sep 13, 2017, 10:41 AM IST
ಡಾ. ರೂಪ ಕುಮಾರ್ ನಿರ್ಮಿಸುತ್ತಿರುವ “ಪುನಾರಂಭ’ ಚಿತ್ರೀಕರಣ 80% ರಷ್ಟು ಮುಕ್ತಾಯಗೊಂಡಿದೆ. ಚಿತ್ರಕ್ಕೆ ದಶಕದ ಹಿಂದೆ ಕಿರುತೆರೆ ಹಾಗೂ ಬೆಳ್ಳಿತೆರೆಯ ಹಲವಾರು ಧಾರಾವಾಹಿ ಮತ್ತು ಚಲನಚಿತ್ರಗಳಲ್ಲಿ ಅಭಿನಯಿಸಿದ್ದ ಡಾ| ವಿಜಯಕುಮಾರ್ ಈ ಚಿತ್ರದ ನಾಯಕ. ಜೊತೆಗೆ ನಿರ್ಮಾಣ ಕೂಡಾ ಇವರದೇ.
ಡಾ. ವಿಜಯಕುಮಾರ್ ಹಾಗೂ ಕೆ.ಗಣೇಶ್‌ರಾವ್ ಕೇಸರ್ ಕರ್ ಜಂಟಿಯಾಗಿ ನಿರ್ದೇಶನ ಮಾಡುತ್ತಿದ್ದಾರೆ. ಮಡಿಕೇರಿ, ಸೊಂಡೇಕೊಪ್ಪ, ಕುಶಾಲನಗರ, ಹಾರಂಗಿ ಜಲಾಶಯ ಸುತ್ತಮುತ್ತ ಈ ಚಿತ್ರದ ಮಾತಿನ ಭಾಗ ಹಾಗೂ ಎರಡು ಹಾಡುಗಳನ್ನು ಚಿತ್ರೀಕರಿಸಿಕೊಳ್ಳಲಾಗಿದೆ. “ಜಿಲ್ ಜಿಲ್ ಜಿಲ್ ಚಿಲ್ಲರೆ..’ ಎಂಬ ಹಾಡಿನ ಜೊತೆಗೆ ಮತ್ತೂಂದು ಹಾಡನ್ನು ಕೂಡ ಇದೇ ಲೊಕೇಶನ್‌ಗಳಲ್ಲಿ ಶೂಟ್ ಮಾಡಿಕೊಳ್ಳಲಾಗಿದೆ.
ಸದ್ಯದಲ್ಲೇ ಉಳಿದ ಭಾಗದ ಚಿತ್ರೀಕರಣಬೆಂಗಳೂರು ಸುತ್ತಮುತ್ತ ಪ್ರಾರಂಭವಾಗಲಿದೆ. ಚಿತ್ರಕ್ಕೆ ಎಂ ಮುತ್ತುರಾಜ್ ಛಾಯಾಗ್ರಹಣ, ಜಯಂತ್ ಕಾಯ್ಕಿಣಿ ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ, ಡಾ. ವಿಜಯಕುಮಾರ್, ಕಥೆ, ಚಿತ್ರಕಥೆ, ಸಂಭಾಷಣೆ, ರಾಮನೃತ್ಯ ನಿರ್ದೇಶನ, ಸೂರ್ಯಪ್ರಕಾಸ್ ಸಾಹಸವಿದೆ.
ಡಾ. ವಿಜಯಕುಮಾರ್, ಐಶ್ವರ್ಯ ದಿನೇಶ್, ಶೋಭ ರಾಜ್, ಶಂಕರ ಅಶ್ವಥ್, ಗಣೇಶ್ ರಾವ್ ಕೆಸರ್‌ಕರ್, ರಿಚರ್ಡ್ ಲೂಯೀಸ್ ಲಯೇಂದ್ರ, ವೈಷ್ಣವಿ, ಶ್ವೇತಗೌಡ, ಪ್ರೀತು ಪೂಜಾ, ಸುರೇಶ್ ಸೇರಿದಂತೆ ಅನೇಕರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Onion Price; ಈರುಳ್ಳಿ ಬೆಲೆ ಇಳಿಕೆ: ಹರಾಜು ನಿಲ್ಲಿಸಿ ರೈತರ ಪ್ರತಿಭಟನೆ
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ
Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ
Electricity theft: ಎಸ್ಪಿ, ಸಂಸದನ ವಿರುದ್ಧ ದೂರು ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.