ಕಾನ್ಫಿಡಾ ಪ್ರಶಸ್ತಿಗೆ ಮರುಜೀವ
Team Udayavani, Dec 20, 2017, 12:08 PM IST
ಕಳೆದ ಎಂಟು ವರ್ಷಗಳಿಂದ ತಟಸ್ಥವಾಗಿದ್ದ ಕನ್ನಡ ಚಲನಚಿತ್ರ ನಿರ್ದೇಶಕರ ಸಂಘದ ಕಾನ್ಫಿಡಾ ಪ್ರಶಸ್ತಿಗೆ ಇದೀಗ ಮರುಚಾಲನೆ ಸಿಗುತ್ತಿದೆ. ಹೌದು, ಈ ಹಿಂದೆ ಕೊಡಮಾಡುತ್ತಿದ್ದ ಕಾನ್ಫಿಡಾ ಅವಾರ್ಡ್, ಕಾರಣಾಂತರಗಳಿಂದ ಸ್ಥಗಿತಗೊಂಡಿತ್ತು. ಈಗ ಸಂಘದ ಅಧ್ಯಕ್ಷ ನಾಗೇಂದ್ರ ಪ್ರಸಾದ್ ನೇತೃತ್ವದಲ್ಲಿ ಪ್ರಶಸ್ತಿ ವಿತರಣೆ ಕಾರ್ಯಕ್ರಮ ನಡೆಸಲು ಸಂಘ ಹಲವು ರೂಪುರೇಷೆಗಳು ಸಿದ್ಧಗೊಳ್ಳುತ್ತಿವೆ.
ಈ ಕುರಿತು ವಿವರಣೆ ಕೊಟ್ಟ ಅಧ್ಯಕ್ಷ ನಾಗೇಂದ್ರ ಪ್ರಸಾದ್, “ಫೆಬ್ರವರಿಯಲ್ಲಿ ಚಿತ್ರೋತ್ಸವ ನಡೆಯುತ್ತಿದ್ದು, ಅದಾದ ಬಳಿಕ ಸಂಘವು ಕಾನ್ಫಿಡಾ ಅವಾರ್ಡ್ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಎಂದಿನಂತೆ ಪರಭಾಷೆಯ ಇಬ್ಬರು ಚಿತ್ರ ನಿರ್ದೇಶಕರನ್ನು ಗುರುತಿಸಿ, ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿ, ಸನ್ಮಾನಿಸುವ ಕಾರ್ಯವು ನಡೆಯಲಿದೆ. ಉಳಿದಂತೆ 20 ವಿಭಾಗದಲ್ಲಿ ಕಾನ್ಫಿಡಾ ಪ್ರಶಸ್ತಿಯನ್ನು ವಿತರಣೆ ಮಾಡಲಾಗುತ್ತದೆ.
ಕನ್ನಡದ ಯಶಸ್ಸು ಪಡೆದ ಮತ್ತು ಜನ ಮೆಚ್ಚುಗೆ ಪಡೆದ ಚಿತ್ರಗಳ ನಿರ್ದೇಶಕರೊಂದಿಗೆ ಸಂವಾದ ಕಾರ್ಯಕ್ರಮವನ್ನು ನಡೆಸಲು ನಿರ್ಧರಿಸಲಾಗಿದೆ. ಈಗಾಗಲೇ ಕಾನ್ಫಿಡಾ ಫಿಲ್ಮ್ ಕೋರ್ಸ್‌ನಲ್ಲಿ 35 ಬ್ಯಾಚ್‌ಗಳು ಪೂರ್ಣಗೊಂಡಿವೆ. ಜನವರಿಯಲ್ಲಿ 36ನೇ ಬ್ಯಾಚ್ ಶುರುವಾಗಲಿದೆ. ಒಂದು ಬ್ಯಾಚ್‌ನಲ್ಲಿ 25 ವಿದ್ಯಾರ್ಥಿಗಳಿದ್ದು, ಮೂರು ತಿಂಗಳ ಕೋರ್ಸ್ ಇದಾಗಲಿದೆ.
ನುರಿತ ನಿರ್ದೇಶಕರು, ಛಾಯಾಗ್ರಾಹಕರು ವಿದ್ಯಾರ್ಥಿಗಳಿಗೆ ಬೋಧನೆ ಮಾಡಲಿದ್ದಾರೆ’ ಎಂದು ವಿವರ ಕೊಡುತ್ತಾರೆ ಅವರು. ಈ ಕಾನ್ಫಿಡಾ ಅವಾರ್ಡ್ ಕಾರ್ಯಕ್ರಮಕ್ಕೆ ಚಿತ್ರರಂಗದ ಎಲ್ಲಾ ಸಂಘಟನೆಗಳು ಕೈ ಜೋಡಿಸಲಿವೆ ಎನ್ನುವ ಅವರು, “ಈ ಬಾರಿ ಸಂಘದಿಂದ ಕಿರುಚಿತ್ರ ಪ್ರಶಸ್ತಿಯನ್ನೂ ನೀಡಲು ಉದ್ದೇಶಿಸಲಾಗಿದೆ. ಆ ಮೂಲಕ ಪ್ರತಿಭಾವಂತರನ್ನು ಪ್ರೋತ್ಸಾಹಿಸುವ ಕೆಲಸ ಮಾಡಲಿದೆ ಎಂದು ವಿವರಿಸಿದ ನಾಗೇಂದ್ರ ಪ್ರಸಾದ್, ಈ ಬಾರಿ ಚಿತ್ರೋತ್ಸವದಲ್ಲಿ ಸಂಘವು ಪಾಲ್ಗೊಳ್ಳಲಿದೆ.
ಆಯೋಜಕರು ಕೂಡ ಒಂದಷ್ಟು ಜವಾಬ್ದಾರಿ ವಹಿಸಲಿದ್ದಾರೆ. ಅದನ್ನು ನಿರ್ವಹಿಸಲು ಸಂಘ ಸಿದ್ಧವಿದೆ’ ಎಂದರು ಅವರು. ಈ ಪತ್ರಿಕಾಗೋಷ್ಠಿಯಲ್ಲಿ ಯೋಗರಾಜ್‌ಭಟ್, ಸುನೀಲ್ ಪುರಾಣಿಕ್, ವೈದ್ಯನಾಥ್, ಮಂಜುನಾಥ್, ಬೂದಾಳ್ ಕೃಷ್ಣಮೂರ್ತಿ, ಮಳವಳ್ಳಿ ಸಾಯಿಕೃಷ್ಣ, ಶಿವಕುಮಾರ್, ಶಾಂತಕುಮಾರ್, ಅನಂತ್‌ರಾಜು ಸೇರಿದಂತೆ ಸಂಘದ ಅನೇಕ ಪದಾಧಿಕಾರಿಗಳು ಈ ವೇಳೆ ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.