ಅಶೋಕವನ ಎಸ್ಟೇಟಿಗೆ ಸ್ವಾಗತ ಕೋರಿದ ‘ಹೀರೋ’…ಶೆಟ್ಟರ ಸಿನಿಮಾ ರಿಲೀಸ್ ಡೇಟ್ ಪ್ರಕಟ
Team Udayavani, Feb 11, 2021, 1:17 PM IST
ಕೋವಿಡ್ ಸಂಕಷ್ಟ ಎದುರಿಸಿ ಈಗ ತಾನೆ ಹಳಿಗೆ ಮರಳುತ್ತಿರುವ ಕನ್ನಡ ಚಿತ್ರರಂಗದಲ್ಲಿ ಇದೀಗ ಸಿನಿಮಾಗಳ ರಿಲೀಸ್ ಡೇಟ್ಸ್ ಘೋಷಣೆ ಜೋರಾಗಿದೆ. ಈಗಾಗಲೇ ಭರ್ಜರಿ ಹುಡುಗ ಧ್ರುವ ಸರ್ಜಾ ಅವರ ‘ಪೊಗರು’ ಹಾಗೂ ಸ್ಯಾಂಡಲ್ ವುಡ್ ಯಜಮಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರಗಳ ಬಿಡುಗಡೆಯ ದಿನಾಂಕ ಪ್ರಕಟಗೊಂಡಿವೆ. ಇದೀಗ ರಿಷಭ್ ಶೆಟ್ಟರ ‘ಹೀರೋ’ ಸರದಿ..
ಬೆಲ್ ಬಾಟಂ ಮೂಲಕ ಸ್ಯಾಂಡಲ್ ವುಡ್ ಗೆ ನಾಯಕ ನಟನಾಗಿ ಎಂಟ್ರಿ ಕೊಟ್ಟ ಡಿಟೆಕ್ಟಿವ್ ದಿವಾಕರ, ನಟಿಸಿರುವ ಎರಡನೇ ಸಿನಿಮಾ ‘ಹೀರೋ’ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಇದೇ ಮಾರ್ಚ್ 05 ರಂದು ಬೆಳ್ಳಿ ಪರದೆ ಮೇಲೆ ಹೀರೋನ ಅಬ್ಬರ ಶುರುವಾಗಲಿದೆ. ಇಂದು ( ಫೆ.11 ಗುರುವಾರ) ಚಿತ್ರತಂಡ ಸಿನಿಮಾ ಬಿಡುಗಡೆಯ ದಿನಾಂಕ ಪ್ರಕಟಿಸಿದೆ.
ಎಂ ಭರತ್ ರಾಜ್ ಹೀರೋ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶಕರಾಗಿ ಚಂದನವನಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ರಿಷಭ್ ಶೆಟ್ಟಿ ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸುವುದರ ಜತೆಗೆ ಬಂಡವಾಳ ಕೂಡ ಹಾಕಿದ್ದಾರೆ. ರಿಷಭ್ ಗೆ ಗಾನವಿ ಲಕ್ಷ್ಮಣ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಉಳಿದಂತೆ ಪ್ರಮೋದ ಶೆಟ್ಟಿ ಸೇರದಂತೆ ಸಾಕಷ್ಟು ತಾರಾಬಳಗ ಚಿತ್ರದಲ್ಲಿ ನಟಿಸಿದೆ.
ಇದನ್ನೂ ಓದಿ : ತೆರೆಮೇಲೆ ಬರಲಿದೆ ‘ಸೈನೈಡ್ ಮಲ್ಲಿಕಾ’ ಕ್ರೈಂ ಸ್ಟೋರಿ
‘ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಕೊಡುಗೆ ರಾಮಣ್ಣ ರೈ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೆ ಛಾಪು ಮೂಡಿಸಿದ ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಿಷಭ್ ಶೆಟ್ಟಿ, ಬೆಲ್ ಬಾಟಂ ಸಿನಿಮಾ ಮೂಲಕ ಫುಲ್ ಪ್ಲೆಡ್ಜ್ ನಾಯಕ ನಟನಾಗಿ ಸಕ್ಸಸ್ ಕಂಡರು. ಇದಾದ ನಂತರ ಹೀರೋ ಸಿನಿಮಾದಲ್ಲಿ ನಟಿಸಿದ್ದು, ಇದು ತೆರೆಗೆ ಬರುತ್ತಿದೆ.
ಇನ್ನು ‘ಹೀರೋ’ ಜತೆಗೆ ಸಾಕಷ್ಟು ಪ್ರಾಜೆಕ್ಟ್ ಗಳಲ್ಲಿ ರಿಷಭ್ ಬ್ಯುಸಿಯಾಗಿದ್ದಾರೆ. ‘ಹರಿಕಥೆಯಲ್ಲಿ ಗಿರಿಕಥೆ’, ‘ನಾಥೂರಾಮ್’, ‘ಮಹಿಳೆಯರೇ ಮಹನಿಯರೇ’, ‘ಕೌ ಬಾಯ್ ಕೃಷ್ಣ’, ‘ಗರುಡ ಭವನ ವೃಷಭ ವಾಹನ’ ಹಾಗೂ ‘ಬೆಲ್ ಬಾಟಂ 2’ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.