ಇಂದಿನಿಂದ ರಿಷಭ್ ಹೀರೋಯಿಸಂ: ಹೊಸ ಜಾನರ್ ಜತೆ ಶೆಟ್ರ ಎಂಟ್ರಿ
Team Udayavani, Mar 5, 2021, 8:51 AM IST
“ಬೆಲ್ ಬಾಟಂ’ ಚಿತ್ರದ ಸಕ್ಸಸ್ ಬಳಿಕ ರಿಷಭ್ ಶೆಟ್ಟಿ ನಾಯಕನಾಗಿ ಕಾಣಿಸಿಕೊಂಡಿರುವ ಮತ್ತೂಂದು ಚಿತ್ರ “ಹೀರೋ’ ಈ ವಾರ ತೆರೆಗೆ ಬರುತ್ತಿದೆ. “ರಿಷಭ್ ಶೆಟ್ಟಿ ಫಿಲಂಸ್’ ಬ್ಯಾನರ್‌ನಲ್ಲಿ ರಿಷಭ್ ಶೆಟ್ಟಿ ಅವರೇ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಭರತ್ ರಾಜ್ ಆ್ಯಕ್ಷನ್-ಕಟ್ ಹೇಳಿದ್ದಾರೆ. ಚಿತ್ರದಲ್ಲಿ “ಮಗಳು ಜಾನಕಿ’ ಧಾರಾವಾಹಿ ಖ್ಯಾತಿಯ ನಟಿ ಗಾನವಿ ಲಕ್ಷ್ಮಣ್ ನಾಯಕಿಯಾಗಿ ಅಭಿನಯಿಸಿದ್ದಾರೆ.
ಇನ್ನೊಂದು ವಿಶೇಷವೆಂದರೆ ಹೀರೋ’ ಚಿತ್ರದ ಸಂಪೂರ್ಣ ಚಿತ್ರೀಕರಣವನ್ನು ಚಿತ್ರತಂಡ ಕೋವಿಡ್ ಲಾಕ್‌ಡೌನ್ ಅವಧಿಯಲ್ಲಿ ಮಾಡಿ ಮುಗಿಸಿರುವುದ ಈ ಬಗ್ಗೆ ಮಾತನಾಡುವ ಚಿತ್ರದ ನಾಯಕ ನಟ ಕಂ ನಿರ್ಮಾಪಕ ರಿಷಭ್ ಶೆಟ್ಟಿ, “ಎಲ್ಲ ಸಿಗುತ್ತಿರುವ ಸಮಯದಲ್ಲೇ ಪ್ಲಾನಿಂಗ್ ಪ್ರಕಾರ ಸಿನಿಮಾ ಶೂಟಿಂಗ್ ಮಾಡೋದು ಕಷ್ಟ. ಹೀಗಿರುವಾಗ, ಲಾಕ್‌ಡೌನ್ ಟೈಮ್‌ನಲ್ಲಿ ನಾವು ಶೂಟಿಂಗ್ ಪ್ಲಾನ್ ಮಾಡಿಕೊಂಡಿದ್ದೆವು. ಹಾಗಾಗಿ ಎಷ್ಟು ಸಾಧ್ಯವೋ ಅಷ್ಟು, ಕಡಿಮೆ ಕಲಾವಿದರು – ತಂತ್ರಜ್ಞರನ್ನು ಇಟ್ಟುಕೊಂಡ ಶೂಟಿಂಗ್ ಮಾಡಲು ಮುಂದಾದೆವು. ತುಂಬಾ ರಿಸ್ಕ್ ಇದ್ದರೂ, ನಮಗೆ ಬೇರೆ ದಾರಿ ಇರಲಿಲ್ಲ. ಅಂದುಕೊಂಡಂತೆ ಸಿನಿಮಾ ಶೂಟಿಂಗ್ ಮಾಡಿ ಮುಗಿಸುವುದು ನಮಗಿದ್ದ ದೊಡ್ಡ ಚಾಲೆಂಜ್ ಆಗಿತ್ತು. ಅದರಂತೆ, ಕೊನೆಗೂ ಕೇವಲ 24 ಜನರ ಟೀಮ್ ಇಟ್ಟುಕೊಂಡು ಅಂದುಕೊಂಡಂತೆ ಶೂಟಿಂಗ್ ಮಾಡಿ ಮುಗಿಸಿದೆವು. ಇಡೀ ಟೀಮ್ ಎಫರ್ಟ್‌ನಿಂದ ಇಂಥದ್ದೊಂದು ಸಿನಿಮಾ ಮಾಡೋದಕ್ಕೆ ಸಾಧ್ಯವಾಯ್ತು. ನಿಜವಾಗ್ಲೂ ಹೇಳಬೇಕು ಅಂದ್ರೆ, “ಹೀರೋ’ ಸಿನಿಮಾದಲ್ಲಿ ತೆರೆಮುಂದೆ, ತೆರೆಹಿಂದೆ ಎಲ್ಲರೂ, ಎಲ್ಲ ಕೆಲಸವನ್ನೂ ಮಾಡಿದ್ದಾರೆ. ಇವರೇ ಸಿನಿಮಾದ ನಿಜವಾದ “ಹೀರೋ’ಗಳು’ ಎನ್ನುತ್ತಾರೆ.
ಇದನ್ನೂ ಓದಿ:“ಒಟಿಟಿ ಶೋ ಸೆನ್ಸಾರ್ ಅಗತ್ಯ’
ಈಗಾಗಲೇ “ಹೀರೋ’ ಚಿತ್ರದ ಪೋಸ್ಟರ್, ಟ್ರೇಲರ್ ಬಿಡುಗಡೆಯಾಗಿದ್ದು, ಇದೊಂದು ಕ್ರೈಂ-ಥ್ರಿಲ್ಲರ್ ಹಾಗೂ ಕಾಮಿಡಿ ಜಾನರ್ ಕಥೆ ಹೊಂದಿದೆ ಎಂದು ಹೇಳಲಾಗುತ್ತಿದೆ. ಆದರೆ ಚಿತ್ರದ ಕಥಾಹಂದರದ ಗುಟ್ಟು ಬಿಟ್ಟುಕೊಡದ ಚಿತ್ರತಂಡ, ಅದನ್ನು ತೆರೆಮೇಲೆ ನೋಡಬೇಕು ಎನ್ನುತ್ತದೆ. ಸದ್ಯ ಕಳೆದ ಕೆಲ ದಿನಗಳಿಂದ ಭರ್ಜರಿಯಾಗಿ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇಂದು “ಹೀರೋ’ವನ್ನು ತೆರೆಮೇಲೆ ತರುತ್ತಿದೆ.
ಚಿತ್ರದ ಬಿಡುಗಡೆಯ ತಯಾರಿ ಬಗ್ಗೆ ಮಾತನಾಡುವ ರಿಷಭ್ ಶೆಟ್ಟಿ, “ಕಳೆದ ಎರಡು ತಿಂಗಳಿನಿಂದ ಬೇರೆ ಬೇರೆ ರೀತಿಯಲ್ಲಿ ಸಿನಿಮಾದ ಪ್ರಮೋಶನ್ ಕೆಲಸಗಳನ್ನು ಮಾಡುತ್ತಿದ್ದೇವೆ. ಈಗಾಗಲೇ ರಿಲೀಸ್ ಆಗಿರುವ ಟ್ರೇಲರ್, ಹಾಡುಗಳಿಗೆ ಆಡಿಯನ್ಸ್ ಕಡೆಯಿಂದ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಆಡಿಯನ್ಸ್ ಮತ್ತು ಇಂಡಸ್ಟ್ರಿ ಕಡೆಯಿಂದಲೂ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯ ಮಾತುಗಳು ಕೇಳಿ ಬರುತ್ತಿದೆ. ಆ ನಿರೀಕ್ಷೆಯನ್ನು ತಲುಪುತ್ತೇವೆ ಎಂಬ ವಿಶ್ವಾಸದಲ್ಲಿ, ಈ ವಾರ “ಹೀರೋ’ ಸಿನಿಮಾ ರಿಲೀಸ್ ಮಾಡುತ್ತಿದ್ದೇವೆ’ ಎನ್ನುತ್ತಾರೆ.
“ಈ ವಾರ ಕರ್ನಾಟಕ ರಾಜ್ಯಾದ್ಯಂತ ಸುಮಾರು 160ಕ್ಕೂ ಅಧಿಕ ಸೆಂಟರ್‌ಗಳಲ್ಲಿ “ಹೀರೋ’ ಸಿನಿಮಾ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವೆ. ಜೊತೆಗೆ ಕರ್ನಾಟಕದ ಹೊರಗಿನ ಕೆಲವು ರಾಜ್ಯಗಳಲ್ಲೂ ಸಿನಿಮಾ ರಿಲೀಸ್ ಆಗುತ್ತಿದೆ. ನಾಲ್ಕು ವಾರಗಳ ನಂತರ ಸಿನಿಮಾವನ್ನು ಓವರ್‌ಸೀಸ್ ಕೂಡ ರಿಲೀಸ್ ಮಾಡುವ ಪ್ಲಾನ್ ಮಾಡಿಕೊಳ್ಳುತ್ತಿದ್ದೇವೆ’ ಎನ್ನುತ್ತಾರೆ ರಿಷಭ್ ಶೆಟ್ಟಿ.
ಒಟ್ಟಾರೆ ಹೊಸ ವರ್ಷದಲ್ಲಿ ತೆರೆಮೇಲೆ “ಹೀರೋ’ ಮೂಲಕ ಹೊಸ ಎಂಟ್ರಿ ಕೊಡಲು ರೆಡಿಯಾಗಿರುವ ರಿಷಭ್ ಶೆಟ್ಟಿ, ಪ್ರೇಕ್ಷಕ ಪ್ರಭುಗಳಿಗೆ ಎಷ್ಟರ ಮಟ್ಟಿಗೆ ಇಷ್ಟವಾಗುತ್ತಾರೆ ಅನ್ನೋದನ್ನು ಕಾದು ನೋಡಬೇಕು.
ಜಿ. ಎಸ್. ಕಾರ್ತಿಕ ಸುಧನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.