ರಿಷಭ್ ವರ್ಕ್ ಫ್ರಂ ಹೋಮ್
Team Udayavani, Mar 22, 2020, 12:34 PM IST
ಕೋವಿಡ್ 19 ವೈರಸ್ ಭೀತಿಯ ಪರಿಣಾಮ ಬಹುತೇಕ ಉದ್ಯೋಗಿಗಳು “ವರ್ಕ್ ಫ್ರಂ ಹೋಂ’ ಮೊರೆ ಹೋಗಿದ್ದಾರೆ. ಇನ್ನು ಕೋವಿಡ್ 19 ಎಫೆಕ್ಟ್ನಿಂದ ಕನ್ನಡ ಚಿತ್ರಂಗವೂ ಹೊರತಾಗಿಲ್ಲ. ಆ ಭೀತಿ ಚಿತ್ರರಂಗದಲ್ಲೂ ಜೋರಾಗಿರುವುದರಿಂದ, ಚಿತ್ರರಂಗದ ಬಹುತೇಕ ಮಂದಿ ಕೂಡ “ವರ್ಕ್ ಫ್ರಂ ಹೋಂ’ ಮಂತ್ರ ಜಪಿಸುತ್ತಿದ್ದಾರೆ.
ಹೌದು, ಬಹುತೇಕ ನಟ,ನಟಿಯರೆಲ್ಲರೂ ಚಿತ್ರೀಕರಣಕ್ಕೆ ಹೋಗದೆ, ಮನೆಯಲ್ಲೇ ಇದ್ದಾರೆ. ಸಣ್ಣಪುಟ್ಟ ಕೆಲಸಗಳನ್ನು ಮಾಡು ಮೂಲಕ ಮನೆಯಿಂದ ಆಚೆ ಹೋಗದೆ ಮನೆಯವರ ಜೊತೆ ಕೆಲಸದಲ್ಲಿ ನಿರತರಾಗಿದ್ದಾರೆ. ಆ ಪೈಕಿ ಕನ್ನಡದ ನಟ ಕಂ ನಿರ್ದೇಶಕ ರಿಷಭ್ ಶೆಟ್ಟಿ ಕೂಡ “ವರ್ಕ್ ಫ್ರಂ ಹೋಂ’ನಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಬಿಡುವಿಲ್ಲದೆ ಸಿನಿಮಾ ಕೆಲಸದಲ್ಲಿ ಬ್ಯುಸಿ ಇರುತ್ತಿದ್ದ ರಿಷಭ್ ಶೆಟ್ಟಿಗೆ ಸದ್ಯ ಕೊರೊನಾ ಎಫೆಕ್ಟ್ ನಿಂದ ಕೊಂಚ ಬ್ರೇಕ್ ಸಿಕ್ಕಂತಿದೆ.
ಈಗಾಗಲೇ ತಮ್ಮ ಹುಟ್ಟೂರಿಗೆ ಸೇರಿಕೊಂಡಿರುವ ರಿಷಭ್ ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುತ್ತಿದ್ದಾರೆ. ಸದ್ಯ ತಮ್ಮ ಮಗ ರಣ್ವೀತ್ ಗೆ ಸ್ನಾನ ಮಾಡಿಸುವ ಮುನ್ನ ಎಣ್ಣೆ ಹಚ್ಚುತ್ತಿರುವ ಪೋಟೋವೊಂದನ್ನು ರಿಷಭ್ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದಾರೆ. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿರುವ ರಿಷಭ್, “ಊರೂರೇ ಖಾಲಿಯಾಗಿದೆ, ಆಫೀಸ್ ಬೀಗ ಹಾಕಿದೆ, ಸಿನಿಮಾದಿಂದ ಚಿಕ್ಕ ಬ್ರೇಕ್ ಸಿಕ್ಕಿದೆ. ಎಲ್ಲಾ ಆತಂಕಗಳನ್ನ ಹಿಂದೆ ಬಿಟ್ಟು ಹುಟ್ಟಿದೂರಲ್ಲಿ, ನಾನು ಬೆಳೆದಿದ್ ಮನೇಲಿ, ಮಗರಾಯನಿಗೆ ಮಜ್ಜನ ನೀಡೋ ನೆಮ್ಮದಿನೇ ಬೇರೆ! ಒಟ್ಟಾರೆ ಎಲ್ಲರ ತರ ನಮ್ಗೂ “ವರ್ಕ್ ಫ್ರಂ ಹೋಂ’ ಜೋರಾಗ್ ನಡೀತಿದೆ’ ಎಂದು ಬರೆದುಕೊಂಡಿದ್ದಾರೆ.
ಇನ್ನು ಈ ಟ್ವೀಟ್ ನೋಡಿದ ನೆಟ್ಟಿಗರು ಭರ್ಜರಿಯಾಗಿ ಕಮೆಂಟ್ಸ್ ಮಾಡುತ್ತಿದ್ದಾರೆ. ಇನ್ನು ರಿಷಭ್ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ನಟ ರಕ್ಷಿತ್ ಶೆಟ್ಟಿ, “ರಿಷಬ್ ಇದು ನಿನಗಾಗಿ, ನನ್ನ ಮುಗ್ಧತೆಯ ಅರಿವು ನನಗಿಲ್ಲ. ನನ್ನ ಹೆತ್ತವನೊಮ್ಮೆ ನೋಡು, ಅವನ ಮುಗ್ಧತೆಯಲ್ಲವೆ ನನಗೆಲ್ಲ’ ಎಂದು ಕವನ ಬರೆದು ವರ್ಣಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.