ರಿಷಿ ಈಗ ಸಕಲಕಲಾವಲ್ಲಭ
Team Udayavani, Jun 12, 2019, 3:01 AM IST
“ಆಪರೇಷನ್ ಅಲಮೇಲಮ್ಮ’ ಚಿತ್ರದ ಬಳಿಕ ನಟ ರಿಷಿ ಬ್ಯುಝಿಯಾಗಿದ್ದು ಗೊತ್ತೇ ಇದೆ. ಆ ನಂತರ ಅವರು ಪುನೀತ್‌ರಾಜಕುಮಾರ್ ನಿರ್ಮಾಣದ “ಕವಲುದಾರಿ’ ಚಿತ್ರದಲ್ಲಿ ಕಾಣಿಸಿಕೊಂಡರು. ಅದರ ಜೊತೆ ಜೊತೆಯಲ್ಲೇ ಅವರು “ರಾಮನ ಅವತಾರ’, “ಸಾರ್ವಜನಿಕರಲ್ಲಿ ವಿನಂತಿ’ ಸೇರಿದಂತೆ ಕೈಯಲ್ಲಿನ್ನೂ ಎರಡು ಹೊಸ ಚಿತ್ರಗಳನ್ನಿಟ್ಟುಕೊಂಡು ಬಿಝಿಯಾಗಿದ್ದಾರೆ. ಅದರ ಬೆನ್ನಲ್ಲೇ ಅವರೀಗ ಮತ್ತೂಂದು ಹೊಸ ಚಿತ್ರಕ್ಕೆ ಜೈ ಎಂದಿದ್ದಾರೆ.
ಹೌದು, ಈ ಹಿಂದೆ ರಿಷಿ ಅವರು ಜೇಕಬ್ ವರ್ಗೀಸ್ ನಿರ್ದೇಶನದ ಚಿತ್ರದಲ್ಲಿ ನಟಿಸುವುದಾಗಿ ಹೇಳಿಕೊಂಡಿದ್ದರು. ಆಗ ಆ ಚಿತ್ರಕ್ಕೆ ನಾಮಕರಣ ಮಾಡಿರಲಿಲ್ಲ. ಈಗ ನಿರ್ದೇಶಕ ಜೇಕಬ್ ವರ್ಗೀಸ್ ಅವರು ನಾಮಕರಣ ಮಾಡಿದ್ದಾರೆ. ಹೌದು, ರಿಷಿ ಅಭಿನಯಿಸುತ್ತಿರುವ ಚಿತ್ರಕ್ಕೆ “ಸಕಲಕಲಾವಲ್ಲಭ’ ಎಂದು ಹೆಸರಿಡಲಾಗಿದೆ. ಅಲ್ಲಿಗೆ ಇದು ಕೂಡ ಮನರಂಜನೆಯ ಸಿನಿಮಾ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ.
ರಿಷಿ ಇಟ್ಟುಕೊಂಡು ಆ್ಯಕ್ಷನ್ ಚಿತ್ರ ಮಾಡುವ ಧೈರ್ಯ ಮಾಡುವುದು ಕಡಿಮೆ. ಯಾಕೆಂದರೆ, ರಿಷಿ ಅವರ ಮೊದಲ ಚಿತ್ರ “ಆಪರೇಷನ್ ಅಲಮೇಲಮ್ಮ’ ಪಕ್ಕಾ ಮನರಂಜನಾತ್ಮಕವಾಗಿತ್ತು. ಅದರ ಬಳಿಕ ಅವರು ಒಪ್ಪಿಕೊಂಡ “ಕವಲುದಾರಿ’ ಕೂಡ ಹೊಸ ಜಾನರ್‌ನ ಕಥೆಯಾಗಿತ್ತು. ಈಗ ಅವರ ಕೈಯಲ್ಲಿರುವ “ಸಾರ್ವಜನಿಕರಲ್ಲಿ ವಿನಂತಿ’ ಮತ್ತು “ರಾಮನ ಅವತಾರ’ ಚಿತ್ರಗಳು ಸಹ ಆ್ಯಕ್ಷನ್ ಸಿನಿಮಾ ಅನ್ನುವುದನ್ನು ಒಪ್ಪಲು ಸಾಧ್ಯವಿಲ್ಲ.
ರಿಷಿ ಸದ್ಯಕ್ಕೆ ಬ್ಯುಝಿಯಾಗಿರುವುದಂತೂ ನಿಜ. ಎಷ್ಟರಮಟ್ಟಿಗೆ ಅಂದರೆ, ಅವರು ಮುಂದಿನ ಮಾರ್ಚ್‌ವರೆಗೂ ಯಾವುದೇ ಹೊಸ ಚಿತ್ರ ಒಪ್ಪಿಕೊಳ್ಳದಷ್ಟು ಬ್ಯುಝಿಯಂತೂ ಹೌದು. ಈಗ ಜೇಕಬ್ ವರ್ಗೀಸ್ ಅವರ ನಿರ್ದೇಶನದ “ಸಕಲ ಕಲಾವಲ್ಲಭ’ ಚಿತ್ರಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಈ ಚಿತ್ರ ಯಾವಾಗ ಶುರುವಾಗುತ್ತೆ, ಕಥೆಯ ಎಳೆ ಏನು, ಯಾರೆಲ್ಲಾ ಇರುತ್ತಾರೆ, ಎಲ್ಲೆಲ್ಲಿ ಚಿತ್ರೀಕರಣ ಆಗಲಿದೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಸದ್ಯಕ್ಕೆ ಉತ್ತರವಿಲ್ಲ.
ರಿಷಿ ಅವರನ್ನು ಹುಡುಕಿಕೊಂಡು ಹಲವು ಕಥೆಗಳು ಬರುತ್ತಿದ್ದರೂ, ರಿಷಿ ಮಾತ್ರ, ಯಾವ ಕಥೆಯನ್ನೂ ಓಕೆ ಮಾಡದೆ, ಸದ್ಯ ಕೈಯಲ್ಲಿರುವ ಚಿತ್ರಗಳನ್ನು ಮುಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ರಿಷಿ ಕಥೆ ಕೇಳಿದರೆ ಅದು ಮೊದಲು ಒಬ್ಬ ಪ್ರೇಕ್ಷಕನಾಗಿ ಅವರಿಗೆ ಇಷ್ಟವಾಗಬೇಕು. ಕಥೆಯಲ್ಲಿ ಹೀರೋಗೆ ಎಷ್ಟು ಇಂಪಾರ್ಟೆನ್ಸ್ ಇದೆ ಅನ್ನೋದಕ್ಕಿಂತ, ನೋಡುವವರಿಗೆ ಇಷ್ಟವಾಗುವ ಎಲಿಮೆಂಟ್ಸ್ ಏನಿದೆ ಅನ್ನೋದನ್ನ ಗಮನಿಸಿ, ಅದನ್ನು ಒಪ್ಪುತ್ತಾರಂತೆ. ಹಾಗಾಗಿ, ಅವರು ಎಷ್ಟೇ ಕಥೆ ಬಂದರೂ, ಅಳೆದು-ತೂಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಸ್ಕೂಟರಿಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ
Mangaluru: ಗುತ್ತಿಗೆದಾರ ಸಚಿನ್ ಪ್ರಕರಣ; ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.