

Team Udayavani, Jan 30, 2025, 2:10 PM IST
ರಿಷಿ ಅಭಿನಯದ, 2025ರ ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ “ರುದ್ರ ಗರುಡ ಪುರಾಣ’ ಕಳೆದ ವಾರ ತೆರೆಕಂಡು ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಇತ್ತೀಚೆಗೆ ಸಂಭ್ರಮವನ್ನು ಹಂಚಿಕೊಂಡು, ಚಿತ್ರತಂಡದವರು ಮಾಧ್ಯಮದೆದುರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಚಿತ್ರದ ತಂದೆ ಮಗನ ಬಾಂಧವ್ಯದ ಹಾಡೊಂದನ್ನು ಬಿಡುಗಡೆ ಮಾಡಲಾಯಿತು. ಜನರ ಒಲವೇ ಚಿತ್ರದ ಗೆಲುವು ಎಂದು ಮಾತು ಆರಂಭಿಸಿದಿ ರಿಷಿ, “ಚಿತ್ರ ನೋಡಿದವರೆಲ್ಲ ಸಕಾರಾತ್ಮಕವಾಗಿ ಮಾತನಾಡಿದ್ದಾರೆ. ವಿಮರ್ಶೆಗಳು ಚೆನ್ನಾಗಿ ಬಂದಿವೆ. ಇದು ಮನಸ್ಸಿಗೆ ತುಂಬಾ ಖುಷಿಯಾಗಿದೆ. ಐದು ದಿನಗಳಲ್ಲಿ ಚಿತ್ರಮಂದಿರಗಳ ಸಂಖ್ಯೆ ಕೂಡ ಗಣನೀಯವಾಗಿ ಹೆಚ್ಚಾಗಿದೆ. ತೆಲುಗು ಡಬ್ಬಿಂಗ್ ರೈಟ್ಸ್ ಸಹ ಉತ್ತಮ ಮೊತ್ತಕ್ಕೆ ಮಾರಾಟವಾಗಿದೆ’ ಎಂದರು.
ನಿರ್ಮಾಪಕ ಲೋಹಿತ್ ಹಾಗೂ ನಿರ್ದೇಶಕ ನಂದೀಶ್, ನಟರಾದ ಶಿವರಾಜ ಕೆ.ಆರ್. ಪೇಟೆ, ಗಿರೀಶ್ ಶಿವಣ್ಣ, ಛಾಯಾಗ್ರಾಹಕ ಸಂದೀಪ್ ಕುಮಾರ್, ಸಂಕಲನಕಾರ ಮನು ಶೇಡ್ಗಾರ್, ಸಂಭಾಷಣೆಗಾರ ರಘು ನಿಡುವಳ್ಳಿ ಮುಂತಾದವರು ರುದ್ರ ಗರುಡ ಪುರಾಣ ಚಿತ್ರದ ಯಶಸ್ಸನ್ನು, ತಮ್ಮ ಮಾತುಗಳ ಮೂಲಕ ಹಂಚಿಕೊಂಡರು.
Manipal: ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರೀಯ: ವ್ಯಕ್ತಿಯ ಅಂಗಾಂಗ ದಾನ
ಅಂಗನವಾಡಿಯ ಪೌಷ್ಠಿಕ ಸಾಮಗ್ರಿಗಳ ಅಕ್ರಮ ದಾಸ್ತಾನು: ಜಿಲ್ಲಾ ಉಪ ನಿರ್ದೇಶಕ, ಸಿಡಿಪಿಒ ಅಮಾನತು
ಭದ್ರಾವತಿಯಲ್ಲಿ ಫೈನಾನ್ಸ್ ಕಿರುಕುಳಕ್ಕೆ ವ್ಯಕ್ತಿ ಆತ್ಮಹ*ತ್ಯೆ
Congress: ದಲಿತ ಸಮಾವೇಶ ಬೇಡ ಅಂತ ಹೈಕಮಾಂಡ್ ಹೇಳಿಲ್ಲ: ಸಚಿವ ಕೆ.ಎಚ್. ಮುನಿಯಪ್ಪ
Dharawad: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹೈಕಮಾಂಡ್ ಗೆ ಬಿಟ್ಟದ್ದು: ಸಚಿವ ಲಾಡ್
You seem to have an Ad Blocker on.
To continue reading, please turn it off or whitelist Udayavani.