ಡಿಸೆಂಬರ್‌ನಲ್ಲಿ ರಿಷಿ ಹೊಸ ಚಿತ್ರ
ಶಶಾಂಕ್ ಮತ್ತು ಭಟ್ಟರ ಬಂಡವಾಳದ ಸಿನಿಮಾ
Team Udayavani, Oct 29, 2019, 3:02 AM IST
ಈ ಹಿಂದೆ ಯೋಗರಾಜ್ ಭಟ್ ಹಾಗೂ ಶಶಾಂಕ್ ಇವರಿಬ್ಬರ ನಿರ್ಮಾಣದಲ್ಲಿ ಸಿನಿಮಾವೊಂದು ಶುರುವಾಗಲಿದೆ ಎಂದು ಹೇಳಲಾಗಿತ್ತು. ಆ ಚಿತ್ರಕ್ಕೆ ರಿಷಿ ಹೀರೋ ಎನ್ನಲಾಗಿತ್ತು. ಆ ಚಿತ್ರ ಯಾವಾಗ ಶುರುವಾಗುತ್ತೆ ಎಂಬುದಕ್ಕೆ ಉತ್ತರ ಸಿಕ್ಕಿರಲಿಲ್ಲ. ಈಗ ಡಿಸೆಂಬರ್‌ನಲ್ಲಿ ಹೊಸ ಚಿತ್ರಕ್ಕೆ ಚಾಲನೆ ಸಿಗಲಿದೆ. ಸದ್ಯಕ್ಕೆ ಚಿತ್ರದ ಶೀರ್ಷಿಕೆ ಪಕ್ಕಾ ಆಗಿಲ್ಲ. ಈ ಕುರಿತು ಹೇಳುವ ಶಶಾಂಕ್, ” ಇದೇ ಮೊದಲ ಸಲ ಯೋಗರಾಜ್‌ಭಟ್ ಮತ್ತು ನಾನು ಸೇರಿಕೊಂಡು ರಿಷಿ ಚಿತ್ರ ನಿರ್ಮಿಸುತ್ತಿದ್ದೇವೆ.
ಇದೊಂದು ಮನರಂಜನೆಯ ಸಿನಿಮಾ. ಇಲ್ಲಿ “ಸೀರೆ’ ಪ್ರಮುಖ ಪಾತ್ರವಹಿಸಲಿದೆ. ಆದರೆ, ಆ ಸೀರೆ ಉಡುವ ನಾಯಕಿ ಯಾರು ಎಂಬುದು ಪಕ್ಕಾ ಆಗಿಲ್ಲ. ಇನ್ನು ಮೋಹನ್ ಸಿಂಗ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಯೋಗರಾಜ್ ಭಟ್ ಅವರೊಂದಿಗೆ ಕೆಲಸ ಮಾಡಿದ್ದ ಅವರಿಗೆ ಇದು ಮೊದಲ ನಿರ್ದೇಶನದ ಚಿತ್ರ’ ಎಂದು ವಿವರ ಕೊಡುತ್ತಾರೆ ಶಶಾಂಕ್. ಸದ್ಯಕ್ಕೆ ಈ ಚಿತ್ರದ ಹೀರೋ ರಿಷಿ. ಅವರನ್ನು ಹೊರತುಪಡಿಸಿದರೆ, ಕಲಾವಿದರ ಆಯ್ಕೆ ನಡೆಯಬೇಕಿದೆ.
ಅರ್ಜುನ್ ಜನ್ಯ ಅವರ ಸಂಗೀತವಿದೆ. ಜ್ಞಾನಮೂರ್ತಿ ಅವರ ಛಾಯಾಗ್ರಹಣವಿದೆ.ಅದೇನೆ ಇರಲಿ, ಇಬ್ಬರು ನಿರ್ದೇಶಕರು ಸೇರಿ ರಿಷಿಗೆ ಬಂಡವಾಳ ಹೂಡುತ್ತಿದ್ದಾರೆ. ಅಷ್ಟೇ ಅಲ್ಲ, ಪ್ರತಿಭಾವಂತ ನಿರ್ದೇಶಕರಿಗೆ ಅವಕಾಶ ಕೊಡುತ್ತಿದ್ದಾರೆ. ಅಂದಹಾಗೆ, ಯೋಗರಾಜ್‌ಭಟ್ ನಿರ್ದೇಶಿಸುತ್ತಿರುವ “ಗಾಳಿಪಟ 2′ ಚಿತ್ರಕ್ಕೆ ರಿಷಿ ಹೀರೋ ಎನ್ನಲಾಗಿತ್ತು. ಕೊನೆಯ ಕ್ಷಣದಲ್ಲಿ ರಿಷಿ ಆ ಚಿತ್ರದಲ್ಲಿ ಇಲ್ಲ ಎಂದು ಹೇಳಲಾಯಿತು. ಈಗ ಯೋಗರಾಜ್ ಭಟ್ ಅವರು ಶಶಾಂಕ್ ಜೊತೆ ನಿರ್ಮಿಸುತ್ತಿರುವ ಚಿತ್ರಕ್ಕೆ ರಿಷಿ ಅವರನ್ನು ಹೀರೋ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Desi Swara: ಜರ್ಮನಿಯಲ್ಲಿ ಮಕ್ಕಳಿಂದ ಪುಣ್ಯಕೋಟಿ ನೆರಳಿನಾಟ ವಿಭಿನ್ನ ಪ್ರದರ್ಶನ
Makar Sankranti: ರೇಷ್ಮೆ ಜರಿಯ ಸಂಕ್ರಮಣ ಸಂಭ್ರಮ: ಮಗಳು ನೆನಪಿಸಿದ ಅಮ್ಮನ ಬಾಲ್ಯದ ನೆನಪು
Makar Sankranti: ಹಂಪಿಗೆ ಹರಿದು ಬಂದ ಭಕ್ತ ಜನ ಸಾಗರ!
Mahakumbh Mela: ಮಕರ ಸಂಕ್ರಾಂತಿಯಂದು ಮಹಾಕುಂಭದಲ್ಲಿ ಸಾಧು ಸಂತರ ಶಾಹಿ ಸ್ನಾನ
Bengaluru: ಸಿಲಿಂಡರ್ ಸ್ಫೋ*ಟ; ಮಗು ಸೇರಿ ಐವರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.