ಕೊಡಗಿನ ಬೆಡಗಿಯ ಜಬರ್ದಸ್ತ್ ಆ್ಯಕ್ಷನ್
Team Udayavani, Sep 11, 2021, 10:45 AM IST
ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಆ್ಯಕ್ಷನ್ ಹೀರೋಯಿನ್ಸ್, ಫೀಮೇಲ್ ಆ್ಯಕ್ಷನ್ ಸಿನಿಮಾಗಳು ಬರುತ್ತಿಲ್ಲ ಎನ್ನುತ್ತಿದ್ದವರಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ. ರಿತನ್ಯಾ ಹೂವಣ್ಣ ಎಂಬ ಮಾಡೆಲಿಂಗ್ ಲೋಕದ ಪ್ರತಿಭೆ ಈಗ ಆ್ಯಕ್ಷನ್ ಹೀರೋಯಿನ್ ಆಗಿ, “ಮರ್ದಿನಿ’ ಸಿನಿಮಾದ ಮೂಲಕ ಸ್ಯಾಂಡಲ್ ವುಡ್‌ಗೆ ಪರಿಚಯವಾಗುತ್ತಿದ್ದಾರೆ.
ಹೌದು, ಕಳೆದ ಒಂದೂವರೆ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಆ್ಯಕ್ಷನ್ ಹೀರೋಯಿನ್ ಆಗಿ ಸಿನಿಪ್ರಿಯರ ಮುಂದೆಬಂದ ನಟಿಯರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಹೀಗಿರುವಾಗ ಸಹಜವಾಗಿಯೇ ಒಂದು ವರ್ಗದ ಆ್ಯಕ್ಷನ್ ಪ್ರಿಯ ಪ್ರೇಕ್ಷಕರು, ಹೊಸ ತಲೆಮಾರಿನ ಆ್ಯಕ್ಷನ್ ಹೀರೋಯಿನ್‌ಗಳ ಆಗಮನ ನಿರೀಕ್ಷೆಯಲ್ಲಿದ್ದಾರೆ. ಇಂಥ ಸಮಯದಲ್ಲಿ ರಿತನ್ಯಾ ಕನ್ನಡ ಚಿತ್ರರಂಗಕ್ಕೆ ಆ್ಯಕ್ಷನ್ ಹೀರೋಯಿನ್ ಆಗಿ ಪದಾರ್ಪಣೆ ಮಾಡುತ್ತಿದ್ದು, ಸಹಜವಾಗಿಯೇ “ಮರ್ದಿನಿ’ ಅವತಾರವೆತ್ತಿರುವ ರಿತನ್ಯಾ ಸಿನಿಮಾದ ಮೇಲೆ ನಿರೀಕ್ಷೆ, ಕುತೂಹಲಎರಡೂ ಹೆಚ್ಚಿದೆ.
ಇದನ್ನೂ ಓದಿ:ಸೆ.17ರಿಂದ ”ಜಿಗ್ರಿದೋಸ್ತ್” ಗಳ ಆಟ: ಸ್ನೇಹವೇ ಚಿತ್ರದ ಜೀವಾಳ
ಮಾಡೆಲಿಂಗ್‌ನಿಂದ ಚಿತ್ರರಂಗದತ್ತ “ಮರ್ದಿನಿ’ ಗೆಟಪ್‌ನಲ್ಲಿ ಸಿನಿಪ್ರಿಯರ ಮುಂದೆ ಬರುತ್ತಿರುವ ರಿತನ್ಯಾ ಹೂವಣ್ಣ ಮೂಲತಃ ಕೊಡಗಿನ ಬೆಡಗಿ. ಇಂಜಿನಿಯರಿಂಗ್ ಶಿಕ್ಷಣದ ಬಳಿಕ ಮಾಡೆಲಿಂಗ್‌ನತ್ತ ಮುಖ ಮಾಡಿದ ರಿತನ್ಯಾ, ಕಳೆದ ಕೆಲ ವರ್ಷಗಳಿಂದ ಮಾಡೆಲಿಂಗ್ ಲೋಕದಲ್ಲಿ ಸಕ್ರಿಯವಾಗಿರುವ ಹುಡುಗಿ. ಈಗಾಗಲೇ ಅನೇಕ ಜಾಹೀರಾತುಗಳು, ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಕಿರುತೆರೆಯಲ್ಲಿ ಗುರುತಿಸಿಕೊಂಡ ರಿತನ್ಯಾ, ಈಗ “ಮರ್ದಿನಿ’ ಸಿನಿಮಾದ ಮೂಲಕ ಹಿರಿತೆರೆ ಪ್ರವೇಶಿಸುತ್ತಿದ್ದಾರೆ. ಚಿತ್ರದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಿತನ್ಯಾ,ಖಡಕ್‌ಖಾಕಿ ತೊಟ್ಟು ತೆರೆಮೇಲೆ ಘರ್ಜಿಸಲಿದ್ದಾರೆ.
ಇತ್ತೀಚೆಗಷ್ಟೇ”ಮರ್ದಿನಿ’ ಚಿತ್ರದ ಫಸ್ಟ್‌ಲುಕ್ ಮತ್ತು ಟೀಸರ್ ಬಿಡುಗಡೆಯಾಗಿದ್ದು, ಮಾಸ್ ಸಿನಿಪ್ರಿಯರ ಗಮನ ಸೆಳೆಯುವಂತಿದೆ.ಈ ಮೂಲಕ ಕನ್ನಡಕ್ಕೊಬ್ಬಳು ಆ್ಯಕ್ಷನ್ ಹೀರೋಯಿನ್ ಸಿಗುವ ಭರವಸೆ ನೀಡುತ್ತಿದೆ ಚಿತ್ರತಂಡ.
“ಮರ್ದಿನಿ’ ಚಿತ್ರದಲ್ಲಿ ರಿತನ್ಯಾ ಜೊತೆಗೆ ಅಕ್ಷಯ್, ಮನೋಹರ್, ಮನಮೋಹನ ರಾಯ್, ಇಂಚರಾ, ಅನೂಪ್ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಅಕ್ಷಯ್ ಕಥೆ, ಗಜೇಂದ್ರ ಸಂಭಾಷಣೆ ಬರೆದಿದ್ದಾರೆ.
ಅರುಣ್ ಸುರೇಶ್ ಛಾಯಾಗ್ರಹಣ, ವಿಶ್ವ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಹಿತನ್ ಹಾಸನ್ ಸಂಗೀತವಿದೆ.ಈ ಹಿಂದೆ “ದೇವ್ರಂಥ ಮನುಷ್ಯ’ ಸಿನಿಮಾ ನಿರ್ದೇಶಿಸಿದ್ದ ಕಿರಣ್ “ಮರ್ದಿನಿ’ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಜಗದೀಶ್ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸಿದ್ದಾರೆ. ಸದ್ಯ “ಮರ್ದಿನಿ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದು, ಚಿತ್ರ ಸೆನ್ಸಾರ್ ಮುಂದಿದೆ.
ಜಿ. ಎಸ್. ಕಾರ್ತಿಕ ಸುಧನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
OTT Release Date: ಸೂಪರ್ ಹಿಟ್ ʼಭೈರತಿ ರಣಗಲ್ʼ ಓಟಿಟಿ ರಿಲೀಸ್‌ಗೆ ಡೇಟ್ ಫಿಕ್ಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.