ಕೊರೊನಾ ನಡುವೆಯೂ ಶೂಟಿಂಗ್ ಮುಗಿಸಿದ “ರಾಬರ್ಟ್’
ಏಪ್ರಿಲ್‌ನಲ್ಲಿ ಪ್ರೇಕ್ಷಕರ ಮುಂದೆ ದರ್ಶನ
Team Udayavani, Mar 16, 2020, 7:05 AM IST
ಸದ್ಯ ನಟ ದರ್ಶನ್ “ರಾಬರ್ಟ್’ ಗೆಟಪ್‌ನಲ್ಲಿ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಇತ್ತೀಚೆಗಷ್ಟೇ “ರಾಬರ್ಟ್’ ಚಿತ್ರದ ಲಿರಿಕಲ್ ವಿಡಿಯೋ ಹಾಡೊಂದನ್ನು ಬಿಡುಗಡೆಗೊಳಿಸಿದ್ದ ಚಿತ್ರತಂಡ, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಇದರ ನಡುವೆಯೇ ಈಗ ಚಿತ್ರತಂಡದ ಕಡೆಯಿಂದ “ರಾಬರ್ಟ್’ ಚಿತ್ರದ ಶೂಟಿಂಗ್ ಪೂರ್ಣಗೊಂಡಿದೆ ಎಂಬ ಸುದ್ದಿ ಹೊರ ಬಿದ್ದಿದೆ. ಅಂದಹಾಗೆ, ಈ ವಿಷಯವನ್ನು ಹಂಚಿಕೊಂಡಿರುವುದು ಸ್ವತಃ ದರ್ಶನ್.
ಹೌದು, ಈ ಮೊದಲು “ರಾಬರ್ಟ್’ ಚಿತ್ರದ ಬಹುತೇಕ ಮಾತಿನ ಭಾಗ ಚಿತ್ರೀಕರಿಸಿದ್ದ ಚಿತ್ರತಂಡ, ಚಿತ್ರದ ಬಾಕಿಯಿರುವ ದೃಶ್ಯಗಳನ್ನು ಚಿತ್ರೀಕರಿಸಲು ವಿದೇಶದಲ್ಲಿ ಚಿತ್ರೀಕರಿಸಲು ಪ್ಲಾನ್ ಮಾಡಿಕೊಂಡಿತ್ತು. ಆದರೆ ಜಗತ್ತಿನ ಎಲ್ಲೆಡೆ ಕೊರೋನಾ ವೈರಸ್ ಆತಂಕ ಮನೆ ಮಾಡಿದ್ದರಿಂದ, ವಿದೇಶ ಚಿತ್ರೀಕರಣ ರದ್ದು ಮಾಡಿದ್ದ ಚಿತ್ರತಂಡ ಬಾಕಿಯಿರುವ ಚಿತ್ರದ ದೃಶ್ಯಗಳನ್ನು ಭಾರತದಲ್ಲೇ ಚಿತ್ರೀಕರಣ ಮಾಡಲು ಪ್ಲಾನ್ ಮಾಡಿಕೊಂಡಿತ್ತು.
ಅದರಂತೆ ಈಗ ಚಿತ್ರತಂಡ, ಕೊರೋನಾ ಭಯದ ನಡುವೆಯೇ ಸದ್ದಿಲ್ಲದೆ ಭಾರತದಲ್ಲಿಯೇ ಚಿತ್ರೀಕರಣ ಮಾಡಿ ಮುಗಿಸಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ನಟ ದರ್ಶನ್, ಚಿತ್ರದ ಶೂಟಿಂಗ್ ಮುಗಿಸಿರುವ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ಶೂಟಿಂಗ್ ಮುಗಿಸಿದ ಚಿತ್ರತಂಡದ ಜೊತೆ ಪೋಟೋವನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿರುವ ದರ್ಶನ್, “ರಾಬರ್ಟ್’ ಚಿತ್ರೀಕರಣ ಮುಕ್ತಾಯವಾಗಿದೆ. ಏಪ್ರಿಲ್‌ನಲ್ಲಿ ನಿಮ್ಮ ಮುಂದೆ ಬರಲು ನಾವ್ ರೆಡಿ. ನಿಮ್ಮ ದಾಸ ದರ್ಶನ್’ ಎಂದು ಬರೆದುಕೊಂಡಿದ್ದಾರೆ.
Shooting wrapped up for #Roberrt today ?
ಏಪ್ರಿಲ್ ತಿಂಗಳಲ್ಲಿ ನಿಮ್ಮ ಮುಂದೆ ಬರಲು ನಾವ್ ರೆಡಿ.ನಿಮ್ಮ ದಾಸ ದರ್ಶನ್@TharunSudhir @umap30071 @StarAshaBhat pic.twitter.com/sOMpGFhhq6
— Darshan Thoogudeepa (@dasadarshan) March 12, 2020
ಚಿತ್ರತಂಡದ ಮೂಲಗಳ ಪ್ರಕಾರ, “ರಾಬರ್ಟ್’ ಚಿತ್ರ ಬಹುನಿರೀಕ್ಷಿತ ಹಾಡೊಂದನ್ನು ವಿದೇಶಿ ಲೊಕೇಶನ್‌ನಲ್ಲಿ ಸೆರೆಹಿಡಿಯಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದ್ದು, ಕೊನೆಗೆ ಕೊರೋನಾ ಕಾರಣದಿಂದ ವಿದೇಶಿ ಶೂಟಿಂಗ್ ರದ್ದು ಮಾಡಿದ್ದ ಚಿತ್ರತಂಡಕ್ಕೆ ಅಂಥದ್ದೇ ಲೊಕೇಶನ್ ಗುಜರಾತ್‌ನ ಕಛ… ಪ್ರದೇಶದಲ್ಲಿ ಸಿಕ್ಕಿದ್ದರಿಂದ ಅಲ್ಲೇ ಚಿತ್ರತಂಡ ಸದ್ದಿಲ್ಲದೆ ಚಿತ್ರೀಕರಣ ಮಾಡಿ ಮುಗಿಸಿದೆ ಎನ್ನಲಾಗುತ್ತಿದೆ.
ಒಟ್ಟಾರೆ “ರಾಬರ್ಟ್’ ಚಿತ್ರೀಕರಣ ತಡವಾಗುತ್ತಿರುವುದರಿಂದ, ರಿಲೀಸ್ ಡೇಟ್ ಮುಂದಕ್ಕೆ ಹೋಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿತ್ತು. ಚಿತ್ರ ಏಪ್ರಿಲ್ ತಿಂಗಳಿನಲ್ಲಿ ತೆರೆಗೆ ಬರಲಿದೆಯಾ ಎಂಬ ಅನುಮಾನ ಅಭಿಮಾನಿಗಳಲ್ಲಿದ್ದು, ಈಗ ಸ್ವತಃ ದರ್ಶನ್ ಅವರೇ ಈ ಬಗ್ಗೆ ಸ್ಪಷ್ಟನೆ ನೀಡಿರುವುದರಿಂದ, ಏಪ್ರಿಲ್ ವೇಳೆಗೆ “ರಾಬರ್ಟ್’ ದರ್ಶನ ಪಕ್ಕಾ ಎನ್ನುವ ಖುಷಿಯಲ್ಲಿದ್ದಾರೆ ದರ್ಶನ್ ಫ್ಯಾನ್ಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.