“ರಾಬರ್ಟ್’ ಫಸ್ಟ್‌ಲುಕ್ ಮೋಶನ್ ಪೋಸ್ಟರ್ ರಿಲೀಸ್
ಮಾಸ್ ಲುಕ್‌ನಲ್ಲಿ ಎಂಟ್ರಿಕೊಟ್ಟ "ಡಿ ಬಾಸ್'; ಪ್ರೇಕ್ಷಕರಿಗೆ ಹೊಸ ಗೆಟಪ್ "ದರ್ಶನ'
Team Udayavani, Dec 26, 2019, 7:05 AM IST
ನಿರೀಕ್ಷೆಯಂತೆಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಮುಂಬರುವ ಚಿತ್ರ “ರಾಬರ್ಟ್’ನ ಫಸ್ಟ್‌ಲುಕ್ ಮೋಶನ್ ಪೋಸ್ಟರ್ ಕ್ರಿಸ್‌ಮಸ್ ಹಬ್ಬದ ಸಂದರ್ಭದಲ್ಲಿ ಅದ್ಧೂರಿಯಾಗಿ ಹೊರಬಂದಿದೆ. ಚಿತ್ರತಂಡ ಮೊದಲೇ ತಿಳಿಸಿದಂತೆ, ಬುಧವಾರ (ಡಿ. 25) ಬೆಳಿಗ್ಗೆ 11.45ಕ್ಕೆ “ರಾಬರ್ಟ್’ ಚಿತ್ರದ ಫಸ್ಟ್‌ಲುಕ್ ಮೋಶನ್ ಪೋಸ್ಟರ್ ಸೋಶಿಯಲ್ ಮೀಡಿಯಾಗಳ ಮೂಲಕ ಬಿಡುಗಡೆಯಾಗಿದ್ದು, ದರ್ಶನ್ ಹೊಸ ಗೆಟಪ್, ಡಿಫರೆಂಟ್ ಲುಕ್‌ಗೆ ಅಭಿಮಾನಿಗಳ ಗಮನ ಸೆಳೆಯಲು ಯಶಸ್ವಿಯಾಗಿದೆ.
ದರ್ಶನ್ ಅಭಿನಯದ ಇತ್ತೀಚಿನ ಬಹುತೇಕ ಚಿತ್ರಗಳ ಟೀಸರ್‌ನಲ್ಲಿ “ಬಾಸ್’ ಅಥವಾ “ಡಿ ಬಾಸ್’ ಎನ್ನುವ ಹೆಸರುಗಳು ಹೆಚ್ಚಾಗಿ ಕಾಣುತ್ತಿದ್ದು, ಈ ಹಿಂದೆ ಬಂದ “ಯಜಮಾನ’ ಚಿತ್ರದಲ್ಲೂ ಈ ಪದ ಒಂದಷ್ಟು ಸೌಂಡ್ ಮಾಡಿತ್ತು. ಈಗ “ರಾಬರ್ಟ್’ ಫಸ್ಟ್‌ಲುಕ್ ಮೋಶನ್ ಟೀಸರ್‌ನಲ್ಲೂ ಅದು ಮುಂದುವರೆದಿದ್ದು, “ರಾಬರ್ಟ್’ ಚಿತ್ರದ ಮೋಶನ್ ಪೋಸ್ಟರ್‌ನಲ್ಲಿ ಬರುವ ಜೀಪ್‌ನ ನಂಬರ್ ಪ್ಲೇಟ್‌ನಲ್ಲಿ ನಂಬರ್ ಬದಲು “ಬಾಸ್’ ಎಂದು ಬರೆಯಲಾಗಿದೆ.
ಈ ಮೂಲಕ ನಿರ್ದೇಶಕ ತರುಣ್ ಸುಧೀರ್ ಮತ್ತೂಮ್ಮೆ “ರಾಬರ್ಟ್’ ಟೀಸರ್‌ನಲ್ಲಿ ದರ್ಶನ್ ಅಭಿಮಾನಿಗಳಿಗೆ “ಬಾಸ್’ ನಾಮ ಸ್ಮರಣೆ ಮಾಡಿಸಿದ್ದಾರೆ. ಇನ್ನು ಬಹುತೇಕ ಅಂತಿಮ ಹಂತದ ಚಿತ್ರೀಕರಣಕ್ಕೆ ಬಂದಿರುವ “ರಾಬರ್ಟ್’, ಉತ್ತರ ಪ್ರದೇಶದ ವಾರಣಾಸಿ ಸದ್ಯ ತನ್ನ ಕೊನೆ ಹಂತದ ಚಿತ್ರೀಕರಣದಲ್ಲಿ ನಿರತವಾಗಿದೆ. “ರಾಬರ್ಟ್’ ಚಿತ್ರದಲ್ಲಿ ದರ್ಶನ್‌ಗೆ ನಾಯಕಿಯಾಗಿ ಆಶಾ ಭಟ್ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದು,
ರಾಬರ್ಟ್ ಚಿತ್ರದ ಫರ್ಸ್ಟ್ ಲುಕ್ ಎಲ್ಲರಿಗೂ ಖುಷಿ ನೀಡಿದೆ ಎಂದುಕೊಳ್ಳುತ್ತೀವಿ ? ನಿಮ್ಮ ಪ್ರೀತಿ ಪ್ರೋತ್ಸಾಹ ಸದಾ ಹೀಗೆ ಇರಲಿhttps://t.co/qi0MkpvsYU
ನಿಮ್ಮ ದಾಸ ದರ್ಶನ್#RoberrtFirstLook #Roberrt #RoberrtMotionPoster pic.twitter.com/d0vONnJQTX
— Darshan Thoogudeepa (@dasadarshan) December 25, 2019
ಉಳಿದಂತೆ ವಿನೋದ್ ಪ್ರಭಾಕರ್, ತೆಲುಗು ನಟ ಜಗಪತಿ ಬಾಬು, ರವಿ ಕಿಶನ್, ತೇಜಸ್ವಿನಿ ಪ್ರಕಾಶ್ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕಿಚ್ಚ ಸುದೀಪ್ ಅಭಿನಯದ “ಹೆಬ್ಬುಲಿ’ ಚಿತ್ರವನ್ನು ನಿರ್ಮಿಸಿದ್ದ ಉಮಾಪತಿ ಶ್ರೀನಿವಾಸ ಗೌಡ ಈ ಚಿತ್ರ ನಿರ್ಮಿಸುತ್ತಿದ್ದು, ತರುಣ್ ಸುಧೀರ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆಯಿದ್ದು, 2020ರ ಮಧ್ಯ ಭಾಗದಲ್ಲಿ “ರಾಬರ್ಟ್’ ತೆರೆಗೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
TODAY EXCLUSIVE PHOTOS
ತೂಗುದೀಪ ನಿಲಯದಲ್ಲಿ #RoberrtMotionPoster Release ಹಾಗೂ ಕ್ರಿಸ್‌ಮಸ್ Festival Celebration ???@dasadarshan @TharunSudhir @Mgramamurthy @Dcompany171 pic.twitter.com/mdvKdiw0Nv— Thoogudeepa ‘D’ Team – R (@DTEAM7999) December 25, 2019
ಒಟ್ಟಾರೆ ಈಗಾಗಲೇ ಬಿಡುಗಡೆಯಾಗಿರುವ “ರಾಬರ್ಟ್’ ಚಿತ್ರದ ಫಸ್ಟ್‌ಲುಕ್ ಪೋಸ್ಟರ್, ಮೋಶನ್ ಟೀಸರ್ ಎಲ್ಲದಕ್ಕೂ ಸೋಶಿಯಲ್ ಮೀಡಿಯಾಗಳಲ್ಲಿ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದ್ದು, ದರ್ಶನ್ ಅಭಿಮಾನಿಗಳಂತೂ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಯ ಮಾತುಗಳನ್ನಾಡುತ್ತಿದ್ದಾರೆ. “ರಾಬರ್ಟ್’ ತೆರೆಮೇಲೆ ಹೇಗೆ ಕಾಣುತ್ತಾನೆ, ಎಷ್ಟರ ಮಟ್ಟಿಗೆ ಪ್ರೇಕ್ಷಕರಿಗೆ ಇಷ್ಟವಾಗುತ್ತಾನೆ ಅನ್ನೋ ಕುತೂಹಲಕ್ಕೆ ಉತ್ತರ ಸಿಗಬೇಕಾದರೆ ಇನ್ನೂ ಕೆಲವು ತಿಂಗಳು ಕಾಯಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.