ಸಂಕ್ರಾಂತಿಗೆ ಆಂಜನೇಯನ ಅವತಾರ ಪಡೆದ ದಾಸ: ರಾಬರ್ಟ್ 2ನೇ ಮೋಷನ್ ಪೋಸ್ಟರ್ ರಿಲೀಸ್
Team Udayavani, Jan 15, 2020, 1:00 PM IST
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ‘ರಾಬರ್ಟ್’ ಸಿನಿಮಾದ ಎರಡನೇ ಮೋಷನ್ ಪೋಸ್ಟರ್ ಸಂಕ್ರಾಂತಿ ಹಬ್ಬವಾದ ಇಂದು ಬಿಡುಗಡೆಗೊಂಡಿದೆ.
ಆನಂದ್ ಆಡಿಯೋದ ಯೂಟ್ಯೂಬ್ ಪೇಜ್ನಲ್ಲಿ ಈ ವಿಡಿಯೋ ಅಪ್ಲೋಡ್ ಆಗಿದ್ದು, ಕೆಲವೇ ಕ್ಷಣಗಳಲ್ಲಿ 2.5 ಲಕ್ಷದಷ್ಟು ವೀಕ್ಷಣೆಯನ್ನು ಕಂಡಿದೆ. ಚಿತ್ರದ ಮುಖ್ಯಭೂಮಿಕೆಯಲ್ಲಿ ದರ್ಶನ್ ಜತೆಗೆ ವಿನೋದ್ ಪ್ರಭಾಕರ್, ಆಶಾ ಭಟ್, ಜಗಪತಿ ಬಾಬು, ರವಿ ಕಿಶನ್ ಮತ್ತಿತರರು ನಟಿಸುತ್ತಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ದರ್ಶನ್, “ಎಲ್ಲರಿಗೂ ವರ್ಷದ ಮೊದಲನೆಯ ಹಬ್ಬ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. ಎಳ್ಳು, ಬೆಲ್ಲ ಸವಿಯುತ್ತಾ ನಮ್ಮ ರಾಬರ್ಟ್ ಚಿತ್ರದ ಎರಡನೇ ಲುಕ್ ಪೋಸ್ಟರ್ ನಿಮಗಾಗಿ ಬಿಡುಗಡೆ ಮಾಡುತ್ತಿದ್ದೇವೆ. ನೋಡಿ ಆಶೀರ್ವದಿಸಿ” ಎಂದು ಬರೆದುಕೊಂಡಿದ್ದಾರೆ.
ಎಲ್ಲರಿಗೂ ವರ್ಷದ ಮೊದಲನೆಯ ಹಬ್ಬ ಮಕರ ಸಂಕ್ರಾಂತಿಯ ಹಾರ್ಧಿಕ ಶುಭಾಶಯಗಳು ?
ಎಳ್ಳು ಬೆಲ್ಲ ಸವಿಯುತ್ತಾ ನಮ್ಮ #Roberrt ಚಿತ್ರದ #RoberrtSecondLook ಮೋಷನ್ ಪೋಸ್ಟರ್ ನಿಮಗಾಗಿ ಬಿಡುಗಡೆ ಮಾಡುತ್ತಿದ್ದೇವೆ. ನೋಡಿ ಆಶೀರ್ವದಿಸಿ ?https://t.co/0TJYRLQXdC#HappySankranti
— Darshan Thoogudeepa (@dasadarshan) January 15, 2020
ಮೋಷನ್ ಪೋಸ್ಟರ್ 53 ಸೆಕೆಂಡ್‍ಗಳಿದ್ದು ದರ್ಶನ್ ಆಂಜನೇಯ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಹೆಗಲ ಮೇಲೆ ರಾಮನ ಪಾತ್ರದ ಮಗುವನ್ನು ಕೂರಿಸಿಕೊಂಡಿದ್ದಾರೆ. ಪುಟ್ಟ ರಾಮ ರಾವಣನ ಪ್ರತಿಕೃತಿಯನ್ನು ದಹಿಸಲು ಬಿಲ್ಲು ಹಿಡಿದಿರುವುದನ್ನು ಕಾಣಬಹುದಾಗಿದೆ.
‘ರಾಬರ್ಟ್’ ಸಿನಿಮಾದಲ್ಲಿ ಆಂಜನೇಯನ ಅವತಾರದಲ್ಲಿ ದರ್ಶನ್ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿರುವುದು ಸುಳ್ಳಲ್ಲ. ಮಾತ್ರವಲ್ಲದೆ ಚಿತ್ರ ಬಹಳ ನಿರೀಕ್ಷೆಯನ್ನು ಹುಟ್ಟಿಸಿದೆ.
ಉಮಾಪತಿ ಫಿಲಂಸ್ ಬ್ಯಾನರ್ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ತರುಣ್ ಸುಧೀರ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ದರ್ಶನ್ ಅವರಿಗೆ ನಟಿ ಆಶಾ ಭಟ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ‘ರಾಬರ್ಟ್’ಮೂಲಕ ದರ್ಶನ್ ಮೊದಲ ಬಾರಿಗೆ ತ್ರಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಪೊಲೀಸರ ಬೇಟೆ; 26 ಕೋಟಿ ರೂ. ಮಾದಕ ವಸ್ತು ವಶ
Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು
Karavali Utsava: ಡಿ.21-ಜ.19: ಮಂಗಳೂರಿನಲ್ಲಿ ಕರಾವಳಿ ಉತ್ಸವ; ದ.ಕ ಜಿಲ್ಲಾಧಿಕಾರಿ ಮಾಹಿತಿ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Shirva: ಏಷ್ಯನ್ ಜೂನಿಯರ್ ವೇಟ್‌ಲಿಫ್ಟಿಂಗ್ ತೀರ್ಪುಗಾರರಾಗಿ ಶಿರ್ವದ ಕೃಷ್ಣರಾಜ್.ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.