ಸಿನಿಮಾ ಬಿಡುಗಡೆಗೆ ಅನುಮತಿ ಸಿಕ್ಕ ಮೂರು ವಾರಗಳ ನಂತರ ರಾಬರ್ಟ್ ರಿಲೀಸ್
Team Udayavani, May 6, 2020, 10:55 AM IST
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ರಾಬರ್ಟ್ ಚಿತ್ರ ಇಷ್ಟೊತ್ತಿಗೆ ಬಿಡುಗಡೆಯಾಗಬೇಕಿತ್ತು. ಆದರೆ ಕೋವಿಡ್ 19 ದಿಂದಾಗಿ ಚಿತ್ರ ಬಿಡುಗಡೆ ಮುಂದಕ್ಕೆ ಹೋಗಿದೆ. ಹಾಗಾದರೆ ಸಿನಿಮಾ ಬಿಡುಗಡೆ ಯಾವಾಗ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಅನೇಕರು ಚಿತ್ರ ಆಗಸ್ಟ್ 15 ರಂದು ತೆರೆಕಾಣುತ್ತದೆ ಎನ್ನುತ್ತಿದ್ದಾರೆ.
ಈ ಬಗ್ಗೆ ನಿರ್ದೇಶಕ ತರುಣ್ ಸುಧೀರ್ ಏನು ಹೇಳುತ್ತಾರೆ ಎಂದು ನೀವು ಕೇಳಬಹುದು. ಆದರೆ ತರುಣ್ ಮಾತ್ರ ಈ ಬಗ್ಗೆ ಈಗಲೇ ಹೇಳಲು ತಯಾರಿಲ್ಲ. ಸದ್ಯಕ್ಕೆ ಲಾಕೌ ಡೌನ್ ಯಾವಾಗ ಕ್ಲಿಯರ್ ಆಗುತ್ತದೆ ಎಂಬುದು ಸ್ಪಷ್ಟವಿಲ್ಲ. ಹಾಗಾಗಿ ಈಗಲೇ ನಾವು ಚಿತ್ರ ಬಿಡುಗಡೆಯ ದಿನಾಂಕ ಹೇಳ್ಳೋದು ಸರಿಯಲ್ಲ. ಆದರೆ, ನಾವಂತೂ ರೆಡಿ. ಸಿನಿಮಾ ಬಿಡುಗಡೆಗೆ ಅನುಮತಿ ಸಿಕ್ಕ ಮೂರು ವಾರಗಳ ನಂತರ ನಾವು ಬರುತ್ತೇವೆ. ಆ ಮೂರು ವಾರ ಪಬ್ಲಿಸಿಟಿ ಮಾಡುತ್ತೇವೆ ಎನ್ನುವುದು ತರುಣ್ ಮಾತು.
ರಾಬರ್ಟ್ ಚಿತ್ರದ ಮೇಲೆ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿದೆ. “ರಾಬರ್ಟ್’ ಮೇಲೆ ಅಭಿಮಾನಿಗಳು ಎಷ್ಟರ ಮಟ್ಟಿಗೆ ಪ್ರೀತಿ ತೋರಿಸುತ್ತಾರೋ ಅದಕ್ಕಿಂತ ಹೆಚ್ಚಿನ ನಿರೀಕ್ಷೆ ಇಡೀ ಚಿತ್ರರಂಗ ಇಟ್ಟಿದೆ. ಈ ವರ್ಷದ ಬಿಗ್ ರಿಲೀಸ್ ಸಾಲಿನಲ್ಲಿ “ರಾಬರ್ಟ್’ ನಿಂತಿದೆ. ಸಾಮಾನ್ಯವಾಗಿ ದರ್ಶನ್ ಸಿನಿಮಾ ಬಿಡುಗಡೆಯಾಗುತ್ತದೆ ಎಂದರೆ ಅದು ಅವರ ಅಭಿಮಾನಿಗಳ ಪಾಲಿಗೆ ದೊಡ್ಡ ಹಬ್ಬವಾಗಿರುತ್ತದೆ. ಆದರೆ, “ರಾಬರ್ಟ್’ ಚಿತ್ರ ಅತಿ ದೊಡ್ಡ ಹಬ್ಬವಾಗುವ ಲಕ್ಷಣಗಳನ್ನು ತೋರುತ್ತಿದೆ.
ಈಗಾಗಲೇ ಈ ಚಿತ್ರದ ಪ್ರೀರಿಲೀಸ್ ಬಿಝಿನೆಸ್ ವಿಚಾರಗಳು ಕೂಡಾ ದೊಡ್ಡ ಮೊತ್ತದಲ್ಲೇ ಕೇಳಿಬರುತ್ತಿದೆ. ಜೊತೆಗೆ ಸ್ಯಾಟ್ ಲೈಟ್, ಡಿಜಿಟಲ್ ರೈಟ್ಸ್‌ಗಳು ಕೂಡಾ ದಾಖಲೆ ಬೆಲೆಗೆ ಮಾರಾಟವಾಗಿವೆ ಎಂಬ ಸುದ್ದಿಯೂ ಗಾಂಧಿನಗರದಲ್ಲಿ ಕೇಳಿಬರುತ್ತಿದ್ದು, ಸದ್ಯ “ರಾಬರ್ಟ್’ ಟಾಕ್ ಆಫ್ ದಿ ಟೌನ್ ಆಗಿರೋದಂತೂ ಸುಳ್ಳಲ್ಲ. ಈಗಾಗಲೇ ಚಿತ್ರದ ಎರಡು ಹಾಡುಗಳು ಬಿಡುಗಡೆಯಾಗಿವೆ. ಅದರಲ್ಲೂ ದರ್ಶನ್ ಅವರು ಹನುಮನ ಗೆಟಪ್‌ನಲ್ಲಿ ಕಾಣಿಸಿಕೊಂಡು ಸ್ಟೆಪ್ ಹಾಕಿರೋದು ಸಖತ್ ವೈರಲ್ ಆಗಿದೆ. ದರ್ಶನ್ ಅಭಿಮಾನಿಗಳು ಆ ಸ್ಟೆಪ್ ಅನ್ನು ಟಿಕ್‌ಟಾಕ್ ಮಾಡಿ, ಅಭಿಮಾನಿ ಸಂಘಗಳ ಸೋಶಿಯಲ್ ಮೀಡಿಯಾಗಳಲ್ಲಿ ಅಪ್‌ಲೋಡ್ ಮಾಡುತ್ತಿದ್ದಾರೆ. ಈ ಮೂಲಕ “ರಾಬರ್ಟ್’ ಚಿತ್ರವನ್ನು ಪ್ರಮೋಟ್ ಮಾಡುತ್ತಿದ್ದಾರೆ.
ಇನ್ನು, ಎಲ್ಲವೂ ಅಂದುಕೊಂಡಂತೆ ಆಗಿದ್ದರೆ “ರಾಬರ್ಟ್’ ಚಿತ್ರದ ಹಾಡಿನ ಚಿತ್ರೀಕರಣಕ್ಕೆ ಚಿತ್ರತಂಡ ವಿದೇಶಕ್ಕೆ ಹೋಗಬೇಕಿತ್ತು. ಆದರೆ, ಕೋವಿಡ್ 19 ಎಫೆಕ್ಟ್ ನಿಂದಾಗಿ ಚಿತ್ರತಂಡ ವಿದೇಶ ಪ್ರವಾಸವನ್ನು ಕೈಬಿಟ್ಟು ಗುಜರಾತ್‌ನ ಕಛ್ ನಲ್ಲಿ ಚಿತ್ರೀಕರಣ ಹಾಡಿನ ಚಿತ್ರೀಕರಣ ಮಾಡಿದೆ.ಇನ್ನು “ರಾಬರ್ಟ್’ ಚಿತ್ರದಲ್ಲಿ ದರ್ಶನ್‌ಗೆ ನಾಯಕಿಯಾಗಿ ಆಶಾ ಭಟ್ ಕಾಣಿಸಿಕೊಂಡರೆ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಕೂಡಾ ಪ್ರಮುಖ ಪಾತ್ರ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ
Udupi: ವಕ್ಫ್ ಬೋರ್ಡ್ ಭೂ ಕಬಳಿಕೆ ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
Malpe ಫಿಶರೀಸ್ ಕಾಲೇಜು: ದುರ್ವಾಸನೆಯಲ್ಲೇ ಪಾಠ
Kaup: ಎರ್ಮಾಳು-ಉಚ್ಚಿಲ-ಮೂಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಕತ್ತಲೆಗೆ ಮುಕ್ತಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.