ರಾಬರ್ಟ್ ರಿಲೀಸ್ ಮುಂದಕ್ಕೆ
Team Udayavani, Mar 27, 2020, 12:26 PM IST
ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಏಪ್ರಿಲ್ 09ಕ್ಕೆ ಬಿಡುಗಡೆಯಾಗಬೇಕಿತ್ತು. ಚಿತ್ರತಂಡ ಕೂಡಾ ಅದೇ ತಯಾರಿಯಲ್ಲಿತ್ತು. ಆದರೆ ಈಗ ಬಿಡುಗಡೆ ಮುಂದಕ್ಕೆ ಹೋಗಿದೆ. ದೇಶದಲ್ಲಿ ಏಪ್ರಿಲ್ 14ರವರೆಗೆ ಲಾಕ್ ಡೌನ್ ಇರೋದರಿಂದ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದೆ. ಇದರಿಂದ ಅಭಿಮಾನಿಗಳು ಖುಯಾಗಿದ್ದಾರೆ.
ಸಾಮಾನ್ಯವಾಗಿ ಸ್ಟಾರ್ ಸಿನಿಮಾಗಳು ಮುಂದಕ್ಕೆ ಹೋದರೆ ಅಭಿಮಾನಿಗಳು ಬೇಸರಗೊಳ್ಳುತ್ತಾರೆ. ಆದರೆ ಈ ಬಾರಿ ಖುಯಾಗಿದ್ದಾರೆ. ಕೋವಿಡ್ 19 ಮಧ್ಯೆ ಸಿನಿಮಾ ಬಿಡುಗಡೆ ಮಾಡೋದು ಅಭಿಮಾನಿಗಳಿಗೆ ಇಷ್ಟರಲಿಲ್ಲ. ಜನ ಚಿತ್ರಮಂದಿರಕ್ಕೆ ಬರಲು ಹೆದರುತ್ತಿರುವ ಹೊತ್ತಲ್ಲಿ ಸ್ಟಾರ್ ಸಿನಿಮಾ ಬಿಡುಗಡೆಮಾಡೋದು ಸರಿಯಲ್ಲ ಎಂಬ ಭಾವನೆ ಅಭಿಮಾನಿಗಳಲಲ್ಲಿತ್ತು, ಈಗ ಅದಕ್ಕೆ ಪೂರಕವಾಗಿ ಚಿತ್ರ ಬಿಡುಗಡೆ ಮುಂದಕ್ಕೆ ಹೋಗಿದೆ. ಚಿತ್ರದ ಪೋಸ್ಟ್ [ಪ್ರೊಡಕ್ಷನ್ ಕೆಲಸಗಳು ಬಾಕಿ ಇದ್ದು, ಇನ್ನೇನಿದ್ದರೂ ಏಪ್ರಿಲ್ 14ರ ನಂತರ ಕೆಲಸ ಆರಂಭವಾಗಬೇಕಿದೆ. ಆ ನಂತರ ಸೆನ್ಸಾರ್ ಆಗಿ ಚಿತ್ರ ಬಿಡುಗಡೆಯಾಗಬೇಕು. ಅಲ್ಲಿಗೆ ಚಿತ್ರ ಬಿಡುಗಡೆ ಏಪ್ರಿಲ್ ಅಥವಾ ಮೇ ಮೊದಲ ವಾರ ಅಂದುಕೊಳ್ಳಬಹುದು. ಅದು ಕೋವಿಡ್ 19 ಕಾಟ ಕಡಿಮೆಯಾದರೆ.
ದರ್ಶನ್ ನಾಯಕರಾಗಿರುವ ಈ ಚಿತ್ರವನ್ನು ತರುಣ್ ಸುಧೀರ್ ನಿರ್ದೇಶನ ಮಾಡಿದ್ದಾರೆ. ಉಮಾಪತಿ ಈ ಚಿತ್ರದನಿರ್ಮಾಪಕರು. ಚಿತ್ರದಲ್ಲಿ ಆಶಾ ಭಟ್ ನಾಯಕಿ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು, ಟೀಸರ್ ಟ್ ಆಗಿದೆ. ಚಿತ್ರದಲ್ಲಿ ದರ್ಶನ್ ಅವರ ಮಾಸ್ ಗೆಟಪ್ ಅಭಿಮಾನಿ ಗಳಲ್ಲಿ ಸಿನಿಮಾ ಬಗೆಗಿನ ಕುತೂಹಲ ಹೆಚ್ಚಿಸಿದೆ.
ಇನ್ನು, ರಾಬರ್ಟ್ ಚಿತ್ರದಬಿಡುಗಡೆ ಮುಂದಕ್ಕೆ ಹೋಗುವ ಮೂಲಕ ಇತರ ಚಿತ್ರಗಳ ಬಿಡುಗಡೆಯಲ್ಲೂ ವ್ಯತ್ಯಯ ಅಗಲಿದೆ. ಅನೇಕ ಸಿನಿಮಾಗಳು ರಾಬರ್ಟ್ ಬಿಡುಗಡೆ ನೋಡಿಕೊಂಡು ಬರಲುಕಾಯುತ್ತಿದ್ದವು. ಆದರೆ ಈಗ ರಾಬರ್ಟ್ ಮುಂದೆ ಹೋಗಿದೆ. ಸೋ, ಇತರ ಸಿನಿಮಾಗಳು ಕೂಡಾ ತಮ್ಮ ಬಿಡುಗಡೆಯನ್ನು ಮುಂದಕ್ಕೆ ಹಾಕಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhuvanam Gaganam Movie: ಪ್ರೇಮಿಗಳ ದಿನಕ್ಕೆ ಭುವನಂ ಗಗನಂ ತೆರೆಗೆ
KD Movie: ಕೆಡಿ ಶಿವ ಮೊಗದಲ್ಲಿ 25 ಮಿಲಿಯನ್ ನಗು
ಇನ್ಮುಂದೆ ಶಿವಣ್ಣನಿಗೆ ಡಬಲ್ ಪವರ್ ಇರುತ್ತದೆ.. ಸರ್ಜರಿ ಬಳಿಕ ಹ್ಯಾಟ್ರಿಕ್ ಹೀರೋ ಮಾತು
ಹತ್ತಾರು ಸಿನಿಮಾ.. ನೂರಕ್ಕೆ ನೂರು ನಿರೀಕ್ಷೆ.. ಈ ವರ್ಷದ ಬಹು ನಿರೀಕ್ಷಿತ ಕನ್ನಡ ಚಿತ್ರಗಳಿವು
2025: ಬರುವುದೆಲ್ಲಾ ಬರಲಿ ಗೆಲುವು ನಮ್ಮದಾಗಲಿ: ಸಿನಿಮಾದ 6 ವಿಭಾಗದವರ ನಿರೀಕ್ಷೆಯ ಮಾತು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.