Welcome to ‘Toxic’ World: ರಾಕಿಭಾಯ್ ಹೊಸ ಸಿನಿಮಾದ ಟೈಟಲ್ ಬಿಡುಗಡೆ
Team Udayavani, Dec 8, 2023, 10:03 AM IST
ಬೆಂಗಳೂರು: ರಾಕಿಂಗ್ ಸ್ಟಾರ್ ಅಭಿಮಾನಿಗಳು ಬಹಳ ಕಾತರದಿಂದ ಕಾಯುತ್ತಿದ್ದ ‘ಯಶ್ 19’ ಸಿನಿಮಾದ ಅತೀದೊಡ್ಡ ಅಪ್ಡೇಟ್ ಇತ್ತೀಚೆಗಷ್ಟೇ ಹೊರಬಿದ್ದಿದೆ.ಆ ಮೂಲಕ ‘ಕೆಜಿಎಫ್-2’ ರಿಲೀಸ್ ಅದ 20 ತಿಂಗಳ ನಂತರ ಸಿನಿರಂಗದಲ್ಲಿ ಯಶ್ ಮೇನಿಯ ಮತ್ತೆ ಶುರುವಾಗಿದೆ.
ಇತ್ತೀಚೆಗಷ್ಟೇ ಯಶ್ ತನ್ನ ಸೋಶಿಯಲ್ ಮೀಡಿಯಾದಲ್ಲಿ ‘ಲೋಡಿಂಗ್’ ಎಂದು ಪ್ರಶ್ನಾರ್ಥಕ ಚಿಹ್ನೆಯನ್ನು ಹಾಕಿ, ಡಿ.9 ರ ಬೆಳಗ್ಗೆ 9:55 ಕ್ಕೆ ಟೈಟಲ್ ಅನೌನ್ಸ್ ಮೆಂಟ್ ಮಾಡುವುದಾಗಿ ಹೇಳಿದ್ದರು.
ಸಿನಿಮಾಕ್ಕೆ ʼಟಾಕ್ಸಿಕ್ʼ (Toxic) ಎಂದು ಟೈಟಲ್ ಇಡಲಾಗಿದೆ. ಅಂದುಕೊಂಡಂತೆ ಈ ಸಿನಿಮಾವನ್ನು ಗೀತು ಮೋಹನ್ ದಾಸ್ ನಿರ್ದೇಶನ ಮಾಡಲಿದ್ದಾರೆ.
1 ನಿಮಿಷ 18 ಸೆಕೆಂಡ್ ಗಳ ಟೈಟಲ್ ವಿಡಿಯೋದಲ್ಲಿ ಜೋಕರ್ ರೀತಿಯ ಮುಖವನ್ನು ಹೋಲುವ ಕ್ಯಾರೆಕ್ಟರ್ ನ್ನು ತೋರಿಸಲಾಗಿದೆ. ಮೇಲ್ನೊಟಕ್ಕೆ ಹಾಲಿವುಡ್ ರೀತಿಯ ದೃಶ್ಯ ಗಳ ವಿಎಫ್ ಎಕ್ಸ್ ಗಳನ್ನು ತೋರಿಸಲಾಗಿದೆ.
2025 ರ ಏಪ್ರಿಲ್ 10 ರಂದು ಸಿನಿಮಾ ತೆರೆ ಕಾಣಲಿದೆ. ಯಶ್ ಬಿಟ್ಟು ಬೇರೆ ಯಾವ ಪಾತ್ರವರ್ಗವನ್ನು ಚಿತ್ರತಂಡ ಬಹಿರಂಗಪಡಿಸಿಲ್ಲ.
‘ಯಶ್ 19’ ಅಪ್ಡೇಟ್ ಬಳಿಕ ಸಿನಿಮಾದ ಬಗ್ಗೆ ಟ್ರೆಂಡ್ ಹೆಚ್ಚಿದೆ. ಸಿನಿಮಾದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಲಿದ್ದಾರೆ ಎನ್ನುವ ಮಾತುಗಳು ಹಬ್ಬಿದೆ. ಇದರೊಂದಿಗೆ ಮೃಣಾಲ್ ಠಾಕೂರ್ ಕೂಡ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇನ್ನು ಕೆಲ ವರದಿಗಳ ಪ್ರಕಾರ ಸಿನಿಮಾದಲ್ಲಿ ಮೂವರು ನಾಯಕಿಯರು ಇರಲಿದ್ದಾರೆ ಎನ್ನಲಾಗಿದೆ.
ಕೆವಿಎನ್ ಪ್ರೊಡಕ್ಷನ್ ಹಾಗೂ ಮಾನ್ ಸ್ಟಾರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ಸಿನಿಮಾವನ್ನು ನಿರ್ಮಾಣ ಮಾಡಲಿದೆ. ಕಳೆದ ಕೆಲ ಸಮಯದಿಂದ ಯಶ್ ಹಾಲಿವುಡ್ ತಂತ್ರಜ್ಞರನ್ನು ಭೇಟಿ ಆಗುವುದರ ಜೊತೆ ಹಾಲಿವುಡ್ ನಾಡಿನಲ್ಲೇ ಕೆಲ ಸಮಯ ಕಳೆದಿದ್ದರು. ಆ ಕಾರಣದಿಂದ ಈ ಸಿನಿಮಾದಲ್ಲಿ ಭಾರೀ ಆ್ಯಕ್ಷನ್ ಇರಲಿದೆ ಎನ್ನಲಾಗುತ್ತಿದೆ.
ಕೆಜಿಎಫ್ 1,2 ಬಳಿಕ ‘ಕೆಜಿಎಫ್ – 3’ ಯಲ್ಲಿ ಯಶ್ ಕಾಣಿಸಿಕೊಳ್ಳಲಿದ್ದಾರೆ.
‘What you seek is seeking you ‘- Rumi
A fairy tale for grown-ups
#TOXIChttps://t.co/SOlP8bFJU0@TheNameIsYash #GeetuMohandas@Toxic_TheMovie— KVN Productions (@KvnProductions) December 8, 2023
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.