ಬೆಂಗಳೂರು: ಬಿಗ್ ಬಿ ಅಮಿತಾಬ್ ಬಚ್ಚನ್ ಹೆಸರಿನಲ್ಲಿನ ‘ರೋಲ್ಸ್ ರಾಯ್ಸ್’ ಕಾರು ವಶ    

Team Udayavani, Aug 23, 2021, 11:15 PM IST

fgbsrdtret

ಬೆಂಗಳೂರು: ಸಿಲಿಕಾನ್ ಸಿಟಿಯ ಪೊಲೀಸರು ಹಾಗು ಆರ್‌ಟಿಓ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ 10 ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆದಿದ್ದು, ಅವುಗಳ ಪೈಕಿ ಒಂದು ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಅವರ ಹೆಸರಿನಲ್ಲಿದೆ.

ನಕಲಿ ನಂಬರ್ ಪ್ಲೇಟ್‌. ಬೇರೆ ರಾಜ್ಯಗಳಲ್ಲಿ ನೊಂದಣಿ , ರಸ್ತೆ ತೆರಿಗೆ ಬಾಕಿ, ವಿಮೆ ಮಾಡಿಸದೆ ಓಡಿಸುತ್ತಿರುವ ವಾಹನಗಳ ವಿರುದ್ಧ ದೂರು ಬಂದ ಹಿನ್ನೆಲೆ ಭಾನುವಾರ ಪ್ರತಿಷ್ಠಿತ ಯುಬಿ ಸಿಟಿ ಬಳಿ ಕಾರ್ಯಚಾರಣೆ ನಡೆಸಿದ ಅಧಿಕಾರಿಗಳು ಆಡಿ, ರೋಲ್ಸ್ ರಾಯ್ಸ್, ಲ್ಯಾಂಬೊರ್ಗಿನಿ, ಲ್ಯಾಂಡ್ ರೋವರ್, ಬೆಂಜ್‌ ಸೇರಿದಂತೆ 10 ದುಬಾರಿ ಬೆಲೆಯ ಕಾರುಗಳನ್ನು ಸೀಜ್ ಮಾಡಿದ್ದಾರೆ.

ಗಮನಾರ್ಹ ಸಂಗತಿ ಏನೆಂದರೆ ಪೊಲೀಸರು ವಶಕ್ಕೆ ಪಡೆದಿರುವ ಕಾರುಗಳ ಪೈಕೆ ರೋಲ್ಸ್ ರಾಯ್ಸ್ ಬಿಗ್ ಬಿ ಅಮಿತಾಬ್ ಅವರಿಗೆ ಸೇರಿದೆ. ಈ ಕಾರು 2019ರಲ್ಲಿ ಅಮಿತಾಬ್ ಬಚ್ಚನ್ ಎಂಬುವರ ಹೆಸರಿನಲ್ಲಿ ನೊಂದಣಿ ಆಗಿದೆ. ಆ ನಂತರ ಅದನ್ನು ಒಬ್ಬ ಬೆಂಗಳೂರಿನ ಉದ್ಯಮಿ ಖರೀದಿಸಿದ್ದಾರೆ. ನಾವು ಕಾರ್ಯಾಚರಣೆ ಮಾಡಿದಾಗ ಸಲ್ಮಾನ್ ಖಾನ್ ಹೆಸರಿನ ವ್ಯಕ್ತಿ ಕಾರು ಚಲಾಯಿಸುತ್ತಿದ್ದರು. ಕಾರಿನ ಯಾವುದೇ ದಾಖಲೆಯನ್ನು ಆ ವ್ಯಕ್ತಿ ನೀಡಲಿಲ್ಲ ಹಾಗಾಗಿ ಕಾರನ್ನು ವಶಕ್ಕೆ ಪಡೆದಿದ್ದೇವೆ. ಆ ಕಾರು ಮಹಾರಾಷ್ಟ್ರದ ನೊಂದಣಿ ಸಂಖ್ಯೆ ಹೊಂದಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂದಹಾಗೆ ಈ ಕಾರು ಅಮಿತಾಬ್ ಅವರಿಗೆ ಸಿನಿಮಾ ನಿರ್ಮಾಪಕ ವಿಧು ವಿನೋಧ ಚೋಪ್ರಾ ಅವರು ಉಡುಗೊರೆಯಾಗಿ ನೀಡಿದ್ದರು. ಹಿಂದೆ 2019ರ ಫೆಬ್ರವರಿ 19ರಂದು 3 ಕೋಟಿ ರೂ.ಗಳಿಗೆ ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿ ಯುಸೂಫ್ ಶರೀಪ್ ಎಂಬುವರಿಗೆ ಮಾರಾಟ ಮಾಡಿದ್ದರು.

ಇನ್ನು ಕಾರು ಸೀಜ್ ಮಾಡಿರುವ ಕುರಿತು ಮಾತನಾಡಿರುವ ಶರೀಫ್, ತಾವು 6 ಕೋಟಿ ಹಣ ಕೊಟ್ಟು ಕಾರು ಖರೀದಿಸಿದ್ದಾಗಿ ಹೇಳಿದ್ದರು. ಆರ್‌ಟಿಓ ನೀಡಿರುವ ಮಾಹಿತಿಯಂತೆ ಕಾರಿಗೆ 1.30 ಕೋಟಿ ಹಣವನ್ನಷ್ಟೆ ತೆರಲಾಗಿದೆ. ಕಾರು ಮಾರಾಟದ ಸಂದರ್ಭದಲ್ಲಿಯೇ ಕಾರಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಬಚ್ಚನ್ ನೀಡಿದ್ದಾರಂತೆ. ಆದರೆ ಕಾರು ಖರೀದಿಸಿರುವ ಷರೀಫ್ ಕಾರನ್ನು ತಮ್ಮ ಹೆಸರಿಗೆ ಮಾಡಿಕೊಳ್ಳದೆ ಬಚ್ಚನ್ ಹೆಸರಿನಲ್ಲಿಯೇ ಕಾರು ಚಲಾವಣೆ ಮಾಡುತ್ತಿದ್ದಾರೆ. ಇದೀಗ ನಟ ಅಮಿತಾಬ್ ಬಚ್ಚನ್‌ಗೆ ಬೆಂಗಳೂರು ಪೊಲೀಸರು ನೊಟೀಸ್ ಕಳಿಸಿದ್ದು, ಬಚ್ಚನ್ ಅವರ ಉತ್ತರಕ್ಕಾಗಿ ನಿರೀಕ್ಷಿಸುತ್ತಿದ್ದಾರೆ.

ಟಾಪ್ ನ್ಯೂಸ್

Rajya Sabha: ಪ್ರಧಾನಿ ರಿಮೋಟ್ ಹೇಳಿಕೆಗೆ ರೊಚ್ಚಿಗೆದ್ದ ವಿಪಕ್ಷಗಳು!…ಕಲಾಪಕ್ಕೆ ಬಹಿಷ್ಕಾರ

Rajya Sabha: ಪ್ರಧಾನಿ ರಿಮೋಟ್ ಹೇಳಿಕೆಗೆ ರೊಚ್ಚಿಗೆದ್ದ ವಿಪಕ್ಷಗಳು!…ಕಲಾಪಕ್ಕೆ ಬಹಿಷ್ಕಾರ

1-vijayendra

CM ಸಿದ್ದರಾಮಯ್ಯ ಮನೆ ಮುತ್ತಿಗೆಗೆ ಯತ್ನ; ಬಿಜೆಪಿ ಪ್ರಮುಖ ನಾಯಕರು ವಶಕ್ಕೆ

vijayapura

Vijayapura; ಕೃಷ್ಣಾ ನದಿ ತೆಪ್ಪ ದುರಂತ: ಮೂವರ ಶವಪತ್ತೆ, ಇಬ್ಬರಿಗಾಗಿ ಶೋಧ

1-raju

Vijayapura: ವೀರಯೋಧ ಹವಾಲ್ದಾರ್ ರಾಜು ಕರ್ಜಗಿ ಪಾರ್ಥಿವ ಶರೀರ ತವರಿಗೆ ಆಗಮನ

1-PTI

Mumbai ಬೀದಿಗಳನ್ನು ವ್ಯಾಪಾರಿಗಳು ವಶಪಡಿಸಿಕೊಂಡಿದ್ದು ಪಾದಚಾರಿಗಳಿಗೆ ಸ್ಥಳವಿಲ್ಲ: ಹೈಕೋರ್ಟ್

1-asddasdsa

Hurricane; ಯಾವುದೇ ವಿಳಂಬಗಳಾಗದಿದ್ದಲ್ಲಿ ನಾಳೆ ಬೆಳಗ್ಗೆ ದಿಲ್ಲಿಗೆ ಟೀಮ್ ಇಂಡಿಯಾ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆಯ ಜಿಗಿತ…@80,000

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆಯ ಜಿಗಿತ…@80,000

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-vijayendra

CM ಸಿದ್ದರಾಮಯ್ಯ ಮನೆ ಮುತ್ತಿಗೆಗೆ ಯತ್ನ; ಬಿಜೆಪಿ ಪ್ರಮುಖ ನಾಯಕರು ವಶಕ್ಕೆ

vijayapura

Vijayapura; ಕೃಷ್ಣಾ ನದಿ ತೆಪ್ಪ ದುರಂತ: ಮೂವರ ಶವಪತ್ತೆ, ಇಬ್ಬರಿಗಾಗಿ ಶೋಧ

1-raju

Vijayapura: ವೀರಯೋಧ ಹವಾಲ್ದಾರ್ ರಾಜು ಕರ್ಜಗಿ ಪಾರ್ಥಿವ ಶರೀರ ತವರಿಗೆ ಆಗಮನ

Pen Drive Case 4 ತಿಂಗಳಿಗೊಮ್ಮೆ ಎಚ್‌ಐವಿ ಟೆಸ್ಟ್‌ ಮಾಡಿಸುತ್ತಿದ್ದ ಪ್ರಜ್ವಲ್‌?

Pen Drive Case 4 ತಿಂಗಳಿಗೊಮ್ಮೆ ಎಚ್‌ಐವಿ ಟೆಸ್ಟ್‌ ಮಾಡಿಸುತ್ತಿದ್ದ ಪ್ರಜ್ವಲ್‌?

Private Hospital ಡೆಂಗ್ಯೂ ಪರೀಕ್ಷೆಗೆ ಶುಲ್ಕ ನಿಗದಿ: ಸಚಿವ ದಿನೇಶ್‌

Private Hospital ಡೆಂಗ್ಯೂ ಪರೀಕ್ಷೆಗೆ ಶುಲ್ಕ ನಿಗದಿ: ಸಚಿವ ದಿನೇಶ್‌

MUST WATCH

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

ಹೊಸ ಸೇರ್ಪಡೆ

Rajya Sabha: ಪ್ರಧಾನಿ ರಿಮೋಟ್ ಹೇಳಿಕೆಗೆ ರೊಚ್ಚಿಗೆದ್ದ ವಿಪಕ್ಷಗಳು!…ಕಲಾಪಕ್ಕೆ ಬಹಿಷ್ಕಾರ

Rajya Sabha: ಪ್ರಧಾನಿ ರಿಮೋಟ್ ಹೇಳಿಕೆಗೆ ರೊಚ್ಚಿಗೆದ್ದ ವಿಪಕ್ಷಗಳು!…ಕಲಾಪಕ್ಕೆ ಬಹಿಷ್ಕಾರ

1-honnavara

Honnavara: ಪಟ್ಟಣ ಪಂಚಾಯತ್‌ ನಲ್ಲಿ ಲೋಕಾಯುಕ್ತ ದಾಳಿ

1-vijayendra

CM ಸಿದ್ದರಾಮಯ್ಯ ಮನೆ ಮುತ್ತಿಗೆಗೆ ಯತ್ನ; ಬಿಜೆಪಿ ಪ್ರಮುಖ ನಾಯಕರು ವಶಕ್ಕೆ

vijayapura

Vijayapura; ಕೃಷ್ಣಾ ನದಿ ತೆಪ್ಪ ದುರಂತ: ಮೂವರ ಶವಪತ್ತೆ, ಇಬ್ಬರಿಗಾಗಿ ಶೋಧ

1-raju

Vijayapura: ವೀರಯೋಧ ಹವಾಲ್ದಾರ್ ರಾಜು ಕರ್ಜಗಿ ಪಾರ್ಥಿವ ಶರೀರ ತವರಿಗೆ ಆಗಮನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.