ಆರ್‌ಆರ್‌ಆರ್ ಹಿಂದೆ ನಟ ಭಯಂಕರ ರನ್ನಿಂಗ್…
Team Udayavani, Dec 17, 2021, 3:34 PM IST
ಹೊಸ ವರ್ಷದ ಮೊದಲ ವಾರದಲ್ಲೇ ಬಹುನಿರೀಕ್ಷಿತ “ಆರ್‌ಆರ್‌ಆರ್’ ಚಿತ್ರ ತೆರೆಗೆ ಬರುತ್ತಿದೆ. ಇನ್ನು “ಆರ್‌ಆರ್‌ಆರ್’ ಕನ್ನಡದಲ್ಲಿಯೂ ಬಿಡುಗಡೆಯಾಗುತ್ತಿರುವುದರಿಂದ, ಸಹಜವಾಗಿಯೇ ಕನ್ನಡ ಸಿನಿಪ್ರಿಯರ ಚಿತ್ತ ಈ ಚಿತ್ರದ ಮೇಲೆ ನೆಟ್ಟಿದೆ.
ಇದೇ ವೇಳೆ ನಟ ಪ್ರಥಮ್‌ಕೂಡ “ಆರ್‌ಆರ್‌ಆರ್’ ಚಿತ್ರದ ನಡುವೆಯೇ ತಮ್ಮ ಅಭಿನಯದ “ನಟ ಭಯಂಕರ’ ಚಿತ್ರದ ಥಿಯೇಟರಿಕಲ್ ಟ್ರೇಲರ್ ಬಿಡುಗಡೆಗೂ ಪ್ಲಾನ್ ಮಾಡಿಕೊಂಡಿದ್ದರು. ಸುಮಾರು ಒಂದು ತಿಂಗಳಿನಿಂದ “ಆರ್‌ಆರ್‌ಆರ್’ ಬಿಡುಗಡೆಯ ಹಿಂದೆ ಬಿದ್ದಿದ್ದ ಪ್ರಥಮ್ ಆ್ಯಂಡ್ ಟೀಮ್, ಸುಮಾರು20 ದಿನಗಳಿಂದ “ನಟ ಭಯಂಕರ’ ಚಿತ್ರದ ಟ್ರೇಲರ್ ಕಟಿಂಗ್ ಕೆಲಸಗಳಲ್ಲಿ ಹಗಲು-ರಾತ್ರಿ ಎನ್ನದೆ ಬಿಝಿಯಾಗಿತ್ತು.
ಆದರೆ ಇದೀಗ “ನಟ ಭಯಂಕರ’ ಟ್ರೇಲರ್ ರೆಡಿಯಾಗಿದ್ದರೂ, “ಆರ್‌ಆರ್‌ಆರ್’ ಚಿತ್ರದ ಜೊತೆಗೆ ಟ್ರೇಲರ್ ಬಿಡುಗಡೆಯಾಗುತ್ತಿಲ್ಲ. ಹೌದು, “ಆರ್‌ಆರ್‌ಆರ್’ ಹಿಂದೆ ಟ್ರೇಲರ್‌ನಲ್ಲಿ ರನ್ನಿಂಗ್ ಶುರು ಮಾಡಲು ಪ್ಲಾನಿಂಗ್ ಹಾಕಿಕೊಂಡಿದ್ದ “ನಟ ಭಯಂಕರ’ ಈಗ ಇದ್ದಕ್ಕಿದ್ದಂತೆ, ಟ್ರೇಲರ್ ಬಿಡುಗಡೆಗೆ ಮಾಡದಿರುವುದಕ್ಕೆಕಾರಣ ಕೂಡ “ಆರ್ ಆರ್‌ಆರ್’ ಸಿನಿಮಾವಂತೆ! ಮೂಲಗಳ ಪ್ರಕಾರ “ಆರ್ ಆರ್‌ಆರ್’ ಚಿತ್ರ ಸುಮಾರು ಮೂರು ಕಾಲು ಗಂಟೆ ಅವಧಿಯಲ್ಲಿ ಇರುವುದರಿಂದ, ಈ ಸಿನಿಮಾದ ಮಧ್ಯದಲ್ಲಿ ಬೇರೆ ಯಾವುದೇ ಟ್ರೇಲರ್ ಪ್ರದರ್ಶನ ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.
ಹೀಗಾಗಿ ವಿತರಕ ಜಯಣ್ಣ ಮತ್ತು ನಿರ್ಮಾಪಕ ಕೆ.ಪಿ ಶ್ರೀಕಾಂತ್ ಸೇರಿದಂತೆ ಚಿತ್ರರಂಗದ ಹಲವರ ಸಲಹೆಯ ಮೇರೆಗೆ “ನಟ ಭಯಂಕರ’ ಟ್ರೇಲರ್ ಅನ್ನು “ಆರ್‌ಆರ್‌ಆರ್’ ಚಿತ್ರದ ಜೊತೆಗೆ ಬಿಡುಗಡೆ ಮಾಡುವ ತಮ್ಮ ಯೋಚನೆಯನ್ನು ಪ್ರಥಮ್ ಬದಲಾಯಿಸಿಕೊಂಡಿದ್ದಾರೆ.
ಇದನ್ನೂ ಓದಿ;- ಅಗಲಿದ ಯೋಧರಿಗೆ ಶ್ರದ್ಧಾಂಜಲಿ
ಹೀಗಾಗಿ ಸದ್ಯ ಬಿಡುಗಡೆಗೆ ರೆಡಿಯಾಗಿರುವ “ನಟ ಭಯಂಕರ’ ಟ್ರೇಲರ್ ಅನ್ನು ಮುಂದಿನ ದಿನಗಳಲ್ಲಿ ರಾಜ್ಯದ ಗಣ್ಯ ವ್ಯಕ್ತಿಯೊಬ್ಬರಿಂದ ಬಿಡುಗಡೆ ಮಾಡಿಸುವ ಯೋಚನೆಯಲ್ಲಿದೆ “ನಟ ಭಯಂಕರ’ ಚಿತ್ರತಂಡ. ಔಟ್ ಆ್ಯಂಡ್ ಔಟ್ ಹಾರರ್, ಥ್ರಿಲ್ಲರ್,ಕಾಮಿಡಿ ಕಥಾಹಂದರ ಹೊಂದಿರುವ “ನಟ ಭಯಂಕರ’ ಚಿತ್ರದಲ್ಲಿ ನಾಯಕ ಪ್ರಥಮ್ ಅವರಿಗೆ ಸುಶ್ಮಿತಾ ಜೋಶಿ, ನಿಹಾರಿಕಾ ಶಣೈ ನಾಯಕಿಯರಾಗಿ ಜೋಡಿಯಾಗಿದ್ದಾರೆ.
ಉಳಿದಂತೆ ಸಾಯಿಕುಮಾರ್, ಶೋಭರಾಜ್, ಕುರಿ ಪ್ರತಾಪ್, ಮಜಾ ಟಾಕೀಸ್ ಪವನ್, ಓಂ ಪ್ರಕಾಶ್ ರಾವ್ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಎಲ್ಲ ಅಂದುಕೊಂಡಂತೆ ನಡೆದರೆ, ಮುಂಬರುವ ಫೆಬ್ರವರಿ ವೇಳೆಗೆ “ನಟ ಭಯಂಕರ’ ಥಿಯೇಟರ್‌ಗೆ ಎಂಟ್ರಿ ಕೊಡಲಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.