![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Oct 1, 2024, 3:11 PM IST
ಒಂದೊಂದು ಸಿನಿಮಾ ಬಿಡುಗಡೆಯಾದಂತೆ ಆ ಚಿತ್ರಗಳು ಕಲಾವಿದರಿಗೆ ಹೆಸರು ತಂದುಕೊಡುತ್ತವೆ. ಅದರಲ್ಲೂ ನಾಯಕಿ ನಟಿಯರಿಗೆ ಸ್ವಲ್ಪ ಹೆಚ್ಚೇ ಎಂದು ಹೇಳಬಹುದು. ಅದು ನಟನೆ, ಗ್ಲಾಮರ್ ಎರಡರಲ್ಲೂ. ಈಗ ರುಕ್ಮಿಣಿ ವಸಂತ್ ನಿರೀಕ್ಷೆ ಕಂಗಳೊಂದಿಗೆ ಎದುರು ನೋಡುತ್ತಿದ್ದಾರೆ. ಅದಕ್ಕೆ ಕಾರಣ “ಬಘೀರ’ ಹಾಗು “ಭೈರತಿ ರಣಗಲ್’.
ಈ ಎರಡೂ ಚಿತ್ರಗಳಲ್ಲೂ ರುಕ್ಮಿಣಿ ವಸಂತ್ ನಾಯಕಿ. ವಿಶೇಷವೆಂದರೆ ಎರಡು ಅಂತರದಲ್ಲಿ ಈ ಎರಡೂ ಚಿತ್ರಗಳು ಬಿಡುಗಡೆಯಾಗುತ್ತಿವೆ. ಅಲ್ಲಿಗೆ ಬ್ಯಾಕ್ ಟು ಬ್ಯಾಕ್ ಚಿತ್ರಗಳ ಮೂಲಕ ರುಕ್ಮಿಣಿ ತೆರೆಮೇಲೆ ಬಂದಂತಾಗುತ್ತದೆ. ಶ್ರೀಮುರಳಿ ನಾಯಕರಾಗಿರುವ “ಬಘೀರ’ ಚಿತ್ರ ಅಕ್ಟೋಬರ್ 31ರಂದು ತೆರೆಕಂಡರೆ ಶಿವರಾಜ್‌ಕುಮಾರ್ ನಟನೆಯ “ಭೈರತಿ ರಣಗಲ್’ ಚಿತ್ರ ನವೆಂಬರ್ 15ರಂದು ತೆರೆಕಾಣುತ್ತಿದೆ.
ಎರಡೂ ಸ್ಟಾರ್ ಸಿನಿಮಾಗಳಾಗಿದ್ದು, ಈ ಚಿತ್ರಗಳ ಮೇಲೆ ನಿರೀಕ್ಷೆ ಹೆಚ್ಚಿದೆ. ಶ್ರೀನಿ ನಿರ್ದೇಶನದ “ಬೀರ್‌ಬಲ್’ ಸಿನಿಮಾ ಮೂಲಕ ನಾಯಕಿಯಾಗಿ ಎಂಟ್ರಿಕೊಟ್ಟ ರುಕ್ಮಿಣಿ ಈಗಾಗಲೇ “ಬಾನದಾರಿಯಲಿ’, “ಬಘೀರ’, “ಸಪ್ತಸಾಗರ ದಾಚೆ ಎಲ್ಲೋ 1-2′ ನಟಿಸಿದ್ದು, ಕನ್ನಡ ಜೊತೆಗೆ ತಮಿಳಿನ ವಿಜಯ್ ಸೇತುಪತಿ ಹಾಗೂ ಶಿವ ಕಾರ್ತಿಕ್ ನಾಯಕರಾಗಿರುವ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.
“ಸಪ್ತಸಾಗರದಾಚೆ ಎಲ್ಲೋ 1-2′ ಚಿತ್ರದ ಪ್ರಿಯಾ ಪಾತ್ರದಲ್ಲಿನ ಇವರ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಹಿಂದೆ “ಮಫ್ತಿ’ ಸಿನಿಮಾ ನಿರ್ದೇಶಿಸಿದ್ದ ನರ್ತನ್ ಈಗ “ಭೈರತಿ ರಣಗಲ್’ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲೂ ರುಕ್ಮಿಣಿಗೆ ವಿಭಿನ್ನ ಪಾತ್ರ ಸಿಕ್ಕಿದೆಯಂತೆ. ಈ ಸಿನಿಮಾವನ್ನು ಶಿವರಾಜ್ ಕುಮಾರ್ ಅವರೇ ನಿರ್ಮಿಸುತ್ತಿದ್ದಾರೆ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.