ರವಿಶಂಕರ್ ಕಂಠದಲ್ಲಿ “ರುಸ್ತುಂ’ ಟೈಟಲ್ ಟ್ರ್ಯಾಕ್
Team Udayavani, Mar 13, 2019, 6:04 AM IST
ಒಂದೆಡೆ ನಟ ಶಿವರಾಜಕುಮಾರ್ ಅಭಿನಯದ “ರುಸ್ತುಂ’ ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಈಗಾಗಲೇ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಬಾಕಿಯಿರುವ ಡ್ಯುಯೆಟ್ ಹಾಡಿನ ಚಿತ್ರೀಕರಣವನ್ನು ಅದ್ಧೂರಿಯಾಗಿ ನಡೆಸುತ್ತಿದೆ. ಈ ಹಾಡಿಗಾಗಿ ಕಂಠೀರವ ಸ್ಟುಡಿಯೋದಲ್ಲಿ ವಿಭಿನ್ನ ಸೆಟ್ ನಿರ್ಮಿಸಲಾಗಿದ್ದು, ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಈ ಹಾಡಿಗೆ ಕೊರಿಯೋಗ್ರಫಿ ಮಾಡುತ್ತಿದ್ದಾರೆ.
ಇನ್ನು ಚಿತ್ರದ ಸೆಕೆಂಡ್ ಹಾಫ್ನಲ್ಲಿ ಬರುವ ಈ ಹಾಡಿನಲ್ಲಿ ಶಿವಣ್ಣ ಜೊತೆ ನಾಯಕಿ ಶ್ರದ್ಧಾ ಶ್ರೀನಾಥ್ ಭರ್ಜರಿಯಾಗಿ ಇಂಡೋ-ವೆಸ್ಟರ್ನ್ ಸ್ಟೈಲ್‌ನಲ್ಲಿ ಸ್ಟೆಫ್ಸ್ ಹಾಕುತ್ತಿದ್ದಾರೆ. ಚಿತ್ರತಂಡದ ಪ್ಲಾನ್ ಪ್ರಕಾರ ಎಲ್ಲವೂ ಅಂದುಕೊಂಡಂತೆ ನಡೆದರೆ, ಇದೇ ವಾರಾಂತ್ಯದೊಳಗೆ “ರುಸ್ತುಂ’ ಶೂಟಿಂಗ್ ಪೂರ್ಣಗೊಳಿಸಿ ಕುಂಬಳ ಕಾಯಿ ಒಡೆಯುವ ಯೋಚನೆಯಲ್ಲಿದೆ ಚಿತ್ರತಂಡ. ಇವೆಲ್ಲದರ ನಡುವೆ “ರುಸ್ತುಂ’ ಚಿತ್ರದ ಕಡೆಯಿಂದ ಮತ್ತೂಂದು ಸುದ್ದಿ ಹೊರಬಿದ್ದಿದೆ.
ಅದೇನೆಂದರೆ, “ರುಸ್ತುಂ’ ಚಿತ್ರದ ಟೈಟಲ್ ಟ್ರ್ಯಾಕ್ ಅನ್ನು ಆರ್ಮುಗಂ ಖ್ಯಾತಿಯ ಖಳನಟ ರವಿಶಂಕರ್ ಹಾಡಿದ್ದಾರೆ. ಈ ಹಿಂದೆ “ಜಿಗರ್ ಥಂಡ’ ಚಿತ್ರದ ಒಂದು ಹಾಡಿಗೆ ಧ್ವನಿ ನೀಡಿದ್ದ ರವಿಶಂಕರ್ ಈಗ “ರುಸ್ತುಂ’ ಚಿತ್ರಕ್ಕೆ ಕಂಠದಾನ ಮಾಡಿದ್ದು, ಚಿತ್ರದಲ್ಲಿ ಆರ್ಮುಗಂ ಧ್ವನಿ ಹೇಗಿರಬಹುದು ಎಂಬ ಕುತೂಹಲ ಫ್ಯಾನ್ಸ್ ಮನದಲ್ಲಿ ಮನೆ ಮಾಡಿದೆ. ಇನ್ನು ಈ ಹಾಡಿಗೆ ಅನೂಪ್ ಸೀಳಿನ್ ಸಂಗೀತ ನಿರ್ದೇಶನವಿದ್ದು, ರವಿಶಂಕರ್ ಗಡಸು ಧ್ವನಿಯಲ್ಲಿ ಈ ಕೇಳಲು ಚಿತ್ರದ ಆಡಿಯೋ ಬಿಡುಗಡೆಯಾಗುವವರೆಗೂ ಕಾಯಬೇಕು.
“ರುಸ್ತುಂ’ ಸಾಹಸ ನಿರ್ದೇಶಕ ರವಿವರ್ಮ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಚೊಚ್ಚಲ ಚಿತ್ರವಾಗಿದ್ದು, ಶಿವಣ್ಣ ಅವರೊಂದಿಗೆ ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್, ರಚಿತಾ ರಾಮ್, ಮಯೂರಿ, ಬಾಲಿವುಡ್ ನಟ ವಿವೇಕ್ ಒಬೆರಾಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜಯಣ್ಣ – ಭೋಗೆಂದ್ರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಬಿಗ್ ಬಜೆಟ್‌ನ ಈ ಚಿತ್ರ ಜೂನ್ ವೇಳೆಗೆ ತೆರೆಗೆ ಬರಲಿದೆ ಎನ್ನಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.