ಕನ್ನಡ ಚಿತ್ರಗಳಿಗೆ ಸಖತ್‌ ಸ್ಪರ್ಧೆ


Team Udayavani, Jan 15, 2018, 1:30 PM IST

15-22.jpg

ಮುಂದಿನ ಮೂರು ತಿಂಗಳುಗಳಲ್ಲಿ ಚಿತ್ರ ಬಿಡುಗಡೆ ಮಾಡಬಾರದು, ಮಾಡಿದರೆ ಜನ ಬರುವುದಿಲ್ಲ ಮತ್ತು ಇದರಿಂದ ಸಾಕಷ್ಟು ನಷ್ಟವಾಗುತ್ತದೆ ಎನ್ನುವುದೆಲ್ಲಾ ಸುಳ್ಳು. ಆದರೆ, ಈ ಮೂರೂ ತಿಂಗಳು ಕನ್ನಡ ಚಿತ್ರರಂಗಕ್ಕೆ ದೊಡ್ಡ ಸವಾಲೆನ್ನುವುದು ಹೌದು. ಪರೀಕ್ಷೆಗಳಿರಲಿ, ಚುನಾವಣೆಯಾಗಲಿ ಅಥವಾ ಕ್ರಿಕೆಟ್‌ ಬರಲಿ … ಅದರಿಂದ ಜನ ಚಿತ್ರ ನೋಡುವುದೇ ಇಲ್ಲ ಅಥವಾ ಚಿತ್ರಮಂದಿರಗಳಿಂದ ದೂರಾಗಿಬಿಡುತ್ತಾರೆ ಎನ್ನುವುದು ತಪ್ಪಾಗುತ್ತದೆ. ಆದರೆ, ಇದೆಲ್ಲದರಿಂದ ಚಿತ್ರಗಳ ಪ್ರರ್ದಶನಕ್ಕೆ ಸ್ವಲ್ಪ ಮಟ್ಟಿಗೆ ಏಟು ಬೀಳುವುದು ಖಂಡಿತ.
 
 ಕನ್ನಡದಲ್ಲಿ ಸಾಲುಸಾಲು ಚಿತ್ರಗಳು ಬಿಡುಗಡೆಗೆ ನಿಂತಿರುವುದು ಎಲ್ಲರಿಗೂ ಗೊತ್ತೇ ಇದೆ. ಈ 15 ದಿನಗಳಲ್ಲಿ ಬಿಡುಗಡೆಯಾಗಿರುವುದು ಕೇವಲ ಆರು ಚಿತ್ರಗಳಾದರೂ, ಮುಂದಿನ ದಿನಗಳಲ್ಲಿ ಸಾಕಷ್ಟು ಚಿತ್ರಗಳು ಬಿಡುಗಡೆಯಾಗುವುದಕ್ಕೆ ಕ್ಯೂನಲ್ಲಿ ನಿಂತಿವೆ. ಅದರಲ್ಲೂ ಮಾರ್ಚ್‌ ಒಳಗೆ ಚಿತ್ರಗಳನ್ನು ಬಿಡುಗಡೆ ಮಾಡಿಬಿಡಬೇಕೆಂದು ಹಲವು ನಿರ್ಮಾಪಕರು ತುದಿಗಾಲಲ್ಲಿ ನಿಂತಿ¨ªಾರೆ. ಅದೇನಾದರೂ ತಪ್ಪಿದರೆ, ಮುಂದಿನ ಮೂರು ತಿಂಗಳುಗಳ ಕಾಲ ಪ್ರೇಕ್ಷಕರ ಅಭಾವ ಕಾಡಬಹುದು ಎಂಬ ಭಯ ಹಲವು ನಿರ್ಮಾಪಕರಲ್ಲಿದೆ.

 ಮಾರ್ಚ್‌, ಏಪ್ರಿಲ್‌, ಮೇ ತಿಂಗಳುಗಳು ಬಂದರೆ ಎಲ್ಲಾ ಭಾಷೆಯ ಚಿತ್ರರಂಗಗಳಲ್ಲೂ ಸಣ್ಣ ನಡುಕ ಇದ್ದಿದ್ದೇ. ಅದಕ್ಕೆ ಕಾರಣ ಪರೀಕ್ಷೆಗಳು ಮತ್ತು ಕ್ರಿಕೆಟ್‌. ಈ ಬಾರಿ ಕನ್ನಡ ಚಿತ್ರರಂಗಕ್ಕೆ ಅವೆರಡೂ ಭಯಗಳ ಜೊತೆಗೆ ಇನ್ನೊಂದು ಭಯ ಕೂಡಾ ಸೇರಿದೆ. ಅದೇ ಅಸೆಂಬ್ಲಿ ಚುನಾವಣೆ. ಮೇ ತಿಂಗಳಲ್ಲಿ ಕರ್ನಾಟಕದ ಅಸೆಂಬ್ಲಿ ಚುನಾವಣೆಗಳು ನಡೆಯುವುದು ಖಾತ್ರಿಯಾಗಿದೆ. ಹಾಗಾಗಿ ಮಾರ್ಚ್‌, ಏಪ್ರಿಲ್‌ ಮತ್ತು ಮೇ ತಿಂಗಳುಗಳಲ್ಲಿ ಚಿತ್ರ ಬಿಡುಗಡೆ ಮಾಡುವುದು ಸ್ವಲ್ಪ ರಿಸ್ಕಿ ಎಂಬುದು ಎಲ್ಲರಿಗೂ ಅರ್ಥವಾಗುತ್ತಿದೆ. ಅದೇ ಕಾರಣಕ್ಕೆ ಮಾರ್ಚ್‌ ತಿಂಗಳಿಗೂ ಮುನ್ನವೇ ಚಿತ್ರಗಳನ್ನು ಬಿಡುಗಡೆ ಮಾಡುವುದಕ್ಕೆ ಲೆಕ್ಕಾಚಾರ ನಡೆಯುತ್ತಿದ್ದು, ಅದಕ್ಕೆ ಸೂಕ್ತ ತಯಾರಿಗಳು ನಡೆಯುತಿವೆ.

 ಹಾಗೆ ನೋಡಿದರೆ, ಫೆಬ್ರವರಿ ತಿಂಗಳಿನಿಂದಲೇ ಕನ್ನಡ ಚಿತ್ರಗಳಿಗೆ ಸವಾಲು ಶುರುವಾಗಲಿದೆ. ಏಕೆಂದರೆ, ಫೆಬ್ರವರಿ 1ರಿಂದ 24ರವರೆಗೂ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಒಂದು ದಿನದ ಮತ್ತು ಟಿ20 ಪಂದ್ಯಗಳು ನಡೆಯಲಿವೆ. ಎರಡು ಘಟಾನುಘಟಿ ತಂಡಗಳು ಎದುರುಬದುರಾಗುತ್ತಿರುವುದರಿಂದ, ಸಹಜವಾಗಿಯೇ ಜನರಿಗೆ ಆ ಕಡೆ ಹೆಚ್ಚು ಗಮನವಿರುತ್ತದೆ. ಇನ್ನು ಮಾರ್ಚ್‌ನಲ್ಲಿ ಪರೀಕ್ಷೆಗಳಿರುವುದರಿಂದ, ಆ ತಿಂಗಳು ಸಹಜವಾಗಿಯೇ ಚಿತ್ರರಂಗದ ಪಾಲಿಗೆ ಸ್ಲಾಗ್‌ ಓವರ್‌ ಎಂದರೆ ತಪ್ಪಿಲ್ಲ. ಆ ತಿಂಗಳಲ್ಲಿ ಬೇರೆ ತರಗತಿಯ ಪರೀಕ್ಷೆಗಳ ಜೊತೆಗೆ ಹತ್ತನೇ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳು ವಿದ್ಯಾರ್ಥಿಗಳನ್ನು ಮತ್ತು ಅವರ ಹೆತ್ತವರ ನಿ¨ªೆಗೆಡಿಸಿರುತ್ತವೆ. ಏಪ್ರಿಲ್‌ ನಾಲ್ಕರಿಂದ, ಮೇ 27ರವರೆಗೆ ಐಪಿಲ್‌ ಕ್ರಿಕೆಟ್‌ ಪಂದ್ಯಾವಳಿಗಳು ನಡೆಯಲಿವೆ. ಈ ಎರಡು ತಿಂಗಳು ಕ್ರಿಕೆಟ್‌ ಪ್ರಿಯರ ಪಾಲಿಗೆ ಹಬ್ಬ ಎಂದರೆ ತಪ್ಪಿಲ್ಲ. ಇನ್ನು ಮೇನಲ್ಲಿ ಚುನಾವಣೆಯ ಸಮಯ. ಈ ಬಾರಿ ಯಾರು ಅಧಿಕಾರದ ಚುಕ್ಕಾಣಿ ಹಿಡಿಯಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದ್ದು, ಜನರ ಗಮನವೆಲ್ಲಾ ಆ ಕಡೆ ಕೇಂದ್ರೀಕೃತವಾಗಿರುವುದರಿಂದ ಚಿತ್ರಗಳ ಕಡೆ ಗಮನ ಸಹಜವಾಗಿಯೇ ಕಡಿಮೆಯಾಗುತ್ತದೆ. ಹಾಗಾಗಿ ಈ ಮೂರು ತಿಂಗಳಲ್ಲಿ ಚಿತ್ರ ಬಿಡುಗಡೆ ಮಾಡಿದರೆ, ರಿಸ್ಕ್ ಜಾಸ್ತಿ ಎಂಬ ಭಯ ನಿರ್ಮಾಪಕರದ್ದು.

 ಹಾಗಂತ ಈ ಮೂರು ತಿಂಗಳುಗಳಲ್ಲಿ ಚಿತ್ರ ಬಿಡುಗಡೆ ಮಾಡಬಾರದು, ಮಾಡಿದರೆ ಜನ ಬರುವುದಿಲ್ಲ ಮತ್ತು ಇದರಿಂದ ಸಾಕಷ್ಟು ನಷ್ಟವಾಗುತ್ತದೆ ಎನ್ನುವುದೆಲ್ಲಾ ಸುಳ್ಳು. ಆದರೆ, ಈ ಮೂರೂ ತಿಂಗಳು ಕನ್ನಡ ಚಿತ್ರರಂಗಕ್ಕೆ ದೊಡ್ಡ ಸವಾಲೆನ್ನುವುದು ಹೌದು. ಪರೀಕ್ಷೆಗಳಿರಲಿ, ಚುನಾವಣೆಯಾಗಲಿ ಅಥವಾ ಕ್ರಿಕೆಟ್‌ ಬರಲಿ … ಅದರಿಂದ ಜನ ಚಿತ್ರ ನೋಡುವುದೇ ಇಲ್ಲ ಅಥವಾ ಚಿತ್ರಮಂದಿರಗಳಿಂದ ದೂರಾಗಿಬಿಡುತ್ತಾರೆ ಎನ್ನುವುದು ತಪ್ಪಾಗುತ್ತದೆ. ಆದರೆ, ಇದೆಲ್ಲದರಿಂದ ಚಿತ್ರಗಳ ಪ್ರರ್ದಶನಕ್ಕೆ ಸ್ವಲ್ಪ ಮಟ್ಟಿಗೆ ಏಟು ಬೀಳುವುದು ಖಂಡಿತ. ಈ ಹಿಂದಿನ ವರ್ಷಗಳಲ್ಲಿ ಕ್ರಿಕೆಟ್‌ ಸೀಸನ್‌ ಇ¨ªಾಗ, ಪರೀಕ್ಷೆಗಳು ನಡೆಯುತ್ತಿ¨ªಾಗ ಕೆಲವು ಪ್ರದರ್ಶನಗಳು ಖಾಲಿ ಹೊಡೆಯುತ್ತಿವೆ ಎಂದು ನಿರ್ಮಾಪಕರೇ ಬೇಸರಿಸಿಕೊಂಡಿದ್ದು ಉಂಟು. ಅದರಲ್ಲೂ ಸ್ವಲ್ಪ ನಿರೀಕ್ಷಿತ ಅಥವಾ ಹೆಸರಾಂತ ಕಲಾವಿದರ ಚಿತ್ರಗಳಿಗೆ ಅಷ್ಟೇನೂ ಬಿಸಿ ತಟ್ಟುವುದಿಲ್ಲ. ಹೊಸಬರ, ಹೆಚ್ಚು ಪ್ರಚಾರ ಮಾಡದವರ, ಕೊನೆಯ ಕ್ಷಣದಲ್ಲಿ ಬಿಡುಗಡೆ ಮಾಡಲು ತೀರ್ಮಾನಿಸಿದವರ ಚಿತ್ರಗಳಿಗೆ ಮಾತ್ರ ಪ್ರೇಕ್ಷಕರ ಅಭಾವ ದೊಡ್ಡ ಮಟ್ಟದಲ್ಲಿ ಕಾಡುವುದು ನಿಜ.

 ಹಾಗಂತ ಹಿಂದಿನ ವರ್ಷಗಳಲ್ಲಿ ಈ ತರಹದ ಸಂದರ್ಭಗಳಲ್ಲಿ ಚಿತ್ರ ಬಿಡುಗಡೆ ಮಾಡಿದವರೆಲ್ಲಾ ಸೋತಿಲ್ಲ ಅಥವಾ ನೆಲಕಚ್ಚಿಲ್ಲ. ಈ ಸಂದರ್ಭದಲ್ಲಿ ದೊಡ್ಡ ಮಟ್ಟದಲ್ಲಿ ಗೆದ್ದ ಚಿತ್ರಗಳ ಉದಾಹರಣೆಗಳೂ ಹಲವು ಇವೆ. ಆದರೆ, ಈ ಬಾರಿ ಕ್ರಿಕೆಟ್‌, ಪರೀಕ್ಷೆ, ಚುನಾವಣೆ ಎಲ್ಲವೂ ಒಂದರಹಿಂದೊಂದು ಬರುತ್ತಿರುವುರಿಂದ, ಚಿತ್ರ ಮಾಡಿ ಮುಗಿಸಿ, ಬಿಡುಗಡೆಗೆ ಎದುರು ನೋಡುತ್ತಿರುವ ಕೆಲವು ನಿರ್ಮಾಪಕರಲ್ಲಾದರೂ ಆತಂಕ ಸಷ್ಟಿಸಿದೆ. ಹಾಗಾಗಿ ಇನ್ನೊಂದೆರೆಡು ತಿಂಗಳಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಚನೆಗೆ ಹಲವರು ಬಂದಿದ್ದು, ಒಂದು ಪಕ್ಷ ಸ್ವಲ್ಪ ತಡವಾದರೆ, ಮೇ ನಂತರ ಚಿತ್ರ ಬಿಡುಗಡೆ ಮಾಡುವ ಯೋಚನೆಗೆ ಹಲವರು ಬಂದಿ¨ªಾರೆ ಎಂದು ಹೇಳಲಾಗುತ್ತಿದೆ.

 ಹಾಗಂತ ಇಷ್ಟಕ್ಕೇ ಮುಗಿಯುವುದಿಲ್ಲ. ಜೂನ್‌ನಲ್ಲಿ ಶಾಲೆ ಆರಂಭ, ಮಳೆ … ಎಂಬ ಹೊಸ ಸವಾಲುಗಳು ಕನ್ನಡ ಚಿತ್ರಗಳ ಮುಂದೆ ಹಾಜರಾಗುತ್ತವೆ. ಇಷ್ಟು ವರ್ಷಗಳ ಕಾಲ ಚಿತ್ರರಂಗ ಇವನ್ನೆಲ್ಲಾ ಮೆಟ್ಟಿ ನಿಂತಿವೆ. ಈ ಬಾರಿಯೂ ಅದು ಮುಂದುವರೆಯುತ್ತದೆ ಅಷ್ಟೇ.
 
 ಯಾವ್ಯಾವ ತಿಂಗಳು, ಏನೇನು? 
 ಫೆಬ್ರವರಿ: ಕ್ರಿಕೆಟ್‌
 ಮಾರ್ಚ್‌- ಏಪ್ರಿಲ್‌: ಪರೀಕ್ಷೆಗಳು ಮತ್ತು ಕ್ರಿಕೆಟ್‌
 ಏಪ್ರಿಲ್‌-ಮೇ: ಕ್ರಿಕೆಟ್‌ ಮತ್ತು ಚುನಾವಣೆ
 
ಬಿಡುಗಡೆಗೆ ಸಜ್ಜಾಗುತ್ತಿರುವ ನಿರೀಕ್ಷಿತ ಚಿತ್ರಗಳು
ಟಗರು, ರಾಜರಥ, ಪ್ರೇಮ ಬರಹ, ರ್‍ಯಾಂಬೋ 2, ಜಾನಿ ಜಾನಿ ಎಸ್‌ ಪಾಪ, ಸಂಹಾರ, ದಳವಾಯಿ

ಟಾಪ್ ನ್ಯೂಸ್

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

Naxals-CM-Office

Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ

Sathish-jarakhoili

Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್‌ ಜಾರಕಿಹೊಳಿ

Congress-Symbol

CLP Meeting: ಜ.13ರಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15

Sathish Ninasam: ಅಶೋಕನಿಗೆ ನೀನಾಸಂ ಸತೀಶ್‌ ಸಾಥ್‌

Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ

Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್‌ ಬಗ್ಗೆ ರಮ್ಯಾ ಮಾತು

ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್‌ ಬಗ್ಗೆ ರಮ್ಯಾ ಮಾತು

Toxic Movie: ಫ್ಯಾನ್ಸ್‌ ನಶೆಯೇರಿಸಿದ ಯಶ್‌; ಹಾಲಿವುಡ್‌ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!

Toxic Movie: ಫ್ಯಾನ್ಸ್‌ ನಶೆಯೇರಿಸಿದ ಯಶ್‌; ಹಾಲಿವುಡ್‌ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

courts

Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.