ಪ್ರೆಸ್ ಮೀಟ್ ನಲ್ಲಿ ಚಿತ್ರ ನಿರ್ದೇಶಕರ ಮೈಮೇಲೆ ಅಗೋಚರ ಶಕ್ತಿ!
Team Udayavani, Feb 1, 2023, 3:19 PM IST
ಸಾಮಾನ್ಯವಾಗಿ ಹಾರರ್ ಸಿನಿಮಾಗಳು ಎಂದರೇನೆ ನೋಡುಗರನ್ನು ಬೆಚ್ಚಿ ಬೀಳಿಸುವಂತಿರುತ್ತವೆ. ಅದರಲ್ಲೂ ನೈಜ ಘಟನೆ ಆಧಾರಿತ ಹಾರರ್ ಸಿನಿಮಾಗಳನ್ನು ತೆರೆಮೇಲೆ ನೋಡುವಾಗ ಪ್ರೇಕ್ಷಕರ ಎದೆಬಡಿತ ಕೊಂಚ ಹೆಚ್ಚಾಗಿಯೇ ಇರುತ್ತದೆ. ಇನ್ನು ಕೆಲವೊಮ್ಮೆ ಇಂಥ ನೈಜ ಘಟನೆ ಆಧಾರಿತ ಹಾರರ್ ಸಿನಿಮಾಗಳ ಚಿತ್ರೀಕರಣ ಸಂದರ್ಭದಲ್ಲಿ ಅದರ ಕಲಾವಿದರು, ತಂತ್ರಜ್ಞರು ಮತ್ತು ಚಿತ್ರತಂಡ ತೆರೆಹಿಂದೆ ತಮಗಾದ ಹಾರರ್ ಅನುಭವವಾದ ಬಗ್ಗೆಯೂ ಕೇಳಿದ್ದು ಉಂಟು. ಆದರೆ ಇಲ್ಲೊಂದು ಚಿತ್ರತಂಡ ತಮ್ಮ ಸಿನಿಮಾದ ಬಗ್ಗೆ ಮಾಹಿತಿ ನೀಡಲು ಕರೆದಿದ್ದ ಪ್ರಸ್‌ಮೀಟ್ ನಲ್ಲಿಯೇ ನೆರೆದಿದ್ದ ಪತ್ರಕರ್ತರ ಮುಂದೆ ಅಂಥದ್ದೊಂದು ಘಟನೆ ನಡೆದಿದೆ.
ಹೌದು, “ಸಕೂಚಿ’ ಎಂಬ ಹೊಸಬರ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಈ ಸಿನಿಮಾದ ಬಗ್ಗೆ ಮಾಹಿತಿ ನೀಡುತ್ತಿದ್ದ ನಿರ್ದೇಶಕ ಅಶೋಕ್ ಚಕ್ರವರ್ತಿ ಅವರ ಮೇಲೆ ಅಗೋಚರ ಶಕ್ತಿಯ ಆವಾಹನೆಯಾಗಿ ಕ್ಷಣಕಾಲ ನೆರೆದಿದ್ದ ಪತ್ರಕರ್ತರನ್ನು ಬೆಚ್ಚಿ ಬೀಳಿಸುವಂತೆ ಮಾಡಿತು!
“ಸಕೂಚಿ’ ನೈಜ ಘಟನೆ ಆಧಾರಿತ ಸಿನಿಮಾವಾಗಿದ್ದು, ಈ ಸಿನಿಮಾದ ಸ್ಕ್ರಿಪ್ಟ್ ಹಂತದಲ್ಲಿ ಮತ್ತು ಚಿತ್ರೀಕರಣದಲ್ಲೂ ಇಂಥ ಒಂದಷ್ಟು ಅಗೋಚರ ಅನುಭವಗಳು ಚಿತ್ರತಂಡಕ್ಕೆ ಆಗಿದೆಯಂತೆ. ಈಗ “ಸಕೂಚಿ’ ಬಿಡುಗಡೆಯ ಹಂತಕ್ಕೆ ಬಂದಿದ್ದು, ಇಲ್ಲೂ ಅಂಥದ್ದೇ ಅನುಭವವಾಗಿದೆ ಎಂಬುದು ಚಿತ್ರತಂಡದ ಮಾತು.
ಅಂದಹಾಗೆ “ಸಕೂಚಿ’ ವಾಮಾಚಾರ ಮತ್ತು ದುಷ್ಟಶಕ್ತಿಗಳ ಪ್ರಯೋಗ ಮುಂತಾದ ವಿಷಯಗಳ ಸುತ್ತ ನಡೆಯುವ ಸಿನಿಮಾ. ಕಣ್ಣಾರೆ ಕಂಡಿರುವ, ಕೇಳಿರುವ ಅದೆಷ್ಟೋ ವಿಷಯಗಳನ್ನು ಸಿನಿಮಾದಲ್ಲಿ ಹೇಳಿದ್ದೇವೆ. ಸಿನಿಮಾ ನೋಡಿದ ಪ್ರತಿಯೊಬ್ಬರಿಗೂ ಇಂಥದ್ದೊಂದು ಅನುಭವವಾಗಿರುತ್ತದೆ ಎನ್ನುತ್ತದೆ ಚಿತ್ರತಂಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.