ಕಡಲೆಕಾಯಿ ಪರಿಷೆಯಲ್ಲಿ “ಸಲಗ’ ಕ್ಲೈಮ್ಯಾಕ್ಸ್
ಸಾವಿರಾರು ಜನರ ಮಧ್ಯೆ ಚಿತ್ರೀಕರಣ
Team Udayavani, Dec 8, 2019, 6:03 AM IST
ಸಿನಿಮಾದವರು ನೈಜತೆ ಬಯಸೋದು ಜಾಸ್ತಿ. ಆದರೆ, ನೈಜತೆಯಲ್ಲಿ ಚಿತ್ರೀಕರಣ ಮಾಡೋದು ಮಾತ್ರ ಕಷ್ಟದ ಕೆಲಸ. ಅದರಲ್ಲೂ ಜಾತ್ರೆ, ಸಮಾರಂಭಗಳ ನಡುವೆ ಚಿತ್ರೀಕರಣ ಮಾಡೋದೆಂದರೆ ಅದು ಸುಲಭದ ಕೆಲಸವಲ್ಲ. ಅದರಲ್ಲೂ ಸ್ಟಾರ್ ನಟರನ್ನು ಇಟ್ಟುಕೊಂಡು ಔಟ್‌ಡೋರ್‌ನಲ್ಲಿ ಚಿತ್ರೀಕರಣ ರಿಸ್ಕ್ನ ಕೆಲಸ. ಆದರೆ, “ಸಲಗ’ ಚಿತ್ರತಂಡ ಮಾತ್ರ ಆ ತರಹದ ಒಂದು ಸವಾಲನ್ನು ಯಶಸ್ವಿಯಾಗಿ ಜಯಿಸಿದೆ.
ಹೌದು, “ದುನಿಯಾ’ ವಿಜಯ್ ನಿರ್ದೇಶನದ “ಸಲಗ’ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ ಇತ್ತೀಚೆಗೆ ಬಸವನಗುಡಿಯ ಕಡಲೆಕಾಯಿ ಪರಿಷೆಯಲ್ಲಿ ನಡೆದಿದೆ. 50 ಸಾವಿರಕ್ಕೂ ಹೆಚ್ಚು ಜನರು ಸೇರಿದ್ದ ಪರಿಷೆಯಲ್ಲಿ ದುನಿಯಾ ವಿಜಯ್ ಹಾಗೂ ತಂಡ “ಸಲಗ’ದ ಕ್ಲೈಮ್ಯಾಕ್ಸ್‌ನ ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿದೆ. ಪರಿಷೆ ಮುಗಿದರೂ ಮತ್ತೇ ಮೂರು ದಿನಗಳ ಕಾಲ ಆ ವಾತಾವರಣವನ್ನು ರೀಕ್ರಿಯೇಟ್ ಮಾಡಿ, ಚಿತ್ರೀಕರಣ ಮಾಡಲಿದೆ ಚಿತ್ರತಂಡ. ಈ ಮೂಲಕ “ಸಲಗ’ ಕ್ಲೈಮ್ಯಾಕ್ಸ್‌ಗೆ ನೈಜತೆಯ ಸ್ಪರ್ಶ ನೀಡಿದೆ.
ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಫೈಟ್ ಹಾಗೂ ಹಾಡುಗಳ ಚಿತ್ರೀಕರಣ ಬಾಕಿ ಇದೆ. ಚಿತ್ರದ ಫೈಟ್‌ವೊಂದನ್ನು ಕಲಾಸಿಪಾಳ್ಯದಲ್ಲಿ ಚಿತ್ರೀಕರಿಸುವ ಯೋಜನೆಯೂ ಚಿತ್ರತಂಡಕ್ಕಿದೆ. ಚಿತ್ರದ ಇಂಟ್ರೋಡಕ್ಷನ್ ಹಾಡು ಬಾಕಿ ಇದ್ದು, ಅದನ್ನೂ ಅದ್ಧೂರಿಯಾಗಿ ಚಿತ್ರೀಕರಿಸಲು ಮುಂದಾಗಿದೆ. ಕೆ.ಪಿ.ಶ್ರೀಕಾಂತ್ ನಿರ್ಮಾಣದ ಈ ಚಿತ್ರವನ್ನು “ದುನಿಯಾ’ ವಿಜಯ್ ನಿರ್ದೇಶಿಸುತ್ತಿದ್ದಾರೆ. ಇದು ಅವರ ನಿರ್ದೇಶನದ ಚೊಚ್ಚಲ ಚಿತ್ರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.