‘ವಿಕ್ರಾಂತ್ ರೋಣ’ನಿಗೆ ಸಲ್ಲು ಭಾಯ್ ಸಾಥ್
Team Udayavani, May 17, 2022, 2:41 PM IST
ಈಗಾಗಲೇ ತನ್ನ ಟೈಟಲ್ ಪೋಸ್ಟರ್, ಪ್ರೋಮೋ ಮೂಲಕ ಸಿನಿಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿರುವ “ವಿಕ್ರಾಂತ್ ರೋಣ’ ಇದೇ ಜುಲೈ. 28ಕ್ಕೆ ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ಇತ್ತೀಚೆಗಷ್ಟೇ “ವಿಕ್ರಾಂತ್ ರೋಣ’ ಸಿನಿಮಾದ ಸಾಗರೋತ್ತರ ಹಕ್ಕುಗಳು ಭಾರೀ ಮೊತ್ತಕ್ಕೆ ಮಾರಾಟವಾಗುವ ಮೂಲಕ ಸಿನಿಮಾ ದಾಖಲೆ ಬರೆದಿತ್ತು. ಇದೀಗ ಚಿತ್ರತಂಡದ ಕಡೆಯಿಂದ ಮತ್ತೂಂದು ಮಾಹಿತಿ ಹೊರಬಿದ್ದಿದೆ. ಅದೇನೆಂದರೆ, “ವಿಕ್ರಾಂತ್ ರೋಣ’ ಸಿನಿಮಾಗೆ ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಸಾಥ್ ನೀಡುತ್ತಿದ್ದಾರೆ.
ಹೌದು, “ವಿಕ್ರಾಂತ್ ರೋಣ’ ಸಿನಿಮಾದ ಹಿಂದಿ ವರ್ಷನ್ ಅನ್ನು ಸಲ್ಮಾನ್ ಖಾನ್ ಪ್ರಸೆಂಟ್ ಮಾಡುತ್ತಿದ್ದಾರೆ. ಈ ಬಗ್ಗೆ ಸಿನಿಮಾತಂಡ ಬಹಿರಂಗ ಪಡಿಸಿದೆ. ಸಲ್ಮಾನ್ ಖಾನ್ ಕೂಡ ಈ ಕುರಿತು ಟ್ವೀಟ್ ಮಾಡಿ “ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣ 3ಡಿ ಅನುಭವವನ್ನು ಹಿಂದಿಯಲ್ಲಿ ಪ್ರಸೆಂಟ್ ಮಾಡುತ್ತಿರುವುದು ಸಂತೋಷವಾಗುತ್ತಿದೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನು ಮೇ 16ರಂದು “ವಿಕ್ರಾಂತ್ ರೋಣ’ ಸಿನಿಮಾದ ಬಗ್ಗೆ ಬಿಗ್ ಅಪ್‌ಡೇಟ್ ನೀಡುವುದಾಗಿ ಚಿತ್ರತಂಡ ಸಾಮಾಜಿಕ ಜಾಲತಾಣಗಳಲ್ಲಿ ಘೋಷಣೆ ಮಾಡಿತ್ತು. ಹೀಗಾಗಿ “ವಿಕ್ರಾಂತ್ ರೋಣ’ನಿಂದ ಬರುವ ಅಪ್ ಡೇಟ್ ಏನಿರಬಹುದು ಎಂದು ಸುದೀಪ್ ಅಭಿಮಾನಿಗಳು ಕೂಡ ಕಾತರದಿಂದ ಕಾಯುತ್ತಿದ್ದರು. ಅದರಂತೆ ಸೋಮವಾರ ಸಂಜೆ 5 ಗಂಟೆ 5 ನಿಮಿಷಕ್ಕೆ ಸರಿಯಾಗಿ “ವಿಕ್ರಾಂತ್ ರೋಣ’ ಚಿತ್ರತಂಡ, ತಮ್ಮ ಸಿನಿಮಾಕ್ಕೆ ಸಲ್ಮಾನ್ ಖಾನ್ ಕೈ ಜೋಡಿಸಿರುವ ಮಾಹಿತಿಯನ್ನು ಅಭಿಮಾನಿಗಳ ಮುಂದೆ ಹಂಚಿಕೊಂಡಿದೆ.
ಇದನ್ನೂ ಓದಿ:777 ಚಾರ್ಲಿ ಕಂಪ್ಲೀಟ್ ಎಮೋಶನ್ಸ್ ಇಟ್ಟುಕೊಂಡು ಮಾಡಿದ ಸಿನಿಮಾ: ರಕ್ಷಿತ್ ಶೆಟ್ಟಿ
ಈ ಮೊದಲು ಅಂದರೆ “ವಿಕ್ರಾಂತ್ ರೋಣ’ ಸಿನಿಮಾದ ಟೀಸರ್ ಅನ್ನು ಸಲ್ಮಾನ್ ಖಾನ್ ರಿಲೀಸ್ ಮಾಡಿದ್ದ ಸಲ್ಮಾನ್ ಖಾನ್ ಚಿತ್ರದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು.
ಅಂದಹಾಗೆ, ವಿಕ್ರಾಂತ್ ರೋಣ’ ಸಿನಿಮಾ 3ಡಿ ಅವತರಣಿಕೆಯಲ್ಲಿ ಮೂಡಿ ಬರುತ್ತಿದೆ. ಕನ್ನಡ ಮಾತ್ರವಲ್ಲದೆ ಇಂಗ್ಲಿಷ್, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ 6 ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ. ಇನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಚಿತ್ರದಲ್ಲಿ ತಮ್ಮ ಪಾತ್ರಕ್ಕೆ ಸ್ವತಃ ಕಿಚ್ಚ ಸುದೀಪ್ ಡಬ್ಬಿಂಗ್ ಮಾಡಿದ್ದಾರೆ.
ಸಿನಿಮಾದಲ್ಲಿ ಕಿಚ್ಚ ಸುದೀಪ್ ಜೊತೆ ನಿರೂಪ್ ಭಂಡಾರಿ, ನೀತಾ ಅಶೋಕ್, ಜಾಕ್ವೆಲಿನ್ ಫರ್ನಾಂಡಿಸ್, ರವಿಶಂಕರ್ ಗೌಡ, ಮಧುಸೂಧನ್ ರಾವ್ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನದ “ವಿಕ್ರಾಂತ್ ರೋಣ’ ಸಿನಿಮಾವನ್ನು ಜಾಕ್ ಮಂಜುನಾಥ್ ನಿರ್ಮಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhuvanam Gaganam Movie: ಪ್ರೇಮಿಗಳ ದಿನಕ್ಕೆ ಭುವನಂ ಗಗನಂ ತೆರೆಗೆ
KD Movie: ಕೆಡಿ ಶಿವ ಮೊಗದಲ್ಲಿ 25 ಮಿಲಿಯನ್ ನಗು
ಇನ್ಮುಂದೆ ಶಿವಣ್ಣನಿಗೆ ಡಬಲ್ ಪವರ್ ಇರುತ್ತದೆ.. ಸರ್ಜರಿ ಬಳಿಕ ಹ್ಯಾಟ್ರಿಕ್ ಹೀರೋ ಮಾತು
ಹತ್ತಾರು ಸಿನಿಮಾ.. ನೂರಕ್ಕೆ ನೂರು ನಿರೀಕ್ಷೆ.. ಈ ವರ್ಷದ ಬಹು ನಿರೀಕ್ಷಿತ ಕನ್ನಡ ಚಿತ್ರಗಳಿವು
2025: ಬರುವುದೆಲ್ಲಾ ಬರಲಿ ಗೆಲುವು ನಮ್ಮದಾಗಲಿ: ಸಿನಿಮಾದ 6 ವಿಭಾಗದವರ ನಿರೀಕ್ಷೆಯ ಮಾತು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragod: ವೈದ್ಯಕೀಯ ಕಾಲೇಜು ಆಗಿ ಭಡ್ತಿಗೊಳ್ಳಲಿರುವ ಕಾಸರಗೋಡು ಜಿಲ್ಲಾ ಜನರಲ್ ಆಸ್ಪತ್ರೆ
Ullala; ನರಿಂಗಾನ ದುರಂತ: ಗಾಯಾಳುಗಳಿಗೆ ನಿರಂತರ ಧೈರ್ಯ ತುಂಬುತ್ತಿದ್ದ ಶಿಕ್ಷಕ
ಅರಣ್ಯದಲ್ಲಿ ಹೊಸ ವರ್ಷ ಆಚರಣೆಗೆ ಸಿದ್ಧತೆ: 30 ಮಂದಿ ವಶ, ಮುಚ್ಚಳಿಕೆ ಪಡೆದು ಬಿಡುಗಡೆ
ESI ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸಂಕಷ್ಟ:ಸಂಸದ ಬ್ರಿಜೇಶ್ ಚೌಟ ಭೇಟಿ;ಅಧಿಕಾರಿಗಳಿಗೆ ತಾಕೀತು
Kodagu: ಯೋಧ ದಿವಿನ್ ಪಂಚಭೂತಗಳಲ್ಲಿ ಲೀನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.