ಪೊಲೀಸರಿಗೊಂದು ‘ಸೆಲ್ಯೂಟ್’: ಪ್ರಮುಖ ಪಾತ್ರದಲ್ಲಿ ಅಶ್ವಿನ್ ಹಾಸನ್
Team Udayavani, Jul 14, 2022, 3:46 PM IST
ಪೊಲೀಸ್ ಇಲಾಖೆ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪ್ರಮುಖಪಾತ್ರ ವಹಿಸುತ್ತದೆ. ಇನ್ನು ಚಿತ್ರರಂಗದಲ್ಲಿ ಪೊಲೀಸ್ ಅಧಿಕಾರಿಗಳ ಕುರಿತ ಅನೇಕ ಸಿನಿಮಾಗಳು ಬಂದುಹೋಗಿದೆ. ಇದೀಗ ಇಂತಹ ರಕ್ಷಕರ ಪ್ರತಿನಿತ್ಯ ಜೀವನದ ಅಡೆತಡೆಗಳು ಹಾಗೂ ಅವರು ಎದುರಿಸುವ ಸವಾಲುಗಳನ್ನು ಪ್ರೇಕ್ಷಕರಿಗೆ ತಿಳಿಸಲು ಕಿರುಚಿತ್ರ ಒಂದು ತಯಾರಾಗಿದೆ.
“ಗೌರಿ ವೆಂಚರ್’ ಬ್ಯಾನರ್‌ನಲ್ಲಿ ದೀಪಕ್ ಗೌಡ ನಿರ್ಮಿಸಿರುವ “ಸೆಲ್ಯೂಟ್ ’ ಕಿರುಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಯುವ ನಿರ್ದೇಶಕ ತ್ಯಾಗರಾಜ್ ಕಿರುಚಿತ್ರವನ್ನು ನಿರ್ದೇಶಿಸಿದ್ದು, ನಟ ಅಶ್ವಿನ್ ಹಾಸನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇತ್ತೀಚಿಗೆ “ಸೆಲ್ಯೂಟ್’ ಚಿತ್ರತಂಡ ಚಿತ್ರದ ಕಿರುಚಿತ್ರ ಪ್ರದರ್ಶನ ಆಯೋಜಿಸಿದ್ದು, ನಿವೃತ್ತ ಪೊಲೀಸ್ ಅಧಿಕಾರಿ ಎಸ್. ಕೆ ಉಮೇಶ್ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಎಸ್. ಕೆ ಉಮೇಶ್ ಮಾತನಾಡಿ, “ಚಿತ್ರ ಚೆನ್ನಾಗಿ ಮೂಡಿಬಂದಿದೆ. ಪೊಲೀಸ್ ಅಧಿಕಾರಿಗಳ ನಿಜ ಜೀವನ ಇದರಲ್ಲಿ ತೋರಿಸಲಾಗಿದೆ’ಎಂದರು.
ನಿರ್ದೇಶಕ ತ್ಯಾಗರಾಜ್ ಮಾತನಾಡಿ, “”ಸೆಲ್ಯೂಟ್’ ಚಿತ್ರ ಪ್ರಾರಂಭ ಆಗಿ¨ªೆ ಒಂದು ಮ್ಯಾಜಿಕ್. ನಾನು ದೀಪಕ್ ಅವರಿಗೆ 15 ನಿಮಿಷ ಕಥೆ ಹೇಳಿದ್ದೆ. ಅವರು ತಕ್ಷಣ ಕಥೆಗೆ ಕನೆಕ್ಟ್ ಆದರು. ಗೆಲ್ಲುವವರಿಗೆ ಕೈ ತಟ್ಟಿ ಪ್ರೋತ್ಸಾಹ ಮಾಡಬೇಕಂತೆ, ಸೋತವನಿಗೆ ಬೆನ್ನುತಟ್ಟಿ ಪ್ರೋತ್ಸಾಹ ಮಾಡಬೇಕಂತೆ. ನನ್ನಂತ ಕನಸು ಕಾಣುವವನಿಗೆ ರೆಕ್ಕೆ ಕಟ್ಟಿ ಪ್ರೋತ್ಸಾಹ ಮಾಡಬೇಕು. ಅದನ್ನ ನಮ್ಮ ನಿರ್ಮಾಪಕರು ಮಾಡಿದ್ದಾರೆ’ ಎಂದರು.
ಚಿತ್ರ ನಿರ್ಮಾಪಕ ದೀಪಕ್ ಗೌಡ, “”ಸೆಲ್ಯೂಟ್’ ಕಿರುಚಿತ್ರವನ್ನು ನನ್ನ ತಂದೆಗೆ ಅರ್ಪಿಸುತ್ತೇನೆ. ನನ್ನ ತಂದೆ ಕೂಡಾ ನಿವೃತ್ತ ಪೊಲೀಸ್ ಅಧಿಕಾರಿ. ನಾವು ಪೊಲೀಸ್ ಹಿನ್ನೆಲೆಯ ಕುಟುಂಬದಿಂದ ಬಂದಿರುವುದರಿಂದ ಈ ಕಥೆ ನನಗೆ ಬಹಳ ಇಷ್ಟ ಆಯಿತು. ಎಲ್ಲರಿಗೂ ಆರಕ್ಷಕರ ನಿಜವಾದ ಕಷ್ಟ ಸವಾಲುಗಳು ತಿಳಿಯಲಿ ಎಂದು ಈ ಚಿತ್ರ ನಿರ್ಮಿಸಿದ್ದೇವೆ’ ಎಂದರು.
“ಸೆಲ್ಯೂಟ್’ ಕಿರುಚಿತ್ರಕ್ಕೆ ರವಿ.ಡಿ ಸಂಭಾಷಣೆ, ಅಜಿತ್ ಎ. ವಿ ಛಾಯಾಗ್ರಹಣ, ಕಿರಣ್ ಎ. ವಿ ಸಂಕಲನ, ಪ್ರದ್ಯೋತ್ತನ್ ಸಂಗೀತ ನೀಡಿದ್ದಾರೆ. ಅಶ್ವಿನ್ ಹಾಸನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ನವೀನ್ ಸಾಣೇಹಳ್ಳಿ, ಲೋಕೇಶ್ ಆಚಾರ್, ರೋಹಿಣಿ ಮುಂತಾದವರು ಅಭಿನಯಿಸಿದ್ದಾರೆ. ಇನ್ನು ಸೆಲ್ಯೂಟ್ ಕಿರುಚಿತ್ರ “ಡಿ-ಬೀಟ್ಸ್’ ಯೂಟ್ಯೂಬ್ ಚಾನೆಲ್ ಮೂಲಕ ಜುಲೈ 15 ರಂದು ಬಿಡುಗಡೆಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು
Drone Prathap: ಸಿನಿಮಾರಂಗಕ್ಕೆ ಡ್ರೋನ್ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ
MUST WATCH
ಹೊಸ ಸೇರ್ಪಡೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.