Samarjit Lankesh; ಚಿತ್ರರಂಗಕ್ಕೆ ಲಂಕೇಶ್‌ ಮೊಮ್ಮಗ

Team Udayavani, Sep 1, 2023, 2:22 PM IST

Samarjit Lankesh; ಚಿತ್ರರಂಗಕ್ಕೆ ಲಂಕೇಶ್‌ ಮೊಮ್ಮಗ

ಕನ್ನಡ ಸಾಹಿತ್ಯ, ಪತ್ರಿಕೋದ್ಯಮ ಮತ್ತು ಸಿನಿಮಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದವರು ಪಿ. ಲಂಕೇಶ್‌. ಲಂಕೇಶ್‌ ಪುತ್ರಿ ಕವಿತಾ ಲಂಕೇಶ್‌, ಪುತ್ರ ಇಂದ್ರಜಿತ್‌ ಲಂಕೇಶ್‌ ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಈಗ ಪಿ. ಲಂಕೇಶ್‌ ಅವರ ಮೊಮ್ಮಗ ಕೂಡ ಚಿತ್ರರಂಗಕ್ಕೆ ಅಡಿಯಿಡುತ್ತಿದ್ದಾರೆ.

ಹೌದು, ಪಿ. ಲಂಕೇಶ್‌ ಅವರ ಮಗ ಇಂದ್ರಜಿತ್‌ ಲಂಕೇಶ್‌ ಮತ್ತು ಅರ್ಪಿತಾ ದಂಪತಿ ಪುತ್ರ ಸಮರ್‌ ಜಿತ್‌ ಲಂಕೇಶ್‌ ಈಗ ನಾಯಕ ನಟನಾಗಿ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಮೂಲಕ ಪಿ. ಲಂಕೇಶ್‌ ಕುಟುಂಬ ಮೂರನೇ ತಲೆಮಾರು ಕೂಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದೆ.

ಅಂದಹಾಗೆ, ಪಿ. ಲಂಕೇಶ್‌ ಮೊಮ್ಮಗನ ಚೊಚ್ಚಲ ಸಿನಿಮಾಕ್ಕೆ “ಗೌರಿ’ ಎಂದು ಹೆಸರಿಡಲಾಗಿದೆ. ಈಗಾಗಲೇ ಸದ್ದಿಲ್ಲದೆ “ಗೌರಿ’ ಸಿನಿಮಾದ ಪ್ರೀ-ಪ್ರೊಡಕ್ಷನ್‌ ಕೆಲಸಗಳು ಪೂರ್ಣಗೊಂಡಿದ್ದು, ಇದೀಗ ಸಿನಿಮಾದ ಮುಹೂರ್ತ ಕೂಡ ನೆರವೇರಿದೆ.

ಇನ್ನು ತಮ್ಮ ಚೊಚ್ಚಲ ಸಿನಿಮಾದ ಬಗ್ಗೆ ಮಾತನಾಡಿರುವ ಸಮರ್‌ಜಿತ್‌ ಲಂಕೇಶ್‌, ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. “ನಮ್ಮ ತಂದೆ ಸಿನಿಮಾ ನಿರ್ದೇಶಕ ಅನ್ನುವ ಕಾರಣಕ್ಕಾಗಿ ನಾನು ಸಿನಿಮಾರಂಗಕ್ಕೆ ಬರುತ್ತಿಲ್ಲ. ಬದಲಾಗಿ ನನಗೆ ಇಲ್ಲಿ ನಟನಾಗಬೇಕು, ಇಲ್ಲೇ ಏನಾದರೂ ಸಾಧಿಸಬೇಕು ಎಂಬ ಹಂಬಲವಿದೆ. ಹಾಗಾಗಿ ಸಿನಿಮಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಇನ್ನು ಸಿನಿಮಾದಲ್ಲಿ ನಟನಾಗುವುದಕ್ಕೂ ಮೊದಲು ಸಾಕಷ್ಟು ತಯಾರಿ ಮಾಡಿಕೊಂಡಿದ್ದೇನೆ’ ಎನ್ನುವ ಸಮರ್‌ಜಿತ್‌, “ಬೆಂಗಳೂರಿನ “ರಂಗಶಂಕರ’ ಅದಾದ ನಂತರ “ನ್ಯೂಯಾರ್ಕ್‌ ಫಿಲಂ ಅಕಾಡೆಮಿ’ಯಲ್ಲಿ ಸಿನಿಮಾ ಸಂಬಂಧಿಸಿದ ಕೋರ್ಸ್‌ ಮಾಡಿದ್ದೇನೆ. ಅಲ್ಲಿ ನಟನಾ ತರಬೇತಿಯನ್ನು ಪಡೆದಿದ್ದೇನೆ. ಬೆಂಗಳೂರಿಗೆ ಬಂದ ನಂತರ ಚೇತನ್‌ ಡಿಸೋಜಾ ಬಳಿ ಸಾಹಸ ಕಲೆಯನ್ನು ಕಲಿತುಕೊಂಡರೆ, ಮುರಳಿ ಬಳಿ ಡಾನ್ಸ್‌ ಪ್ರಾಕ್ಟೀಸ್‌ ಮಾಡುತ್ತಿದ್ದೇನೆ. ಜೊತೆಗೆ ನೀನಾಸಂನ ಇಬ್ಬರು ಶಿಕ್ಷಕರಿಂದ ತರಬೇತಿ ಪಡೆದುಕೊಂಡಿದ್ದೇನೆ. ಜೊತೆಗೆ ಮಾಡೆಲಿಂಗ್‌ ಕ್ಷೇತ್ರದಲ್ಲಿ ಮತ್ತು ಜಾಹೀರಾತು ಕ್ಷೇತ್ರದಲ್ಲೂ ಒಂದಷ್ಟು ಕೆಲಸ ಮಾಡಿದ್ದೇನೆ’ ಎಂದು ತಮ್ಮ ತೆರೆ ಹಿಂದಿನ ಹೋಂ ವರ್ಕ್‌ ಬಗ್ಗೆ ವಿವರಿಸುತ್ತಾರೆ.

ಇವಿಷ್ಟು ಅಭಿನಯಕ್ಕೆ ಸಂಬಂಧಿಸಿದ ತಯಾರಿಯಾದರೆ, ಇದರ ಜೊತೆಗೆ ನಿರ್ದೇಶನ ವಿಭಾಗದಲ್ಲೂ ಸಮರ್‌ಜಿತ್‌ ಒಂದಷ್ಟು ತರಬೇತಿ ಪಡೆದು ಕೊಂಡಿದ್ದಾರೆ. “ಯೋಗರಾಜ್‌ ಭಟ್‌ ನಿರ್ದೇಶನದ “ಗರಡಿ’ ಮತ್ತು “ಕರಟಕ ದಮನಕ’ ಎಂಬ ಎರಡು ಸಿನಿಮಾಗಳಲ್ಲಿ ಅವರ ಬಳಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಸಿನಿಮಾದಲ್ಲಿ ಕಲಿಯಬೇಕಾಗಿರುವುದು ಇನ್ನೂ ಸಾಕಷ್ಟಿದೆ. ಸದ್ಯ ಮೊದಲ ಸಿನಿಮಾದ ಮೂಲಕ ನಟನಾಗಿ ಪ್ರೇಕ್ಷಕರ ಮುಂದೆ ಬರಲು ಬೇಕಾದ ಎಲ್ಲ ತಯಾರಿ ಮಾಡಿಕೊಂಡಿದ್ದೇನೆ. ಪ್ರೇಕ್ಷಕರ ಮನರಂಜಿಸುವ ಭರವಸೆಯಿದೆ’ ಎನ್ನುತ್ತಾರೆ ಸಮರ್‌ಜಿತ್‌.

ಇನ್ನು ಸಮರ್‌ಜಿತ್‌ ಅಭಿನಯದ ಚೊಚ್ಚಲ ಸಿನಿಮಾ “ಗೌರಿ’ಗೆ ತಂದೆ ಇಂದ್ರಜಿತ್‌ ಲಂಕೇಶ್‌ ಆ್ಯಕ್ಷನ್‌-ಕಟ್‌ ಹೇಳುತ್ತಿದ್ದಾರೆ. ತಾಯಿ ಅರ್ಪಿತಾ ಲಂಕೇಶ್‌ ಸಿನಿಮಾಕ್ಕೆ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ.

ಟಾಪ್ ನ್ಯೂಸ್

12-mng

ಮುಡಾ ಪ್ರಕರಣ;ಸಿ.ಎಂ.ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ದ.ಕ. ಜಿಲ್ಲಾ ಬಿಜೆಪಿಯಿಂದ ಪ್ರತಿಭಟನೆ

18-nail-polish

Nail Polish: ಉಗುರುಗಳ ಅಂದ ಹೆಚ್ಚಿಸುವ ನೈಲ್ ಪಾಲಿಶ್ ನಲ್ಲಿದೆ ಕ್ಯಾನ್ಸರ್ ನ ರಾಸಾಯನಿಕ ಅಂಶ

Mangaluru: ಶ್ರೀಮತಿ ಶೆಟ್ಟಿ ಕೊಲೆ ಪ್ರಕರಣ; ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Mangaluru: ಶ್ರೀಮತಿ ಶೆಟ್ಟಿ ಕೊಲೆ ಪ್ರಕರಣ; ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

11-bellary

Bellary: ದರ್ಶನ್ ನನ್ನು ಭೇಟಿಯಾದ ವಕೀಲ ಸುನೀಲ್; ಹಲವು ವಿಚಾರಗಳ ಬಗ್ಗೆ ಚರ್ಚೆ

CM-preess

MUDA Scam: ಹೈಕೋರ್ಟ್‌ ಅಭಿಯೋಜನೆಗೆ ತಿರಸ್ಕರಿಸಿ ತನಿಖೆಗಷ್ಟೇ ಅನುಮತಿ ಕೊಟ್ಟಿದೆ: ಸಿಎಂ

ಧಾರವಾಡ: ವರ್ಷವಿಡೀ ಕಬ್ಬಿನ ಹಾಲು ಕೆಡದಂತೆ ಇಡುವ ತಂತ್ರ ಶೋಧಿಸಿದ ರೈತ

ಧಾರವಾಡ: ವರ್ಷವಿಡೀ ಕಬ್ಬಿನ ಹಾಲು ಕೆಡದಂತೆ ಇಡುವ ತಂತ್ರ ಶೋಧಿಸಿದ ರೈತ

UP:ಅಪಹರಣಕ್ಕೊಳಗಾಗಿದ್ದ ಬಾಲಕನೇ 17 ವರ್ಷದ ಬಳಿಕ ವಕೀಲರಾಗಿ ಅಪಹರಣಕಾರರಿಗೆ ಶಿಕ್ಷೆ ಕೊಡಿಸಿದ!

UP:ಅಪಹರಣಕ್ಕೊಳಗಾಗಿದ್ದ ಬಾಲಕನೇ 17 ವರ್ಷದ ಬಳಿಕ ವಕೀಲರಾಗಿ ಅಪಹರಣಕಾರರಿಗೆ ಶಿಕ್ಷೆ ಕೊಡಿಸಿದ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rummy Aata Movie: ‘ರಮ್ಮಿ’ ಮೊಗದಲ್ಲಿ ನಗು

Rummy Aata Movie: ‘ರಮ್ಮಿ’ ಮೊಗದಲ್ಲಿ ನಗು

171

Nice Road Movie: ನೈಟ್‌ ರೋಡ್‌ ಸೆ.27ಕ್ಕೆ  ಬಿಡುಗಡೆ

Martin Movie: ಮಾರ್ಟಿನ್‌ಗೆ ಸಾಥ್‌ ನೀಡಿದ ಮೈತ್ರಿ ಮೂವೀ ಮೇಕರ್ಸ್

Martin Movie: ಮಾರ್ಟಿನ್‌ಗೆ ಸಾಥ್‌ ನೀಡಿದ ಮೈತ್ರಿ ಮೂವೀ ಮೇಕರ್ಸ್

Samarjit Lankesh: ʼಗೌರಿʼ ಬಳಿಕ ಇಂದ್ರಜಿತ್‌ ಪುತ್ರನಿಗೆ ಬಾಲಿವುಡ್‌ನಿಂದ‌ ಬಿಗ್‌ ಆಫರ್

Samarjit Lankesh: ʼಗೌರಿʼ ಬಳಿಕ ಇಂದ್ರಜಿತ್‌ ಪುತ್ರನಿಗೆ ಬಾಲಿವುಡ್‌ನಿಂದ‌ ಬಿಗ್‌ ಆಫರ್

5

City Lights Kannada Movie: ವಿಜಯ್‌ ‘ಸಿಟಿ ಲೈಟ್ಸ್‌’ಗೆ ವಿನಯ್‌ ಹೀರೋ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

12-mng

ಮುಡಾ ಪ್ರಕರಣ;ಸಿ.ಎಂ.ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ದ.ಕ. ಜಿಲ್ಲಾ ಬಿಜೆಪಿಯಿಂದ ಪ್ರತಿಭಟನೆ

Malpe: ಆಗ ಕೆಸರು, ಈಗ ಧೂಳು!; ಅರ್ಧಕ್ಕೆ ನಿಂತ ಆದಿಉಡುಪಿ-ಮಲ್ಪೆ ರಸ್ತೆ ಕಾಮಗಾರಿಯ ಕಿರಿಕಿರಿ

Malpe: ಆಗ ಕೆಸರು, ಈಗ ಧೂಳು!; ಅರ್ಧಕ್ಕೆ ನಿಂತ ಆದಿಉಡುಪಿ-ಮಲ್ಪೆ ರಸ್ತೆ ಕಾಮಗಾರಿಯ ಕಿರಿಕಿರಿ

18-nail-polish

Nail Polish: ಉಗುರುಗಳ ಅಂದ ಹೆಚ್ಚಿಸುವ ನೈಲ್ ಪಾಲಿಶ್ ನಲ್ಲಿದೆ ಕ್ಯಾನ್ಸರ್ ನ ರಾಸಾಯನಿಕ ಅಂಶ

Mangaluru: ಶ್ರೀಮತಿ ಶೆಟ್ಟಿ ಕೊಲೆ ಪ್ರಕರಣ; ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Mangaluru: ಶ್ರೀಮತಿ ಶೆಟ್ಟಿ ಕೊಲೆ ಪ್ರಕರಣ; ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

11-bellary

Bellary: ದರ್ಶನ್ ನನ್ನು ಭೇಟಿಯಾದ ವಕೀಲ ಸುನೀಲ್; ಹಲವು ವಿಚಾರಗಳ ಬಗ್ಗೆ ಚರ್ಚೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.