ಸಮರ್ಥ್ ಕೈಯಲ್ಲಿ ‘ಬೆಳ್ಳಿ ಕಾಲುಂಗುರ’
Team Udayavani, Sep 8, 2022, 2:32 PM IST
ಮೂರು ದಶಕಗಳ ಹಿಂದೆ ಬೆಳ್ಳಿತೆರೆ ಮೇಲೆ ರಾರಾಜಿಸಿ, ಮ್ಯೂಸಿಕಲ್ ಹಿಟ್ ನೀಡಿದ ಚಿತ್ರ “ಬೆಳ್ಳಿ ಕಾಲುಂಗುರ’. ಇದೀಗ ಅದೇ ಶೀರ್ಷಿಕೆಯ ಚಿತ್ರ ಹೊಸ ಅವತಾರದಲ್ಲಿ ಮತ್ತೆ ಬರಲಿದ್ದು, “ತನು ಕ್ರಿಯೇಷÕನ್’ ಅಡಿ ಯಲ್ಲಿ ಸಾ.ರಾ ಗೋವಿಂದು ಚಿತ್ರ ನಿರ್ಮಾಣ ಮಾಡು ತ್ತಿದ್ದಾರೆ. ಇಂದಿನ ಬೆಳ್ಳಿಕಾಲುಂಗುರದ ಮೂಲಕ ನವ ನಟ ಸಮರ್ಥ್ ಅವರನ್ನು ಪರಿಚಯಿಸುತ್ತಿದ್ದಾರೆ ನಿರ್ಮಾಪಕ ಸಾ.ರಾ ಗೋವಿಂದು.
ಸಮರ್ಥ್ ಚಿತ್ರರಂಗಕ್ಕೆ ಕಾಲಿಡುವ ಮುನ್ನ ತಯಾರಿ ನಡೆಸಿದ್ದು, ಮುಂಬೈನ ಅನು ಪಮ್ ಖೇರ್ ನಟನಾ ತರಬೇತಿಯಲ್ಲಿ ಕಲಿತಿದ್ದಾರೆ. ನಂತರ ದಿನಗಳಲ್ಲಿ ಹಿಂದಿಯಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡಿ ಅನುಭವ ಹೊಂದಿದ್ದು, “ಬೆಳ್ಳಿ ಕಾಲುಂಗುರ’ ಚಿತ್ರದ ಮೂಲಕ ಸಂಪೂರ್ಣ ಪ್ರಮಾಣದ ನಾಯಕ ನಟನಾಗಿ ಹೊರಹೊಮ್ಮಲಿದ್ದಾರೆ.
ಇನ್ನು ತಮ್ಮ ಚೊಚ್ಚಲ ಚಿತ್ರದ ಕುರಿತು ಮಾತನಾಡುವ ನಟ ಸಮರ್ಥ್ “ಸಾ.ರಾ ಗೋವಿಂದು ಸರ್ “ಬೆಳ್ಳಿಕಾಲುಂಗುರ’ ಹೆಸರನ್ನಿಟ್ಟು ಮತ್ತೂಂದು ಚಿತ್ರ ಮಾಡಲು ಎಲ್ಲಾ ತಯಾರಿ ನಡೆಸಿದ್ದರು. ಈ ಸಮಯದಲ್ಲಿ ನನ್ನ ಅಣ್ಣನ ಮೂಲಕ ಆಫರ್ ಬಂತು. ನಟನೆಯಲ್ಲಿ ಆಸಕ್ತಿ ಇದ್ದ ನನಗೆ ಇದೊಂದು ಒಳ್ಳೆ ಅವಕಾಶ ಎಂದು ಆಡಿಷನ್ ಕೊಟ್ಟು ಚಿತ್ರಕ್ಕೆ ಆಯ್ಕೆ ಆಗಿದ್ದೇನೆ. ಮೊದಲ “ಬೆಳ್ಳಿಕಾಲುಂಗುರ’ ಚಿತ್ರದಂತೆ ಇದು ಕೂಡಾ ಲವ್ ಸ್ಟೋರಿ ಇರುವ ಚಿತ್ರ. ಜೊತೆಗೆ ತ್ರಿಕೋನ ಪ್ರೇಮ ಕಥೆಯನ್ನು ಹೊಂದಿದೆ. ಚಿತ್ರದಲ್ಲಿ ನಾನು ಓರ್ವ ಪ್ರಾಚ್ಯಶಾಸ್ತ್ರದ ವಿದ್ಯಾರ್ಥಿಯಾಗಿ ಅಭಿನಯಿಸು ತ್ತಿದ್ದೇನೆ’ ಎನ್ನುತ್ತಾರೆ.
ತಮ್ಮ ಮೊದಲ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಿರುವ ಸಮರ್ಥ್, “ಈ ಚಿತ್ರ ನನ್ನ ಪಾಲಿಗೆ ಒಂದು ಒಳ್ಳೆ ಅವಕಾಶ, ನನ್ನ ಕೆರಿಯರ್‌ಗೆ ಇದೊಂದು ಬೆಂಚ್ ಮಾರ್ಕ್ ಚಿತ್ರವಾಗುತ್ತೇ ಅನ್ನುವ ಭರವಸೆ ಇದೆ. ಈ ಚಿತ್ರದಲ್ಲಿ ಅಭಿನಯಿಸುವುದು ಒಂದು ಪ್ಲಸ್ ಪಾಯಿಂಟ್ ಮತ್ತು ನನ್ನ ಲಕ್’ ಎನ್ನುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.