ಸಂಹಾರ ವರ್ಸಸ್ ಪ್ರೇಮಬರಹ
Team Udayavani, Jan 22, 2018, 10:41 AM IST
ಅತ್ತ ಕಡೆ “ಸಂಹಾರ’, ಇತ್ತ ಕಡೆ “ಪ್ರೇಮ ಬರಹ’. ಮಧ್ಯದಲ್ಲಿ ಚಿರಂಜೀವಿ ಸರ್ಜಾ! ಇದೇನೆಂದು ನೀವು ಆಶ್ಚರ್ಯಪಡಬೇಡಿ. ಫೆಬ್ರವರಿಯಲ್ಲಿ ಬಿಡುಗಡೆಯನ್ನು ಘೋಷಿಸಿಕೊಂಡಿರುವ ಚಿರಂಜೀವಿ ಸರ್ಜಾ ಸಿನಿಮಾ. ಹೌದು, “ಸಂಹಾರ’ ಹಾಗೂ “ಪ್ರೇಮ ಬರಹ’ ಸಿನಿಮಾಗಳು ಫೆ.9 ರಂದು ಬಿಡುಗಡೆಯಾಗುತ್ತಿವೆ. ಹಾಗಾಗಿ, ಒಂದೇ ದಿನ ಚಿರಂಜೀವಿ ಸರ್ಜಾ ನಟನೆಯ ಎರಡು ಸಿನಿಮಾಗಳು ಬಿಡುಗಡೆಯಾದಂತಾಗುತ್ತದೆ.
“ಸಂಹಾರ’ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಹೀರೋ ಎಂಬುದು ನಿಮಗೆ ಗೊತ್ತು. ಆದರೆ, “ಪ್ರೇಮ ಬರಹ’ಕ್ಕೂ ಚಿರಂಜೀವಿಗೂ ಏನು ಸಂಬಂಧ ಎಂದು ನೀವು ಕೇಳಬಹುದು. ಸಂಬಂಧ ಇರೋದು ಅಲ್ಲೇ. “ಪ್ರೇಮ ಬರಹ’ ಚಿತ್ರವನ್ನು ಅರ್ಜುನ್ ಸರ್ಜಾ ನಿರ್ಮಿಸಿ, ನಿರ್ದೇಶಿಸಿದ್ದಾರೆ. ಈ ಚಿತ್ರದ ಮೂಲಕ ಅವರ ಮಗಳು ಐಶ್ವರ್ಯಾ ಸರ್ಜಾ ನಾಯಕಿಯಾಗಿ ಎಂಟ್ರಿಕೊಡುತ್ತಿದ್ದಾರೆ. ಒಂದರ್ಥದಲ್ಲಿ ಈ ಚಿತ್ರದಲ್ಲಿ ಸಂಪೂರ್ಣ ಸರ್ಜಾ ಕುಟುಂಬವೇ ತೊಡಗಿಕೊಂಡಿದೆ ಎಂದರೆ ತಪ್ಪಲ್ಲ.
ಚಿತ್ರದ ಹಾಡೊಂದರಲ್ಲಿ ದರ್ಶನ್, ಚಿರಂಜೀವಿ ಸರ್ಜಾ, ಧ್ರುವ ಸರ್ಜಾ ಸೇರಿದಂತೆ ಅನೇಕರು ಕಾಣಿಸಿಕೊಂಡಿದ್ದಾರೆ. ಈಗ ಚಿರಂಜೀವಿ ಸರ್ಜಾ ನಾಯಕರಾಗಿರುವ ಹಾಗೂ ಹಾಡೊಂದರಲ್ಲಿ ಕಾಣಿಸಿಕೊಂಡಿರುವ ಎರಡೂ ಚಿತ್ರಗಳು ಒಂದೇ ದಿನ ತೆರೆಕಾಣುತ್ತಿವೆ. ಹಾಗೆ ನೋಡಿದರೆ ಚಿರಂಜೀವಿ ಸರ್ಜಾಗೆ ಎರಡೂ ಸಿನಿಮಾಗಳು ಮುಖ್ಯವೇ. “ಸಂಹಾರ’ವನ್ನು ಜನ ಇಷ್ಟಪಟ್ಟರೆ ಅದು ಚಿರಂಜೀವಿ ಕೆರಿಯರ್‌ಗೆ ಪ್ಲಸ್ ಆಗುತ್ತದೆ.
“ಪ್ರೇಮ ಬರಹ’ ಗೆದ್ದರೆ ತಮ್ಮ ಕುಟುಂಬದ ಮತ್ತೂಬ್ಬರು ಚಿತ್ರರಂಗದಲ್ಲಿ ಬೆಳೆದಂತಾಗುತ್ತದೆ. ಹಾಗಾಗಿ, ಚಿರಂಜೀವಿ ಸರ್ಜಾ ಎರಡು ಸಿನಿಮಾಗಳ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ. “ಸಂಹಾರ’ ಚಿತ್ರದಲ್ಲಿ ಚಿರಂಜೀವಿ ಸರ್ಜಾಗೆ ಹರಿಪ್ರಿಯಾ, ಕಾವ್ಯಾ ಶೆಟ್ಟಿ ನಾಯಕಿಯರಾಗಿ ನಟಿಸಿದ್ದಾರೆ. ಅರ್ಜುನ್ ಸರ್ಜಾ ನಿರ್ದೇಶನದ “ಪ್ರೇಮಬರಹ’ದಲ್ಲಿ ಐಶ್ವರ್ಯಾ ಸರ್ಜಾ ಹಾಗೂ ಚಂದನ್ ನಾಯಕ-ನಾಯಕಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
OTT Release Date: ಸೂಪರ್ ಹಿಟ್ ʼಭೈರತಿ ರಣಗಲ್ʼ ಓಟಿಟಿ ರಿಲೀಸ್‌ಗೆ ಡೇಟ್ ಫಿಕ್ಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.