ಸಂಯುಕ್ತಾ ಹೆಗ್ಡೆ “ಕಿರಿಕ್’ ಮಾತು
Team Udayavani, Feb 26, 2020, 7:03 AM IST
“ಕಿರಿಕ್ ಪಾರ್ಟಿ’ ಚಿತ್ರದಲ್ಲಿ ನಾಯಕ ನಟಿಯರಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ಇಬ್ಬರು ನಟಿ ಮಣಿಯರು ಅಂದ್ರೆ ರಶ್ಮಿಕಾ ಮಂದಣ್ಣ ಮತ್ತು ಸಂಯುಕ್ತಾ ಹೆಗ್ಡೆ. ಅದೇನೊ ಗೊತ್ತಿಲ್ಲ, “ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಸಿನಿಜರ್ನಿ ಶುರು ಮಾಡಿದ ಈ ಇಬ್ಬರೂ ನಟಿಯರು ಕೂಡ ಸಿನಿಮಾಕ್ಕಿಂತ ಹೆಚ್ಚಾಗಿ ಆಗಾಗ್ಗೆ ತಮ್ಮ “ಕಿರಿಕ್’ ವಿಷಯಗಳಿಗೇ ಹೆಚ್ಚು ಸುದ್ದಿಯಾಗುತ್ತಿರುತ್ತಾರೆ “ಕಿರಿಕ್ ಪಾರ್ಟಿ’ ಚಿತ್ರದ ನಂತರ ಸಂಯುಕ್ತಾ ಹೆಗ್ಡೆ “ಕಾಲೇಜ್ ಕುಮಾರ್’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದು ನಿಮಗೆ ಗೊತ್ತಿರಬಹುದು.
ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕರೂ, ಸಂಯುಕ್ತಾ ಮೈಮೇಲೆ ಎಳೆದುಕೊಂಡ ವಿವಾದದಿಂದಾಗಿಯೇ ಸಿನಿಮಾ ಹೆಚ್ಚು ಸುದ್ದಿಯಾಯಿತು. ಆ ಬಳಿಕ ಕನ್ನಡಕ್ಕಿಂತ ಹೆಚ್ಚಾಗಿ ತಮಿಳು, ತೆಲುಗು, ಹಿಂದಿ ಚಿತ್ರರಂಗ ಅಂತ ಓಡಾಡಿಕೊಂಡಿದ್ದ ಸಂಯುಕ್ತಾ ಈಗ “ತುರ್ತು ನಿರ್ಗಮನ’ ಚಿತ್ರದ ಮೂಲಕ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ಇತ್ತೀಚೆಗೆ ಈ ಚಿತ್ರದ ಪ್ರಚಾರ ಕಾರ್ಯದ ವೇಳೆ ಮಾಧ್ಯಮಗಳ ಜೊತೆ ಮಾತಿಗೆ ಸಿಕ್ಕ ಸಂಯುಕ್ತಾ ಹೆಗ್ಡೆ, ಇತ್ತೀಚಿನ ತಮಗೆ ಸಿಗುತ್ತಿರುವ ಆಫರ್ ಮತ್ತಿತರ ವಿಷಯಗಳ ಬಗ್ಗೆ ಒಂದಷ್ಟು ಮಾತನಾಡಿದ್ದಾರೆ.
ಸಂಯುಕ್ತಾ ಹೆಗ್ಡೆ ಚಿತ್ರತಂಡಕ್ಕೆ ಸರಿಯಾಗಿ ಸಹಕಾರ ನೀಡುವುದಿಲ್ಲ. ಪ್ರಚಾರಕ್ಕೆ ಬರೋಲ್ಲ ಈ ರೀತಿಯ ಮಾತುಗಳು ಅವರ ಬಗ್ಗೆ ಆಗಾಗ್ಗೆ ಕೇಳಿಬರುತ್ತಲೇ ಇರುತ್ತದೆ. ಹೀಗಾಗಿ ಅವರಿಗೆ ಕನ್ನಡದಿಂದ ಯಾವುದೇ ಅವಕಾಶಗಳು ಸಿಗುತ್ತಿಲ್ಲ ಎಂಬ ಮಾತುಗಳು ಚಿತ್ರರಂಗದಲ್ಲಿ ಕೇಳಿಬರುತ್ತದೆ. ಆದರೆ ಈ ಬಗ್ಗೆ ಸಂಯುಕ್ತಾ ಹೇಳ್ಳೋದೆ ಬೇರೆ. ಮೊದಲಿಗೆ ಇತ್ತೀಚೆಗೆ ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಳ್ಳದಿರುವ ಬಗ್ಗೆ ಮಾತನಾಡಿದ ಸಂಯುಕ್ತಾ, “ತುಂಬ ಜನ ನನಗೆ ಕನ್ನಡದ ಸಿನಿಮಾಗಳ ಅವಕಾಶಗಳೇ ಇಲ್ಲ ಅಂದುಕೊಂಡಿದ್ದಾರೆ.
ಆದ್ರೆ ಹಾಗೇನೂ ಇಲ್ಲ. ಕನ್ನಡ ಸಿನಿಮಾಗಳಲ್ಲಿ ನನಗೆ ಸಾಕಷ್ಟು ಅವಕಾಗಳು ಬರುತ್ತಿವೆ. ಆದರೆ, ಒಳ್ಳೆಯ ಅವಕಾಶಗಳು ಬರುತ್ತಿಲ್ಲ ಅಷ್ಟೇ. ಒಳ್ಳೆಯ ಸ್ಟೋರಿ, ಸಬೆjಕ್ಟ್ ಇರುವ ಸಿನಿಮಾಗಳು ಬರುತ್ತಿಲ್ಲ. ಅಂಥ ಸಿನಿಮಾಗಳು ಸಿಕ್ಕರೆ ಖಂಡಿತ ನಟಿಸುತ್ತೇನೆ. ನಾನು ಕೂಡ ಒಳ್ಳೆಯ ಸಿನಿಮಾಗಾಗಿ ಕಾಯುತ್ತಿದ್ದೇನೆ. ಇಲ್ಲಿ ಒಳ್ಳೆಯ ಸಿನಿಮಾ ಸಿಗದಿದ್ದಾಗ ನಾನು ಬೇರೆ ಭಾಷೆಯಲ್ಲಿ ಸಿನಿಮಾ ಮಾಡ್ತಿದ್ದೇನೆ’ ಎಂದಿದ್ದಾರೆ. ಇನ್ನು ಕನ್ನಡ ಚಿತ್ರರಂಗದಲ್ಲಿ ಕನ್ನಡದ ನಾಯಕಿಯರಿಗೆ ಒಳ್ಳೆಯ ಅವಕಾಶಗಳು ಸಿಗುತ್ತಿಲ್ಲ ಅನ್ನೋದು ಸಂಯುಕ್ತಾ ಅವರ ಅಭಿಪ್ರಾಯ.
“ಕನ್ನಡದ ಹುಡುಗಿಯರಿಗೆ ಇಲ್ಲಿನ ಚಿತ್ರರಂಗದಲ್ಲಿ ಏಕೆ ಅವಕಾಶ ನೀಡುತ್ತಿಲ್ಲ ಎಂದು ನಟರಿಗೆ, ನಿರ್ದೇಶಕರಿಗೆ ಯಾರೂ ಕೇಳುವುದಿಲ್ಲ. ನನಗೆ ಮಾತ್ರ ಕನ್ನಡ ಸಿನಿಮಾ ಮಾಡುವುದಿಲ್ಲ ಎಂದು ಎಲ್ಲರೂ ಕೇಳುತ್ತಾರೆ. ಇಲ್ಲಿ ಒಳ್ಳೆಯ ಅವಕಾಶಗಳು ಸಿಗದಿದ್ದಾಗ ಬೇರೆ ಕಡೆ ಹೋಗುತ್ತಾರೆ. ಅದರಲ್ಲೇನು ತಪ್ಪು?’ ಅನ್ನೋದು ಸಂಯುಕ್ತಾ ಪ್ರಶ್ನೆ. “ನಾನು 18 ವರ್ಷಕ್ಕೆ ಸಿನಿಮಾ ಇಂಡಸ್ಟ್ರಿಗೆ ಬಂದೆ. ಓದು ಮುಗಿಯುವ ಮುನ್ನ ಸಿನಿಮಾಗಳನ್ನು ಶುರು ಮಾಡಿದ್ದೇನೆ. ಆದರೆ ನನ್ನ ವ್ಯಕ್ತಿತ್ವ, ನೇರ ನುಡಿ ಎಲ್ಲರಿಗೂ ಇಷ್ಟ ಆಗಲಿಲ್ಲ. ಎಲ್ಲರಿಗೂ ಎಲ್ಲರೂ ಇಷ್ಟ ಆಗುವುದಿಲ್ಲ.
ಹಾಗಂತ ನಾನು ನನ್ನ ವ್ಯಕ್ತಿತ್ವ ಬದಲಾಯಿಸಿಕೊಳ್ಳಲಾರೆ. ನಾನು ಇಲ್ಲಿಯವರೆಗೆ ಆರು ಸಿನಿಮಾ ಮಾಡಿದ್ದೇನೆ. ಆದ್ರೆ ಅದರಲ್ಲಿ ಒಂದೇ ಸಿನಿಮಾದಲ್ಲಿ, ನನಗನಿಸಿದ್ದನ್ನು ಹೇಳಿದೆ ಎಂಬ ಕಾರಣಕ್ಕೆ ಮಾತ್ರ ವಿವಾದ ಆಗಿದೆ. ಆದ್ರೆ ಈಗಲೂ ಕೆಲವರೂ ಅದನ್ನೇ ಇಟ್ಟುಕೊಂಡು ಮಾತನಾಡುತ್ತಾರೆ. ಹಾಗಂತ ಇದರ ಬಗ್ಗೆ ನನಗೇನೂ ಬೇಜಾರಿಲ್ಲ’ ಎನ್ನುತ್ತಾರೆ ಸಂಯುಕ್ತಾ. ಅಂದಹಾಗೆ, ಸಂಯುಕ್ತಾ ಹೆಗ್ಡೆ ಅಭಿನಯದ “ತುರ್ತು ನಿರ್ಗಮನ’ ತೆರೆಗೆ ಬರೋದಕ್ಕೆ ಸಿದ್ಧವಾಗಿದ್ದು, ಚಿತ್ರದಲ್ಲಿ ಸಂಯುಕ್ತಾ ಪಾತ್ರ ಹೇಗಿರಲಿದೆ ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ.
ಕನ್ನಡದ ಹುಡುಗಿಯರಿಗೆ ಇಲ್ಲಿನ ಚಿತ್ರರಂಗದಲ್ಲಿ ಏಕೆ ಅವಕಾಶ ನೀಡುತ್ತಿಲ್ಲ. ಇಲ್ಲಿ ಒಳ್ಳೆಯ ಅವಕಾಶಗಳು ಸಿಗದಿದ್ದಾಗ ಬೇರೆ ಕಡೆ ಹೋಗುತ್ತಾರೆ. ಅದರಲ್ಲೇನು ತಪ್ಪು?’
-ಸಂಯುಕ್ತಾ ಹೆಗ್ಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.