ನಟಿ ಸಂಯುಕ್ತಾ ಹೊರನಾಡು ಕೈಗೆ ಸುತ್ತಿಕೊಂಡ ಹಾವು, ಬೆಚ್ಚಿಬಿದ್ದ ಅಭಿಮಾನಿಗಳು !
Team Udayavani, Jul 16, 2020, 12:51 PM IST
ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಸಂಯುಕ್ತಾ ಹೊರನಾಡು ‘ವಿಶ್ವ ಹಾವುಗಳ ದಿನ’ದಂದು(world snake day-july16) ಅಭಿಮಾನಿಗಳಿಗೆ ಅಚ್ಚರಿಯ ಜೊತೆಗೆ ಅಘಾತವನ್ನು ನೀಡಿದ್ದಾರೆ.
ಹೌದು, ಭಾರೀ ಗಾತ್ರದ ಹಾವೊಂದು ಕೈಗೆ ಸುತ್ತಿಕೊಂಡಿರುವ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದು, ಸಂಯುಕ್ತಾ ಅವರ ಎದೆಗಾರಿಕೆ ಕಂಡು ಅಭಿಮಾನಿಗಳು ಭೇಷ್ ಎಂದಿದ್ದಾರೆ. 40 ಸೆಕೆಂಡುಗಳ ಈ ವಿಡಿಯೋದಲ್ಲಿ ಕಪ್ಪು ಮತ್ತು ಚಿನ್ನದ ಕಲರಿನ ಚುಕ್ಕೆ ಹೊಂದಿರುವ ಹಾವನ್ನು ಹಿಡಿದುಕೊಂಡಿದ್ದು, ಹ್ಯಾಪಿ ವರ್ಲ್ಡ್ ಸ್ನೇಕ್ ಡೇ ಎಂದು ಬರೆದುಕೊಂಡಿದ್ದಾರೆ.
Happy #WorldSnakeDay 🙂 pic.twitter.com/QXnZzmnOVg
— Samyukta Hornad (@samyuktahornad) July 16, 2020
ಅಭಿಮಾನಿಯೊಬ್ಬರು ಇದು ನಿಮ್ಮ ಸಾಕು ಪ್ರಾಣಿಯೇ ಎಂದು ಪ್ರಶ್ನಿಸಿದ್ದು, ಇದಕ್ಕೆ ಸಂಯುಕ್ತಾ’ ನನ್ನ ಸ್ನೇಹಿತರೊಬ್ಬರು ರಕ್ಷಿಸಿದ ಹಾವು ಇದಾಗಿದ್ದು, ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ ಎಂದಿದ್ದಾರೆ.
ಇಂದು ವಿಶ್ವ ಹಾವು ದಿನ. ಹಾವಿನ ಬಗ್ಗೆ ಜನರಲ್ಲಿರುವ ಅನಗತ್ಯ ಭಯವನ್ನು ಹೋಗಲಾಡಿಸಿ, ಹಾವುಗಳ ಮಹತ್ವ, ಅದರ ವಿವಿಧ ತಳಿಗಳ ಉಳಿವಿಗಾಗಿ ಮಾಡಬೇಕಾದ ಪ್ರಯತ್ನಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ಜುಲೈ 16ರಂದು ಭಾರತ ಸೇರಿದಂತೆ ವಿಶ್ವದಾದ್ಯಂತ ವಿಶ್ವ ಹಾವುಗಳ ದಿನ ಆಚರಿಸಲಾಗುತ್ತದೆ. ಜಗತ್ತಿನಲ್ಲಿ 3,500ಕ್ಕೂ ಹೆಚ್ಚು ಜಾತಿಯ ಹಾವುಗಳಿದ್ದು ಅವುಗಳ ಪೈಕಿ 600 ಹಾವುಗಳು ವಿಷಕಾರಿಯಾಗಿವೆ. ಈ 600 ವಿಷಕಾರಿ ಹಾವುಗಳ ಪೈಕಿ 330 ವಿಷಕಾರಿ ಹಾವುಗಳು ಭಾರತದಲ್ಲೇ ಇವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.