ಸನಾದಿ ಅಪ್ಪಣ್ಣರ ಗಿರಿಮೊಮ್ಮಗಳು ಸಿನಿಮಾಗೆ

Team Udayavani, Jun 14, 2018, 5:20 PM IST

giri-mommagalu.jpg

ಕೃಷ್ಣಮೂರ್ತಿ ಪುರಾಣಿಕರ ಕಾದಂಬರಿಯನ್ನಾಧರಿಸಿ ಡಾ. ರಾಜಕುಮಾರ್‌  ಅಭಿನಯದಲ್ಲಿ “ಸನಾದಿ ಅಪ್ಪಣ್ಣ’ ಎಂಬ ಚಿತ್ರವು ತೆರೆಗೆ ಬಂದಿದ್ದು ಗೊತ್ತೇ ಇದೆ. ಕೃಷ್ಣಮೂರ್ತಿ ಪುರಾಣಿಕರು ತಮ್ಮ ಮನೆಯ ಎದುರಿಗಿದ್ದ ಸನಾದಿ ಅಪ್ಪಣ್ಣರ ವ್ಯಕ್ತಿತ್ವ ಕುರಿತು ಕಾದಂಬರಿ ಬರೆದಿದ್ದರು. ಅದನ್ನಾಧರಿಸಿ ಮಾಡಿದ ಚಿತ್ರವೂ ಸಾಕಷ್ಟು ಜನಪ್ರಿಯವಾಗಿತ್ತು. ಹೊಸ ಸುದ್ದಿಯೇನೆಂದರೆ, ಈಗ ಚಿತ್ರರಂಗಕ್ಕೆ, ಸನಾದಿ ಅಪ್ಪಣ್ಣ
ಅವರ ಗಿರಿ ಮೊಮ್ಮಗಳ ಎಂಟ್ರಿಯಾಗಿದೆ.

ಅಂದಹಾಗೆ, ಆ ಹುಡುಗಿಯ ಹೆಸರು ಕೀರ್ತಿ ಕಲ್ಕೆರೆ. ಹುಬ್ಬಳ್ಳಿಯ ಕೀರ್ತಿ ಕಲ್ಕೆರೆ, ಸನಾದಿ ಅಪ್ಪಣ್ಣ ಅವರ ಗಿರಿ ಮೊಮ್ಮಗಳು ಎಂಬುದು ವಿಶೇಷ. ಈಕೆ ನಟಿಸುತ್ತಿರುವ ಚಿತ್ರದ ಹೆಸರು “ರತ್ನಮಹಲ್‌’. ಕೀರ್ತಿ ಕಲ್ಕೆರೆ ಈಗಷ್ಟೇ ಪದವಿ ಓದುತ್ತಿದ್ದಾಳೆ. ಇವರ ತಾಯಿ ಅಶ್ವಿ‌ನಿ ಅವರಿಗೆ ಸನಾದಿ ಅಪ್ಪಣ್ಣ ಮುತ್ತಾತ. ಅಶ್ವಿ‌ನಿ ಅವರ ತಂದೆಗೆ ತಾತ.

ಅಲ್ಲಿಗೆ ಸನಾದಿ ಅಪ್ಪಣ್ಣ ಅವರ ಕುಟುಂಬದ ಕುಡಿಯಾಗಿರುವ ಕೀರ್ತಿ ಇದೇ ಮೊದಲ ಬಾರಿಗೆ ಚಿತ್ರರಂಗಕ್ಕೆ ಎಂಟ್ರಿಯಾದಂತಾಗಿದೆ. ಸನಾದಿ ಅಪ್ಪಣ್ಣ ಅವರದು ಕಲಾ ಕುಟುಂಬ. ಆದರೆ, ಇದುವರೆಗೆ ಯಾರೊಬ್ಬರೂ ಚಿತ್ರರಂಗಕ್ಕೆ ಬಂದಿಲ್ಲ. ಈಗ ಸಿಕ್ಕ ಅವಕಾಶವನ್ನು ಬಳಸಿಕೊಂಡ ಖುಷಿ ಕೀರ್ತಿ ಕಲ್ಕೆರೆ ಅವರದು.

ಅಂದಹಾಗೆ, “ರತ್ನಮಹಲ್‌’ ಚಿತ್ರಕ್ಕೆ ರವಿ ಕಡೂರು ನಿರ್ದೇಶಕರು. ಚಿತ್ರದ ಕಥೆ ಮತ್ತು ಪಾತ್ರಕ್ಕೆ ಉತ್ತರ ಕರ್ನಾಟಕದ ಹುಡುಗಿ ಬೇಕಾಗಿದ್ದರಿಂದ ನಿರ್ದೇಶಕ ರವಿ ಕಡೂರು, ಫೇಸ್‌ಬುಕ್‌, ಇನ್‌ಸ್ಟಗ್ರಾಮ್‌ನಲ್ಲಿ ಒಂದು ಸ್ಟೇಟಸ್‌ ಹಾಕಿದಾಗ, ಅಲ್ಲಿ ಸಿಕ್ಕವರೇ ಈ ಕೀರ್ತಿ ಕಲ್ಕೆರೆ. ಕೊನೆಗೆ ಹುಬ್ಬಳ್ಳಿಗೆ ಹೋದಾಗಲಷ್ಟೇ ಕೀರ್ತಿ, ಅಪ್ಪಣ್ಣ ಅವರ ಕುಟುಂಬದ ಕುಡಿ ಅನ್ನೋದು ಗೊತ್ತಾಗಿದೆ. ಕೊನೆಗೆ ನಿರ್ದೇಶಕ ರವಿ ಕಡೂರು, ಕಥೆ, ಪಾತ್ರದ ವಿವರಣೆ ಕೊಟ್ಟಾಗ, ಕೀರ್ತಿ ಮನೆಯವರು ಒಪ್ಪಿಕೊಂಡಿದ್ದಾರೆ. ನಟನೆಗೆ ವರ್ಕ್‌ಶಾಪ್‌ ಮಾಡಿಸಿದ ನಿರ್ದೇಶಕರು ಕ್ಯಾಮೆರಾ
ಮುಂದೆ ನಿಲ್ಲಿಸಿದ್ದಾರೆ. ಈಗಾಗಲೇ ಶೇ. 25 ರಷ್ಟು ಚಿತ್ರೀಕರಣ ನಡೆದಿದೆ.

ಚಿತ್ರದಲ್ಲಿ ಮುಂದಿನ ಜನರೇಷನ್‌ ಕಥೆ ಇದೆ. ಈಗಿನ ಟ್ರೆಂಡ್‌ಗಿಂತಲೂ ಮುಂದುವರೆದ ಜಗತ್ತು ಹೇಗೆಲ್ಲಾ ಇರುತ್ತೆ ಎಂಬುದನ್ನು ತೋರಿಸುವ ಪ್ರಯತ್ನ ಮಾಡುತ್ತಿರುವುದಾಗಿ ಹೇಳುವ ನಿರ್ದೇಶಕರು, ಸುಮಾರು 40 ದಿನಗಳ ಕಾಲ ಬೆಂಗಳೂರು, ಭದ್ರಾವತಿ, ಶಿವಮೊಗ್ಗ, ಚಿಕ್ಕಮಗಳೂರು, ಕಳಸ, ಕುದುರೆಮುಖ ಇತರೆಡೆ ಚಿತ್ರೀಕರಿಸುವುದಾಗಿ ಹೇಳುತ್ತಾರೆ. ಚಿತ್ರಕ್ಕೆ ಮಿಥುನ್‌ ವಿಜಯ್‌ ಭಾಸ್ಕರ್‌ ನಾಯಕ. ಧರ್ಮತೇಜ ನಿರ್ಮಾಪಕರು. ಇನ್ನು, ಚಿತ್ರಕ್ಕೆ ವಿ.ಮನೋಹರ್‌ ನಾಲ್ಕು ಹಾಡುಗಳಿಗೆ ಸಂಗೀತ ನೀಡಿದರೆ, ಸತೀಶ್‌ ರಾಜೇಂದ್ರನ್‌ ಛಾಯಾಗ್ರಹಣವಿದೆ. ಈಗಾಗಲೇ ಯೂಟ್ಯೂಬ್‌ ಚಿತ್ರದ ಮೋಷನ್‌ ಪೋಸ್ಟರ್‌ ಬಿಡುಗಡೆ ಆಗಿದೆ.

ಟಾಪ್ ನ್ಯೂಸ್

Naxal-encounter-Vikram-1

Naxal Package: “ಮೊದಲೇ ಪ್ಯಾಕೇಜ್‌ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ

Birth-Certi

Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15

Sathish Ninasam: ಅಶೋಕನಿಗೆ ನೀನಾಸಂ ಸತೀಶ್‌ ಸಾಥ್‌

Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ

Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್‌ ಬಗ್ಗೆ ರಮ್ಯಾ ಮಾತು

ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್‌ ಬಗ್ಗೆ ರಮ್ಯಾ ಮಾತು

Toxic Movie: ಫ್ಯಾನ್ಸ್‌ ನಶೆಯೇರಿಸಿದ ಯಶ್‌; ಹಾಲಿವುಡ್‌ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!

Toxic Movie: ಫ್ಯಾನ್ಸ್‌ ನಶೆಯೇರಿಸಿದ ಯಶ್‌; ಹಾಲಿವುಡ್‌ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Naxal-encounter-Vikram-1

Naxal Package: “ಮೊದಲೇ ಪ್ಯಾಕೇಜ್‌ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ

Birth-Certi

Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.