ಸಂಚಾರಿಯ 6ನೇ ಮೈಲಿ ಕನಸು
Team Udayavani, Jun 26, 2018, 11:14 AM IST
ಸಂಚಾರಿ ವಿಜಯ್ ಪ್ರತಿ ಸಿನಿಮಾಗಳ ಬಗ್ಗೆಯೂ ಸಿಕ್ಕಾಪಟ್ಟೆ ನಿರೀಕ್ಷೆಯಿಂದ ಎದುರು ನೋಡುತ್ತಾರೆ. ಅದಕ್ಕೆ ಸರಿಯಾಗಿ ತಮ್ಮ ಪಾತ್ರಕ್ಕೂ ನ್ಯಾಯ ಒದಗಿಸುವಲ್ಲಿ ಅವರು ಯಾವತ್ತೂ ಹಿಂದೆ ಬಿದ್ದಿಲ್ಲ. ಒಂದೆರಡು ತಿಂಗಳ ಹಿಂದೆ ಬಿಡುಗಡೆಯಾದ ವಿಜಯ್ ಅವರ “ಕೃಷ್ಣ ತುಳಸಿ’ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾದರೂ ಚಿತ್ರ ಮಾತ್ರ ಓಡಲಿಲ್ಲ. ಈಗ ಮತ್ತೆ ಸಂಚಾರಿ ವಿಜಯ್ ನಿರೀಕ್ಷೆ ಕಂಗಳೊಂದಿಗೆ ಎದುರು ನೋಡುತ್ತಿದ್ದಾರೆ.
ಅದಕ್ಕೆ ಕಾರಣ ಕಾರಣ “6ನೇ ಮೈಲಿ’. ಹೌದು, ವಿಜಯ್ “6ನೇ ಮೈಲಿ’ ಎಂಬ ಸಿನಿಮಾ ಮಾಡಿರುವ ಬಗ್ಗೆ ನಿಮಗೆ ಗೊತ್ತಿರುಬಹುದು. ಈಗ ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು ಜುಲೈ 6 ರಂದು ತೆರೆಕಾಣುತ್ತಿದೆ. ಇದೊಂದು ಥ್ರಿಲ್ಲರ್ ಹಿನ್ನೆಲೆಯಲ್ಲಿ ಸಾಗುವ ಸಿನಿಮಾವಾಗಿದ್ದು, ವಿಜಯ್ ಅವರ ಪಾತ್ರ ಕೂಡಾ ಭಿನ್ನವಾಗಿದೆಯಂತೆ. “6ನೇ ಮೈಲಿ’ ಚಿತ್ರವನ್ನು ಸೀನಿ ನಿರ್ದೇಶಿಸಿದ್ದು, ಡಾ ಶೈಲೇಶ್ ಕುಮಾರ್ ನಿರ್ಮಿಸಿದ್ದಾರೆ.
ಟ್ರೆಕ್ಕಿಂಗ್‌ಗೆಂದು ಹೋದಾಗ ಏನೆಲ್ಲಾ ಸಮಸ್ಯೆಗಳು ಎದುರಾಗುತ್ತದೆ ಎಂಬುದನ್ನು ನಿರ್ದೇಶಕ ಸೀನಿ ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರಂತೆ. ಈ ಚಿತ್ರದಲ್ಲಿ ನಕ್ಸಲ್ ಹಿನ್ನೆಲೆಯೂ ಇದ್ದು, ಟ್ರೆಕ್ಕಿಂಗ್‌ಗೆಂದು ಹೋದವರು ಅನುಭವಿಸುವ ಕಷ್ಟಗಳನ್ನು ಚಿತ್ರದಲ್ಲಿ ವಿವರಿಸಲಾಗಿದೆಯಂತೆ. ಈ ಹಿಂದೆ ಚಿತ್ರದ ಟೈಟಲ್ ಟ್ರ್ಯಾಕ್ ಅನ್ನು ಮೆಚ್ಚಿ ಸುದೀಪ್ ಟ್ವೀಟ್ ಮಾಡಿದ್ದರು.
ಚಿತ್ರದ ಟೈಟಲ್ ಲಿರಿಕಲ್ ವಿಡಿಯೋ ಕೇಳಿ ಇಷ್ಟಪಟ್ಟಿರುವ ಸುದೀಪ್, “ಸೂಪರ್ ಸ್ಟ್ರಾಂಗ್ ಮ್ಯೂಸಿಕ್’ ಎಂದು ಟ್ವೀಟ್ ಮಾಡಿ, ಚಿತ್ರತಂಡದ ಬೆನ್ನು ತಟ್ಟಿದ್ದರು. ಇದು ಕೂಡಾ ಚಿತ್ರತಂಡದ ವಿಶ್ವಾಸವನ್ನು ಹೆಚ್ಚಿಸಿತು. ಅಂದಹಾಗೆ, ಚಿತ್ರದ ಆಡಿಯೋ ಪುನೀತ್ ರಾಜಕುಮಾರ್ ಅವರ “ಪಿಆರ್‌ಕೆ’ ಮೂಲಕ ಬಿಡುಗಡೆಯಾಗಿದೆ. ಹಾಡು ಕೇಳಿ ಇಷ್ಟಪಟ್ಟ ಸಂಸ್ಥೆ ಆಡಿಯೋ ಹಕ್ಕು ಖರೀದಿಸಿದೆ.
ಚಿತ್ರಕ್ಕೆ ಪರಮೇಶ್ ಪಿ.ಎಂ ಅವರ ಛಾಯಾಗ್ರಹ, ಸಾಯಿಕಿರಣ್ ಸಂಗೀತ ನಿರ್ದೇಶನ, ಮಹೇಶ್ ರೆಡ್ಡಿ ಸಂಕಲನ, ಡಿಫರೆಂಟ್ ಡ್ಯಾನಿ, ವಿಕ್ರಂ ಮೋರ್ ಸಾಹಸ ನಿರ್ದೇಶನ ಹಾಗೂ ರವಿ ಸಂತೆಹೈಕ್ಲು ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಸಂಚಾರಿ ವಿಜಯ್, ಆರ್.ಜೆ.ನೇತ್ರ, ರಘು ಪಾಂಡೇಶ್ವರ್, ಕೃಷ್ಣ ಹೆಬ್ಟಾಳೆ, ಡಾ. ಜಾಹ್ನವಿ, ಆರ್.ಜೆ.ಸುದ್ದೇಶ್, ಹೇಮಂತ್ ಸುಶೀಲ್, ಮೈತ್ರಿ ಜಗ್ಗಿ ಮುಂತಾದವರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.