ಮಲಯಾಳಂ ಕಡೆ ವಿಜಯ್‌ ಸಂಚಾರ


Team Udayavani, Apr 19, 2018, 6:10 PM IST

sanchari-vijay.jpg

ಸಂಚಾರಿ ವಿಜಯ್‌ ಈಗ ಮಲಯಾಳಂ ಕಡೆ ಮುಖ ಮಾಡಿದ್ದಾರೆ. ಕನ್ನಡದಲ್ಲೇ ಭರಪೂರ ಅವಕಾಶಗಳಿದ್ದಾಗ, ಅತ್ತ ಹೋಗಿದ್ದೇಕೆ ಎಂಬ ಪ್ರಶ್ನೆ ಎದುರಾಗುವುದು ಸಹಜ. ಸಂಚಾರಿ ವಿಜಯ್‌ಗೂ ಪ್ರಯೋಗಾತ್ಮಕ ಸಿನಿಮಾಗಳಿಗೂ ಅವಿನಾಭಾವ ಸಂಬಂಧ. ಈ ವರ್ಷ ಅವರದೇ ಒಂದು ಚಿತ್ರೋತ್ಸವ ನಡೆಸುವಷ್ಟು ಚಿತ್ರಗಳು ಬಿಡುಗಡೆಗೆ ಸಿದ್ಧಗೊಂಡಿವೆ. ಹೀಗಿರುವಾಗ, ಅವರೀಗ ಸದ್ದಿಲ್ಲದೆಯೇ ಮಲಯಾಳಂನ “ಥಿಯೇಟರ್‌’ ಹೆಸರಿನ ಚಿತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಮೊದಲ ಹಂತ ಮುಗಿಸಿಕೊಂಡು ಬಂದಿರುವ ಸಂಚಾರಿ ವಿಜಯ್‌, ಇನ್ನೊಂದು ಹಂತದ ಚಿತ್ರೀಕರಣಕ್ಕೆ ಅಣಿಯಾಗುತ್ತಿದ್ದಾರೆ.

ಸರುಣ್‌ ಕುಮಾರ್‌ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಮತ್ತೂಂದು ಪ್ರಯೋಗಾತ್ಮಕ ಚಿತ್ರವಿದು. ಮಧು ಹಂಬಟ್‌ ಚಿತ್ರಕ್ಕೆ ಛಾಯಗ್ರಹಣವಿದೆ. ತಾಂತ್ರಿಕ ವಿಚಾರದಲ್ಲಿ ಸಿನಿಮಾ ಅದ್ಧೂರಿಯಾಗಿದೆ ಎನ್ನುವ ವಿಜಯ್‌, “ಥಿಯೇಟರ್‌’ ಹೇಗೆ ವಿಭಿನ್ನ ಎಂಬುದನ್ನು ವಿವರಿಸುವುದು ಹೀಗೆ. “ಸ್ಟೇಜ್‌ ಮೇಲೆ ಮಾಡುವ ಯಥಾವತ್‌ ಪ್ರಯೋಗವನ್ನೇ, ಕ್ಯಾಮೆರಾ ಮುಂದೆ ನಿಂತು ಒಂದೇ ಜಾಗದಲ್ಲಿ ದೊಡ್ಡ ದೃಶ್ಯಗಳನ್ನು ಚಿತ್ರೀಕರಿಸಿರುವುದು ವಿಶೇಷ. ಅದೊಂದು ಮರೆಯದ ಅನುಭವ. ಆ ಚಿತ್ರದಲ್ಲಿ ನಾನು ಪೊಲೀಸ್‌ ತನಿಖಾಧಿಕಾರಿ ಪಾತ್ರ ಮಾಡುತ್ತಿದ್ದೇನೆ. ಗ್ಯಾಂಗ್‌ ರೇಪ್‌, ಚೀಟಿಂಗ್‌ ಮಾಡುವರನ್ನು ಹಿಡಿದು ಸದೆ ಬಡಿಯುವುದು, ಇದರೊಂದಿಗೆ ಸೂಕ್ಷ್ಮ ಅಂಶಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. 

ಆ ಪೊಲೀಸ್‌ ಅಧಿಕಾರಿ, ಒಮ್ಮೆ ವೇಶ್ಯೆಯೊಬ್ಬಳನ್ನು ಭೇಟಿ ಮಾಡಿ, ನೀನೇಕೆ ಈ ವೃತ್ತಿಯಲ್ಲಿದ್ದೀಯ ಅಂದಾಗ, ಆಕೆ, ತಂದೆಯಿಂದ ಅತ್ಯಾಚಾರಕ್ಕೊಳಗಾಗಿದ್ದು, ನಂತರ ಗಂಡನಿಂದಲೂ ಅತ್ಯಾಚಾರವಾಗಿದ್ದು, ಸ್ನೇಹಿತರಿಂದ ಸಹ ಅದೇ ತಪ್ಪು ನಡೆದಿದ್ದರಿಂದ, ಅದಕ್ಕೆ ಹೊಂದಿಕೊಂಡು, ವೇಶ್ಯೆಯಾದ ಬಗ್ಗೆ ವಿವರಿಸುತ್ತಾಳೆ. ಅದರ ಹಿಂದಿನ ಘಟನೆ ಬೆನ್ನತ್ತುವ ಪಾತ್ರವದು. ಇಡೀ ಸಿನಿಮಾ ಒಂದೇ ಬೀಚ್‌ನ ಜಾಗದಲ್ಲಿ ನಡೆದುಹೋಗುತ್ತದೆ’ ಎಂದು ಹೇಳುತ್ತಾರೆ ವಿಜಯ್‌.

“ಮಲಯಾಳಂ ನಟ ಮನೋಜ್‌ ಅವರು ಯಕ್ಷಗಾನ ಕಲೆಯಲ್ಲಿ ನಿಪುಣ. ಅಂತಹ ಕಲೆಯಲ್ಲಿರುವ ದೈವಕಲೆ ಬಗ್ಗೆ ಸಂಶೋಧನೆ ಮಾಡಲು ವಿದೇಶದಿಂದ ಒಬ್ಟಾಕೆ ಬರುತ್ತಾಳೆ. ಅವಳ ಮೇಲೆ ಆತ ಅತ್ಯಾಚಾರ ಎಸಗುತ್ತಾನೆ. ಅಲ್ಲಿಂದ ಶುರುವಾಗುವ ತನಿಖೆ ಚಿತ್ರದ ಕುತೂಹಲ ಕೆರಳಿಸುತ್ತೆ. ಇದುವರೆಗೆ ಹದಿನೆಂಟು ದಿನಗಳ ಕಾಲ ಚಿತ್ರೀಕರಣವಾಗಿದ್ದು, ಇನ್ನು ಏಳು ದಿನಗಳ ಚಿತ್ರೀಕರಣವಾದರೆ ಚಿತ್ರ ಮುಗಿಯಲಿದೆ. ಮಲಯಾಳಂನಲ್ಲೇ ಸಂಭಾಷಣೆ ಹೇಳಿದ್ದೇನೆ.

 ಅಲ್ಲಿನ ಸಹಾಯಕ ನಿರ್ದೇಶಕರು ಹೇಳಿಕೊಟ್ಟಿದ್ದರಿಂದ ಸುಲಭವಾಯಿತು. ನಾನೊಬ್ಬ ನಟ. ಕಲೆಗೆ ಭಾಷೆಯ ಗಡಿ ಇಲ್ಲ. ಹಾಗಾಗಿ ಮಲಯಾಳಂ ಚಿತ್ರದಲ್ಲಿ ನಟಿಸಿದ್ದೇನೆ. ಇಲ್ಲೇ ಬಿಜಿ ಇದ್ದೇನೆ. ಹಾಗೆ ನೋಡಿದರೆ, ಈ ವರ್ಷ ಆರು ಚಿತ್ರಗಳು ತೆರೆಗೆ ಬರಲು ಸಜ್ಜಾಗಿವೆ. ಈಗಾಗಲೇ “ವರ್ತಮಾನ’ ರಿಲೀಸ್‌ ಆಗಿದೆ. ಕೈಯಲ್ಲಿ “ಕೃಷ್ಣ ತುಳಸಿ’, “ಆರನೇ ಮೈಲಿ’, “ಪಾದರಸ’, “ಆಡುವ ಗೊಂಬೆ’, “ಆಟಕ್ಕುಂಟು ಲೆಕ್ಕಕ್ಕಿಲ್ಲ’ ಮತ್ತು “ಮೇಲೊಬ್ಬ ಮಾಯಾವಿ’ ಚಿತ್ರಗಳಿವೆ. ಎಲ್ಲವೂ ಈ ವರ್ಷ ತೆರೆಗೆ ಬಂದರೂ ಅಚ್ಚರಿ ಇಲ್ಲ ಎನ್ನುತ್ತಾರೆ ಅವರು.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

rai

BBK11: ಇಷ್ಟು ಬೇಗ ಬರುತ್ತೇನೆ ಅನ್ಕೊಂಡಿರಲಿಲ್ಲ- ಬಿಗ್ ಬಾಸ್ ಜರ್ನಿ ಮುಗಿಸಿದ ಅನುಷಾ

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಪಿಕ್ಸ್

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಫಿಕ್ಸ್

Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ

Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ

101

Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ

ರಿಲೀಸ್‌ ಅಖಾಡಕ್ಕೆ ಚಿಕ್ಕಣ್ಣನ ʼಫಾರೆಸ್ಟ್ʼ

Forest: ರಿಲೀಸ್‌ ಅಖಾಡಕ್ಕೆ ಚಿಕ್ಕಣ್ಣನ ʼಫಾರೆಸ್ಟ್ʼ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.