ಮದುವೆಯಾದ ಹೊಸತರಲ್ಲಿ ಜಗ್ಗೇಶ್ ಹುಟ್ಟುಹಬ್ಬಕ್ಕೆ ಪತ್ನಿ ನೀಡಿದ ಗಿಫ್ಟ್ ಯಾವುದು ಗೊತ್ತಾ ?
Team Udayavani, Mar 18, 2020, 1:46 PM IST
ಬೆಂಗಳೂರು: ನವರಸನಾಯಕ ಜಗ್ಗೇಶ್ ಮಂಗಳವಾರ ತಮ್ಮ ಹುಟ್ಟು ಹಬ್ಬವನ್ನು ಮಂತ್ರಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿ ಸರಳವಾಗಿ ಆಚರಿಸಿಕೊಂಡಿದ್ದಾರೆ. ಜಗ್ಗೇಶ್ ಬರ್ತ್ ಡೇ ಗೆ ಸಾಮಾಜಿಕ ಜಾಲತಾಣಗಳಿಂದಲೂ ಸೇರಿ ಅನೇಕ ಗಣ್ಯರು ಶುಭ ಕೋರಿದ್ದಾರೆ.
ಈ ಸಂಭ್ರಮದಲ್ಲಿ ಮದುವೆಯಾದ ಮೊದಲ ವರ್ಷ, ಪತ್ನಿ ಪರಿಮಳ ಹೇಗೆ ಶುಭಾಶಯ ತಿಳಿಸಿದರು ಎನ್ನುವ ರೀತಿಯನ್ನು ಅಭಿಮಾನಿಗಳೆದುರು ತೆರೆದಿಟ್ಟಿದ್ದಾರೆ. ಪೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದರಲ್ಲಿ ಪರಿಮಳ ಕೈಯಾರೆ ತಯಾರಿಸಿದ ಗ್ರೀಟಿಂಗ್ ಕಾರ್ಡ್ ನಲ್ಲಿ ‘I love you’ ಜೊತೆಗೆ ‘Jaggi never never change. I can Never bear it sweet’ ಎಂದು ಬರೆದ ಕಾರ್ಡ್ ತೋರಿಸಿದ್ದಾರೆ.
ಅಷ್ಟೇ ಅಲ್ಲದೇ ನಾನು ಮದುವೆಯಾದ ಮೊದಲ ವರ್ಷ ನನ್ನ ಆನಡಗು ಗ್ರಾಮದಲ್ಲಿ ಪರಿಮಳ ಕೈಯಾರೆ ಮಾಡಿ ಹರಸಿದ ಪ್ರಥಮ ಶುಭ ಹಾರೈಕೆಯ ಪ್ರೀತಿಯ ಓಲೆ. ಈ ಪ್ರೀತಿ ಸಂಕೇತಕ್ಕೆ 34 ವರ್ಷ ವಯಸ್ಸು, ಅಂದು ಅವಳೊಬ್ಬಳೇ ಹರಸಿದ್ದಳು. ಇಂದು ಅವಳ ಪ್ರೀತಿ ಕೋಟಿ ಆತ್ಮಗಳಲ್ಲಿ ವಿಸ್ತಾರ ಮಾಡಿಬಿಟ್ಟರು ರಾಯರು ! ಧನ್ಯೋಸ್ಮಿ ರಾಯರೇ ಇಷ್ಟು ಆತ್ಮಗಳ ಪ್ರೀತಿಸಲು ದೇಣಿಗೆ ನೀಡಿದ್ದಕ್ಕೆ ಎಂದು ಬರೆದುಕೊಂಡಿದ್ದಾರೆ.
ನಾನು ಮದುವೆಯಾದ ಮೊದಲ ವರ್ಷ
ಪರಿಮಳ ಕೈಯಾರೆ ನನ್ನ ಆನಡಗು ಗ್ರಾಮದಲ್ಲಿ ಮಾಡಿ ಹರಸಿದ ಪ್ರಥಮ ಶುಭಹಾರೈಕೆ ಪ್ರೀತಿಯ ಓಲೆ ..ಈ ಪ್ರೀತಿ ಸಂಕೇತಕ್ಕೆ 34ವರ್ಷ ವಯಸ್ಸು..
ಅಂದು ಅವಳೊಬ್ಬಳೆ ಹರಸಿದ್ದಳು ಇಂದು ಅವಳ ಪ್ರೀತಿ ಕೋಟಿ ಆತ್ಮಗಳಲ್ಲಿ ವಿಸ್ತಾರ
ಮಾಡಿಬಿಟ್ಟರು ರಾಯರು!ಧನ್ಯೋಸ್ಮಿ ರಾಯರೆ ಇಷ್ಟು ಆತ್ಮಗಳ ಪ್ರೀತಿಸಲು ದೇಣಿಗೆ ನೀಡಿದ್ದಕ್ಕೆ. pic.twitter.com/HKnwcwDvxF— ನವರಸನಾಯಕ ಜಗ್ಗೇಶ್ (@Jaggesh2) March 17, 2020
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.