ಕಲೆಕ್ಷನ್‌ ಹೇಳಿ ದೊಡ್ಡವರಾಗುವ,ನಂಬಿಸುವ ಅಗತ್ಯವಿಲ್ಲ; ಸುದೀಪ್‌


Team Udayavani, Mar 2, 2017, 4:38 PM IST

Hebbuli_new.jpg

ಹೆಬ್ಬುಲಿ ಚಿತ್ರದ ಕಲೆಕ್ಷನ್‌ ಸಖತ್‌ ಸೌಂಡ್‌ ಮಾಡುತ್ತಿದೆ. ಕನ್ನಡ ಚಿತ್ರರಂಗದಲ್ಲೇ “ಹೆಬ್ಬುಲಿ’ ಕಲೆಕ್ಷನ್‌ ವಿಷಯದಲ್ಲಿ ದಾಖಲೆ ಬರೆಯುತ್ತಿದೆ ಎನ್ನಲಾಗುತ್ತಿದೆ. ಇದು ಒಬ್ಬ ಹೀರೋಗೆ ಒಳ್ಳೆಯ ಮೈಲೇಜ್‌ ಕೊಡುವ, ಕೆರಿಯರ್‌ಗೆ ಮತ್ತಷ್ಟು ಪ್ಲಸ್‌ ಆಗುವ ವಿಷಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಕಲೆಕ್ಷನ್‌ ಬಗ್ಗೆ ಸುದೀಪ್‌ ಏನು ಹೇಳುತ್ತಾರೆಂಬ ಕುತೂಹಲ ಸಹಜವಾಗಿಯೇ ಇರುತ್ತದೆ. ಆದರೆ ಸುದೀಪ್‌ ಮಾತ್ರ ಕಲೆಕ್ಷನ್‌ಗಿಂತ ಜನರ ಪ್ರೀತಿ, ಅವರು ಸಿನಿಮಾವನ್ನು ಅಪ್ಪಿಕೊಂಡಿರುವ ರೀತಿಯಷ್ಟೇ ಮುಖ್ಯ ಎನ್ನುತ್ತಾರೆ.

“ನಾವು ಕಲೆಕ್ಷನ್‌ ಬಗ್ಗೆ ಹೇಳಿಕೊಳ್ಳುವ ಅಗತ್ಯ ಬರೋದು ಎರಡು ಸಮಯದಲ್ಲಿ ಅಷ್ಟೇ, ಅದು ನಾವು ಬೇರೆಯವರಿಗಿಂತ ದೊಡ್ಡವರು ಎಂದು ತೋರಿಸಿಕೊಳ್ಳಲು ಅಥವಾ ಮತ್ತೂಬ್ಬರನ್ನು ನಂಬಿಸಬೇಕಾದ ಸಂದರ್ಭ ಬಂದಾಗ ಮಾತ್ರ ಕಲೆಕ್ಷನ್‌ ಬಗ್ಗೆ ಹೇಳಬೇಕು. ಆದರೆ ನಮಗೆ ಆ ಅಗತ್ಯ
ಇಲ್ಲ. ಇವತ್ತು ನಮ್ಮ ಸಿನಿಮಾ ಕಲೆಕ್ಷನ್‌ನಲ್ಲಿ ಮುಂದಿರಬಹುದು, ನಾಳೆ ಅದನ್ನು ಮತ್ತೂಂದು ಸಿನಿಮಾ ಹಿಂದಿಕ್ಕಬಹುದು. ಇಲ್ಲಿ ಕಲೆಕ್ಷನ್‌ಗಿಂತ ಜನರ ಪ್ರೀತಿ, ನಿರ್ಮಾಪಕರ ನಂಬಿಕೆ ಮುಖ್ಯ. ಇವತ್ತು ಸಿನಿಮಾಕ್ಕೆ ದುಡ್ಡು ಹಾಕಿದ ನಿರ್ಮಾಪಕರು ಖುಷಿಯಾಗಿದ್ದಾರೆ, ನಿರ್ದೇಶಕರಿಗೆ ಒಳ್ಳೆಯ ಹೆಸರು ಬಂದಿದೆ ಅಷ್ಟು ಸಾಕು’ ಎನ್ನುವ ಮೂಲಕ ಕಲೆಕ್ಷನ್‌ಗಿಂತ ಜನರ ಪ್ರೀತಿ ಮುಖ್ಯ ಎನ್ನುತ್ತಾರೆ ಸುದೀಪ್‌.

ಇನ್ನು, ಸುದೀಪ್‌ಗೆ “ಹೆಬ್ಬುಲಿ’ಯ ಓಪನಿಂಗ್‌ ಕಂಡು ಅಚ್ಚರಿಯಾಗಿದೆ. “ಸಿನಿಮಾ ಬಗ್ಗೆ ನಿರೀಕ್ಷೆ ಇತ್ತು ನಿಜ. ಆದರೆ ಈ ಮಟ್ಟದ ಓಪನಿಂಗ್‌ ಸಿಗುತ್ತದೆಂದು ಎಂದು ನಾನಂದುಕೊಂಡಿರಲಿಲ್ಲ. ಸಿನಿಮಾ ಬಿಡುಗಡೆ ದಿನ ಥಿಯೇಟರ್‌ಗೆ ಹೋಗಿದ್ದೆ. ಅಲ್ಲಿ ಸೇರಿದ್ದ ಕ್ರೌಡ್‌ ನೋಡಿ ನನಗೆ ಅಚ್ಚರಿಯಾಯಿತು. ಕೆಲವರ ಸಿನಿಮಾಗಳಿಗೆ ಆ ತರಹದ ಅದ್ಭುತ ಓಪನಿಂಗ್‌ ಸಿಕ್ಕಿರೋದನ್ನು ನಾನು ನೋಡಿದ್ದೆ.
“ನಮಗೆ ಯಾವಾಗಪ್ಪಾ ಈ ತರಹ’ ಎಂದು ಮನಸ್ಸಲ್ಲೇ ಅಂದುಕೊಂಡಿದ್ದೆ.

“ಹೆಬ್ಬುಲಿ’ ಮೂಲಕ ಅದು ಈಡೇರಿದೆ. ಈ ತರಹದ ಒಂದು ಪ್ರೀತಿ, ಅಪ್ಪುಗೆಯನ್ನು ಹೇಳಿ ಮಾಡಿಸಿಕೊಳ್ಳಲು, ಪಡೆಯಲು ಸಾಧ್ಯವಿಲ್ಲ. ಅಷ್ಟೊಂದು ನೂಕುನುಗ್ಗಲಿನಲ್ಲಿ ಬಂದು ಸಿನಿಮಾ ನೋಡಿದ್ದಾರೆಂದರೆ ಅದು ಅಭಿಮಾನಿಗಳ ಪ್ರೀತಿ. ಇವತ್ತು ಸಿನಿಮಾ ಚೆನ್ನಾಗಿ ಓಡುತ್ತಿದೆ. ಅದು ಜನ ನಮಗೆ ಕೊಟ್ಟ ಕಾಣಿಕೆ’ ಎಂದು ಅಭಿಮಾನಿಗಳ ಪ್ರೀತಿಯ ಬಗ್ಗೆ ಹೇಳುತ್ತಾರೆ ಸುದೀಪ್‌. ಇನ್ನು ರಾಜ್ಯದ ನಾನಾ ಕಡೆ ಹೋಗಿ ಥಿಯೇಟರ್‌ ವಿಸಿಟ್‌ ಮಾಡುವ ಹಾಗೂ ಜನರೊಂದಿಗೆ ಸ್ವಲ್ಪ ಹೊತ್ತು ಬೆರೆಯುವ ಆಲೋಚನೆ ಕೂಡಾ ಸುದೀಪ್‌ ಅವರಿಗಿದೆ.

ಅಂದಹಾಗೆ, ಸುದೀಪ್‌ ಅವರು ತೆಲಗಿನ “ಈಗ’ ಚಿತ್ರದ ನಟನೆಗಾಗಿ ಆಂಧ್ರ ಸರ್ಕಾರದ ನೀಡುವ ನಂದಿ ಪ್ರಶಸ್ತಿಗೆ ಭಾಜನರಾಗಿದ್ದು, ಅತ್ಯುತ್ತಮ ಖಳನಟ ಪ್ರಶಸ್ತಿ ಅವರ ಪಾಲಾಗಿದೆ. ಈ ಮೂಲಕ “ಹೆಬ್ಬುಲಿ’ ಯಶಸ್ಸಿನ ಜೊತೆಗೆ ಮೊದಲ ತೆಲುಗು ಚಿತ್ರದಲ್ಲೇ ಪ್ರಶಸ್ತಿ ಪಡೆದು ಅಭಿಮಾನಿಗಳಿಗೆ ಮತ್ತಷ್ಟು ಖುಷಿ ಕೊಟ್ಟಿದ್ದಾರೆ ಸುದೀಪ್‌.

ಟಾಪ್ ನ್ಯೂಸ್

Shocking: ದೀಪಾವಳಿ ಸಂಭ್ರಮದಲ್ಲಿದ್ದ ಚಿಕ್ಕಪ್ಪ- ಸೋದರಳಿಯನನ್ನು ಗುಂಡಿಕ್ಕಿ ಹತ್ಯೆ…

Shocking: ದೀಪಾವಳಿ ಸಂಭ್ರಮದಲ್ಲಿದ್ದ ಚಿಕ್ಕಪ್ಪ- ಸೋದರಳಿಯನನ್ನು ಗುಂಡಿಕ್ಕಿ ಹತ್ಯೆ…

ಪಿಎಂ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಡಾ.ಬಿಬೇಕ್ ಡೆಬ್ರಾಯ್ ನಿಧನ

Dr Bibek Debroy: ಪಿಎಂ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಡಾ.ಬಿಬೇಕ್ ಡೆಬ್ರಾಯ್ ನಿಧನ

Sandalwood: ಗೆಲುವಿನ ಓಟದಲ್ಲಿ ಮಂಕಾದ ಹೊಸಬರು; ಕೈ ಹಿಡಿಯದ ಪ್ರೇಕ್ಷಕ

Sandalwood: ಗೆಲುವಿನ ಓಟದಲ್ಲಿ ಮಂಕಾದ ಹೊಸಬರು; ಕೈ ಹಿಡಿಯದ ಪ್ರೇಕ್ಷಕ

Ignoring MES is better than banning it: Satish Jarakiholi

Belagavi; ಎಂಇಎಸ್‌ ನಿಷೇಧಕ್ಕಿಂತ ನಿರ್ಲಕ್ಷ್ಯ ಮಾಡುವುದು ಉತ್ತಮ: ಸತೀಶ್‌ ಜಾರಕಿಹೊಳಿ

Raichur: hit for setting firecrackers in front of house

Raichur: ಮನೆ ಮುಂದೆ ಪಟಾಕಿ ಹಚ್ಚಿದ್ದಕ್ಕೆ ಕೊಲೆ!

Voyager 1 encountered a problem in interstellar space 25 billion km away

25 ಬಿಲಿಯನ್ ಕಿ.ಮೀ ದೂರದ ಅಂತರತಾರಾ ಬಾಹ್ಯಾಕಾಶದಲ್ಲಿ ಸಮಸ್ಯೆಗೆ ಸಿಲುಕಿದ ವೊಯೇಜರ್ 1

12-bng

Bengaluru: ನಗರದಲ್ಲಿ ಪರಭಾಷಿಕರಿಗೆ ಕನ್ನಡ ಭಾಷೆ ಕಲಿಸುವ “ಆಟೋ ಅಜ್ಮಲ್‌’


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood: ಗೆಲುವಿನ ಓಟದಲ್ಲಿ ಮಂಕಾದ ಹೊಸಬರು; ಕೈ ಹಿಡಿಯದ ಪ್ರೇಕ್ಷಕ

Sandalwood: ಗೆಲುವಿನ ಓಟದಲ್ಲಿ ಮಂಕಾದ ಹೊಸಬರು; ಕೈ ಹಿಡಿಯದ ಪ್ರೇಕ್ಷಕ

Dhananjay: ಮದುವೆಗೆ ಸಿದ್ದವಾದ್ರು ಡಾಲಿ; ದುರ್ಗದ ಹುಡುಗಿಯ ಕೈ ಹಿಡಿಯಲಿದ್ದಾರೆ ಧನಂಜಯ

Ugravatara kannada movie

Ugravatara; ಇಂದಿನಿಂದ ಪ್ರಿಯಾಂಕಾ ʼಉಗ್ರಾವತಾರʼ

ನವೆಂಬರ್‌ 8ಕ್ಕೆ ʼಯು 235ʼ

Sandalwood: ನವೆಂಬರ್‌ 8ಕ್ಕೆ ʼಯು 235ʼ

OTT player launched

OTT: ಹೊಸ ಓಟಿಟಿ ಪ್ಲೇಯರ್‌ ಆರಂಭ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

28

Indrali ರೈಲ್ವೇ ನಿಲ್ದಾಣಕ್ಕೆ ಶೆಲ್ಟರ್‌ ಅಳವಡಿಕೆ

27

Deepavali ಹಿರಿಯರ ನೆನಪಿನ ಬೆಳಕು; ನರಕ ಚತುರ್ದಶಿಗೂ ಮೊದಲೇ ನಡೆಯುತ್ತದೆ ಸೈತಿನಕ್ಲೆನ ಪರ್ಬ

Shocking: ದೀಪಾವಳಿ ಸಂಭ್ರಮದಲ್ಲಿದ್ದ ಚಿಕ್ಕಪ್ಪ- ಸೋದರಳಿಯನನ್ನು ಗುಂಡಿಕ್ಕಿ ಹತ್ಯೆ…

Shocking: ದೀಪಾವಳಿ ಸಂಭ್ರಮದಲ್ಲಿದ್ದ ಚಿಕ್ಕಪ್ಪ- ಸೋದರಳಿಯನನ್ನು ಗುಂಡಿಕ್ಕಿ ಹತ್ಯೆ…

ಪಿಎಂ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಡಾ.ಬಿಬೇಕ್ ಡೆಬ್ರಾಯ್ ನಿಧನ

Dr Bibek Debroy: ಪಿಎಂ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಡಾ.ಬಿಬೇಕ್ ಡೆಬ್ರಾಯ್ ನಿಧನ

26

Waqf ವಿವಾದ ಹಿನ್ನೆಲೆ ಭೂದಾಖಲೆ ಪರಿಶೀಲನೆಗೆ ವಿಎಚ್‌ಪಿ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.