Ashika Ranganath: ʼಚುಟು ಚುಟುʼ ಬೆಡಗಿಗೆ 27ರ ಹುಟ್ಟು ಹಬ್ಬ; ವಿಶೇಷ ಪೋಸ್ಟರ್‌ಗಳು ರಿಲೀಸ್
Team Udayavani, Aug 5, 2023, 1:34 PM IST
ಬೆಂಗಳೂರು: ಸ್ಯಾಂಡಲ್ ವುಡ್ ಬೆಡಗಿ ಆಶಿಕಾ ರಂಗನಾಥ್ ಅವರಿಗಿಂದು 27ನೇ ಹುಟ್ಟುಹಬ್ಬದ ಸಂಭ್ರಮ. ಚಂದವನದಲ್ಲಿ ಮಿಂಚಿ, ಈಗ ಬೇರೆ ಭಾಷೆಯ ಚಿತ್ರಂಗದಲ್ಲೂ ಬೇಡಿಕೆ ನಟಿಯಾಗಿ ಬೆಳೆಯುತ್ತಿರುವ ʼಚುಟು ಚುಟುʼ ಬೆಡಗಿಗೆ ಅಭಿಮಾನಿಗಳು ಹುಟ್ಟು ಹಬ್ಬದ ಶುಭಾಶಯವನ್ನು ಕೋರಿದ್ದಾರೆ.
ಅಭಿಮಾನಿಗಳಿಗಾಗಿ ಆಶಿಕಾ ಪತ್ರವೊಂದನ್ನು ಬರೆದಿದ್ದು, “ನಾನು ನಿಮಗೆ ಇದನ್ನು ಪ್ರೀತಿಯಿಂದ ಕಳುಹಿಸುತ್ತಿರುವ ಸಂದೇಶ. ಈ ವರ್ಷ ನಾನು ಮನೆಯಲ್ಲಿ ಹುಟ್ಟುಹಬ್ಬವನ್ನು ಆಚರಿಸುತ್ತಿಲ್ಲ. ಈ ಬಾರಿ ನಾನು ಹೊರಗಡೆ ಇದ್ದೇನೆ. ಪ್ರತಿಯೊಬ್ಬರನ್ನು ಮಿಸ್ ಮಾಡಿಕೊಳ್ಳುತ್ತೇನೆ. ಕಳೆದ ಬಾರಿ ನಿಮ್ಮೊಂದಿಗೆ ಆಚರಿಸಿಕೊಂಡ ಹುಟ್ಟುಹಬ್ಬ ಅವಿಸ್ಮರಣೀಯವಾಗಿತ್ತು. ಅದಕ್ಕಾಗಿ ನಿಮಗೆಲ್ಲ ಧನ್ಯವಾದಗಳು. ಈ ಬಾರಿ ನಿಮ್ಮೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಆಗಲ್ಲ. ದಯವಿಟ್ಟು ನನ್ನ ಮನೆಯ ಕಡೆ ಬರಬೇಡಿ. ಈ ವರ್ಷ ನಾನು ಅಲ್ಲಿ ಇರುವುದಿಲ್ಲ. ನಿಮ್ಮ ಅಭಿಮಾನಕ್ಕೆ ಧನ್ಯವಾದ. ನಿಮ್ಮಲ್ಲರ ಬೆಂಬಲನನ್ನನು ಖುಷಿಯಾಗಿಸುತ್ತದೆ” ಎಂದು ನಟಿ ಬರೆದುಕೊಂಡಿದ್ದಾರೆ.
ನಟನೆಗೂ ಮುನ್ನ ʼಕ್ಲೀನ್ & ಕ್ಲಿಯರ್ ಫೇಸರ್ ಬೆಂಗಳೂರು ಸ್ಪರ್ಧೆಯಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದ ಆಶಿಕಾ 2016 ರಲ್ಲಿ ಬಂದ ʼಕ್ರೇಜಿ ಬಾಯ್ʼ ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಟ್ಟರು. 2017 ರಲ್ಲಿ ಬಂದ ʼಮಾಸ್ ಲೀಡರ್ʼ ಹಾಗೂ ʼಮುಗುಳು ನಗೆʼ ಸಿನಿಮಾ ಅವರಿಗೆ ಒಂದಷ್ಟು ಹೆಸರು ತಂದುಕೊಟ್ಟಿತು. 2018 ರಲ್ಲಿ ತೆರೆಗೆ ಬಂದ ʼರಾಜು ಕನ್ನಡ ಮೀಡಿಯಂ’ ನಲ್ಲಿ ಕಾಣಿಸಿಕೊಂಡ ಬಳಿಕ ಅದೇ ವರ್ಷ ರಿಲೀಸ್ ಆದ ಶರಣ್ ಅವರ ʼ ರ‍್ಯಾಂಬೋ-2ʼ ಸೂಪರ್ ಹಿಟ್ ಆಗುವುದರ ಜೊತೆಗೆ ಆಶಿಕಾ ಅವರ ಕೆರಿಯರ್ ನಲ್ಲಿ ದೊಡ್ಡ ಬ್ರೇಕ್ ಕೊಟ್ಟಿತು.
ಇದರ ನಂತರ ʼಮದಗಜʼ, ಅವತಾರ ಪುರುಷʼ ನಂತಹ ಹಿಟ್ ಸಿನಿಮಾಗಳಲ್ಲಿ ಅವರು ಕಾಣಿಸಿಕೊಂಡರು. ಇದಲ್ಲದೇ ಇವರು ʼ ಪಟ್ಟತ್ತು ಅರಸನ್ʼ ಎಂಬ ತಮಿಳು ಸಿನಿಮಾ ʼಅಮಿಗೋಸ್ʼ ಎಂಬ ಟಾಲಿವುಡ್ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದಾರೆ.
ಚಿತ್ರತಂಡದಿಂದ ಸ್ಪೆಷೆಲ್ ಫೋಸ್ಟರ್ ಗಿಫ್ಟ್: ಇನ್ನು ನಟಿ ಆಶಿಕಾ ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಜೊತೆ ಕಲಾವಿದರು ಕೂಡ ವಿಶ್ ಮಾಡಿ ಹಾರೈಸಿದ್ದಾರೆ. ಅವರ ಮುಂದಿನ ಸಿನಿಮಾಗಳ ಪೋಸ್ಟರ್ ಗಳನ್ನು ಹುಟ್ಟು ಹಬ್ಬದ ಪ್ರಯುಕ್ತ ರಿಲೀಸ್ ಮಾಡಲಾಗಿದೆ. ʼಗತವೈಭವʼ ಚಿತ್ರದ ತಂಡ ಪೋಸ್ಟರ್ ರಿಲೀಸ್ ಮಾಡಿದೆ. ಚಿತ್ರದ ನಿರ್ದೇಶಕ ಸಿಂಪಲ್ ಸುನಿ ಅವರು ಆಶಿಕಾ ಅವರಿಗೆ ವಿಶ್ ಮಾಡಿದ್ದಾರೆ. ಇದರಲ್ಲಿ ಆಶಿಕಾ ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು ಸಿಂಪಲ್ ಸುನಿ ಅವರದೇ ಆಗಿರುವ ʼಅವತಾರ ಪುರುಷ-2ʼ ಚಿತ್ರ ತಂಡವೂ ಸ್ಪೆಷೆಲ್ ಫೋಸ್ಟರ್ ಮೂಲಕ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದೆ.
ನಟ ಶರಣ್ ಹಾಗೂ ನಿರ್ದೇಶಕ ಸುನಿ , ನಟಿ ಮಾನ್ವಿತ ಸೇರಿದಂತೆ ಹಲವರು ನಟಿಗೆ ಬರ್ತ್ ಡೇ ವಿಶ್ ಮಾಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.