ನಿಶ್ವಿಕಾ ಕಣ್ಣಲ್ಲಿ ಹೊಸ ಪಾತ್ರಗಳ ಕನಸು
Team Udayavani, Jun 12, 2021, 2:24 PM IST
“ಕಳೆದ ಎರಡು-ಮೂರು ವರ್ಷಗಳಿಂದ ನನಗೇ ಗೊತ್ತಿಲ್ಲದಂತೆ ನಾನು ಸಿನಿಮಾದಲ್ಲಿ ಬಿಝಿಯಾಗಿದ್ದೇನೆ. ಒಂದರ ಹಿಂದೊಂದು ಸಿನಿಮಾಗಳಲ್ಲಿ ಒಳ್ಳೆಯ ಆಫರ್ಸಿ ಗುತ್ತಿದ್ದರಿಂದ, ಯಾವಾಗಲೂ ಸಿನಿಮಾ ಮೀಟಿಂಗ್, ಶೂಟಿಂಗ್, ಪ್ರಮೋಶನ್ಸ್ ಅಂತ ಎಂಗೇಜ್ ಆಗಿರುತ್ತಿದ್ದೆ. ಹೀಗೆ ಇಷ್ಟೊಂದು ದಿನ, ವಾರಗಳ ಕಾಲ ಮನೆಯಲ್ಲಿ ಲಾಕ್ ಆಗುತ್ತಿರುವುದು ಇದೇ ಮೊದಲು. ಆದ್ರೆ ಸದ್ಯದ ಮಟ್ಟಿಗೆ ಲಾಕ್‌ಡೌನ್‌ನಿಂದಾಗಿ, ಏನೂ ಕೆಲಸಗಳಿಲ್ಲದಾಗಿದ್ದರಿಂದ ಅನಿವಾರ್ಯವಾಗಿ ಮನೆಯಲ್ಲೇ ಇರಬೇಕಾಗಿದೆ. ಕೆಲಸವಿಲ್ಲದೆ ಮನೆಯಲ್ಲಿ ಇರೋದಕ್ಕೆ ಬೋರ್ ಆದ್ರೂ ಬೇರೆ ದಾರಿಯಿಲ್ಲ’ ಇದು ನಟಿ ನಿಶ್ವಿಕಾ ನಾಯ್ಡು ಅಳಲು.
ಹೌದು, ಸದ್ಯ ಕೋವಿಡ್ ಲಾಕ್‌ಡೌನ್‌ನಿಂದಾಗಿ ಸಿನಿಮಾ ಕೆಲಸಗಳಿಗೆ ಬ್ರೇಕ್ ಬಿದ್ದಿರುವುದರಿಂದ, ಅನಿವಾರ್ಯವಾಗಿ ಎಲ್ಲರಂತೆ ನಿಶ್ವಿಕಾ ನಾಯ್ಡು ಕೂಡ ಮನೆಯಲ್ಲೇ ಇರುವಂತಾಗಿದೆ. ಇದೇ ವೇಳೆ ಲಾಕ್‌ಡೌನ್ ಅನುಭವಗಳ ಬಗ್ಗೆ ಮಾತನಾಡಿದ ನಿಶ್ವಿಕಾ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಮನೆಯೇ ಮಂತ್ರಾಲಯ: “ಸದ್ಯಕ್ಕೆ ಸಿನಿಮಾದ ಕೆಲಸಗಳಿಲ್ಲ. ಹೊರಗೆಲ್ಲೂ ಹೋಗುವಂತಿಲ್ಲ. ಹಾಗಾಗಿ ಎಲ್ಲರಂತೆ ನಾನೂ ಮನೆಯಲ್ಲೇ ಲಾಕ್ ಆಗಿದ್ದೇನೆ. ಇತ್ತೀಚಿನ ವರ್ಷಗಳಲ್ಲಿ ಮನೆಯಲ್ಲಿ ಯಾವತ್ತೂ ಇಷ್ಟೊಂದು ದಿನ ಇರೋದಕ್ಕೆ ಸಾಧ್ಯವಾಗಿರಲಿಲ್ಲ. ಆದ್ರೆ, ಈಗ ಸಿನಿಮಾದ ಎಲ್ಲ ಆ್ಯಕ್ಟಿವಿಟಿಸ್ ಬಂದ್ ಆಗಿರುವುದರಿಂದ ಅನಿವಾರ್ಯವಾಗಿ ಮನೆಯಲ್ಲಿರದೆ ಬೇರೆ ದಾರಿಯಿಲ್ಲ. ಟಿ.ವಿ ನೋಡೋದು, ಒಂದಷ್ಟು ಸಿನಿಮಾ ನೋಡೋದು, ಪ್ರಾಕ್ಟೀಸ್, ವರ್ಕೌಟ್ ಅಂತ ಮನೆಯಲ್ಲೇ ಇದ್ದೀನಿ. ಒಂದು ಕಡೆ ಕೆಲಸವಿಲ್ಲವಲ್ಲ ಅಂಥ ಬೇಜಾರಾದ್ರೂ, ಮತ್ತೂಂದು ಕಡೆ ಮನೆಯವರ ಜೊತೆ ನೆಮ್ಮದಿಯಾಗಿದ್ದೇನಲ್ಲ ಅಂಥ ಖುಷಿ ಎರಡೂ ಇದೆ’ ಎನ್ನುತ್ತಾರೆ ನಿಶ್ವಿಕಾ.
“ಸಖತ್’ ಟೈಮ್ ನಲ್ಲಿ ಲಾಕ್‌ಡೌನ್: “ಕಳೆದ ವರ್ಷ ಲಾಕ್‌ಡೌನ್ ಮುಗಿದ ಬಳಿಕ ಮತ್ತೆ ನಿಧಾನವಾಗಿ ಸಿನಿಮಾದ ಆ್ಯಕ್ಟಿವಿಟಿಸ್ ಶುರುವಾಗಿತ್ತು. ಅದರಂತೆ ನಾನು ಒಪ್ಪಿಕೊಂಡ ಸಿನಿಮಾಗಳ ಕೆಲಸಗಳು ಕೂಡ ಶುರುವಾಗಿತ್ತು. ವರ್ಷದ ಆರಂಭದಲ್ಲೇ “ರಾಮಾರ್ಜುನ’ ಸಿನಿಮಾ ರಿಲೀಸ್ ಆಗಿತ್ತು. ಅದಾದ ಮೇಲೆ ನನ್ನ “ಸಖತ್’, “ಗುರು ಶಿಷ್ಯರು’ ಸೇರಿದಂತೆ ಎರಡು – ಮೂರು ಸಿನಿಮಾಗಳು ಅನೌನ್ಸ್ ಆಗಿತ್ತು. “ಸಖತ್’ ಸಿನಿಮಾ ಶೂಟಿಂಗ್ ಕೂಡ ಶುರುವಾಗಿತ್ತು. ಇದರಲ್ಲಿ ನನ್ನ ಪಾತ್ರದ ಹೆಸರು ನಕ್ಷತ್ರ ಅಂಥ. ಚಿಕ್ಕ ಮಕ್ಕಳಿಗೆ ಮೋಟಿವೇಶನ್ ಮಾಡುವ ಟೀಚರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. “ಸಖತ್’ ಸಿನಿಮಾದ ಕೊನೆ ಹಂತದ ಶೂಟಿಂಗ್ ನಡೆಯುತ್ತಿರುವಾಗಲೇ ಮತ್ತೆ ಲಾಕ್‌ಡೌನ್ ಅನೌನ್ಸ್ ಆಯ್ತು. ಲಾಕ್‌ಡೌನ್ ಕ್ಲಿಯರ್ ಆದ ಮೇಲೆ ಸದ್ಯ ಒಪ್ಪಿಕೊಂಡಿರುವ ಸಿನಿಮಾಗಳ ಶೂಟಿಂಗ್ ಮಾಡಿ ಮುಗಿಸಬೇಕಾಗಿದೆ’ ಎನ್ನುತ್ತಾರೆ ನಿಶ್ವಿಕಾ
ಸೂಜಿಯಲ್ಲಿ ರೆಟ್ರೋ ಲುಕ್: “ಸದ್ಯ ಶರಣ್ ನಾಯಕನಾಗಿರುವ “ಗುರು ಶಿಷ್ಯರು’ ಸಿನಿಮಾದಲ್ಲೂ ಲೀಡ್ ಆಗಿ ಅಭಿನಯಿಸುತ್ತಿದ್ದೇನೆ. ಇದು 1990ರ ದಶಕದಲ್ಲಿ ನಡೆಯುವಂಥ ಕಥೆ ಇರುವ ಸಿನಿಮಾ. ಇದರಲ್ಲಿ ಸುಜಾತ ಎನ್ನುವ ಸೈಕಲ್ ಹೊಡೆಯುಕೊಂಡು ಹೋಗಿ ಹಾಲು ಮಾರುವ ಹಳ್ಳಿ ಹುಡುಗಿಯ ಕ್ಯಾರೆಕ್ಟರ್ ನನ್ನದು. ಎಲ್ಲರೂ ನನ್ನನ್ನು ಸೂಜಿ ಅಂಥ ಕರೆಯುತ್ತಿರುತ್ತಾರೆ. ತುಂಬ ಬೋಲ್ಡ್ ಆಗಿರುವಂಥ ಕ್ಯಾರೆಕ್ಟರ್ ಇದು. ನನ್ನ ಮಟ್ಟಿಗೆ ತುಂಬ ಡಿಫರೆಂಟ್ ಆಗಿರುವಂಥ, ಅಷ್ಟೇ ಚಾಲೆಂಜಿಂಗ್ ಆಗಿರುವಂಥ ಕ್ಯಾರೆಕ್ಟರ್ ಇದು. ಈಗಾಗಲೇ ನನ್ನ ಕ್ಯಾರೆಕ್ಟರ್ ಪೋಸ್ಟರ್ ರಿಲೀಸ್ ಆಗಿದ್ದು, ಎಲ್ಲರೂ ಮೆಚ್ಚಿಕೊಳ್ಳುತ್ತಿದ್ದಾರೆ. ನನಗೂ ಈ ಸಿನಿಮಾದ ಬಗ್ಗೆ, ನನ್ನ ಕ್ಯಾರೆಕ್ಟರ್ ಮೇಲೆ ಸಾಕಷ್ಟು ನಿರೀಕ್ಷೆ ಮತ್ತು ಕುತೂಹಲವಿದೆ’ ಎನ್ನುವುದು ನಿಶ್ವಿಕಾ ಮಾತು.
ಲಾಕ್‌ಡೌನ್ ಟೈಮ್‌ನಲ್ಲಿ ಹೊಸ ಸ್ಕ್ರಿಪ್ಟ್ ಕೇಳ್ಳೋದಿಲ್ಲ!: “ಸಾಮಾನ್ಯವಾಗಿ ಕೆಲವರು ಲಾಕ್‌ಡೌನ್ ಟೈಮ್‌ನಲ್ಲಿ ತಮ್ಮ ಮುಂದಿನ ಹೊಸ ಸಿನಿಮಾಗಳ ಕಥೆ, ಸ್ಕ್ರಿಪ್ಟ್ ಕೇಳ್ತಾರೆ. ಆದ್ರೆ ನಾನು ಲಾಕ್‌ಡೌನ್‌ನಲ್ಲಿ ಹಾಗೆ ಮಾಡ್ತಿಲ್ಲ. ನನಗೆ ಮೊದಲಿನಿಂದಲೂ ಫೇಸ್ ಟು ಫೇಸ್ ಕೂತುಕೊಂಡೇ ಕಥೆ, ಸ್ಕ್ರಿಪ್ಟ್ ಕೇಳಿ ಅಭ್ಯಾಸ. ಹಾಗಾಗಿ, ಆನ್‌ಲೈನ್‌ನಲ್ಲೋ ಅಥವಾ ಪೋನ್‌ನಲ್ಲೂ ಸ್ಕ್ರಿಪ್ಟ್ ಕೇಳ್ಳೋದಕ್ಕೆ ಇಷ್ಟವಿಲ್ಲ. ಎದುರಿಗೆ ಕೂತು ಸ್ಕ್ರಿಪ್ಟ್ಕೇ ಳುತ್ತಿದ್ದಾಗ, ನಾನು ಮಾಡಬೇಕಾದ ಕ್ಯಾರೆಕ್ಟರ್ ಬಗ್ಗೆ ಕ್ಲಾರಿಟಿ ಸಿಗುತ್ತದೆ. ಸದ್ಯಕ್ಕೆ ಕೆಲವು ಆಫರ್ ಬರುತ್ತಿದ್ದರೂ, ಲಾಕ್‌ಡೌನ್ ಮುಗಿದ ಬಳಿಕವಷ್ಟೇ ಸ್ಕ್ರಿಪ್ಟ್ ಕೇಳಿ ಫೈನಲ್ ಮಾಡುತ್ತೇನೆ’ ಎನ್ನುತ್ತಾರೆ ನಿಶ್ವಿಕಾ ನಾಯ್ಡು.
ಜಿ.ಎಸ್.ಕಾರ್ತಿಕ ಸುಧನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.