ಲವ್‌ ಮಾಕ್ಟೇಲ್‌ ಹುಡುಗಿ ಸಿಕ್ಕಾಪಟ್ಟೆ ಬಿಝಿ


Team Udayavani, Aug 5, 2023, 10:36 AM IST

tdy-7

“ಲವ್‌ ಮಾಕ್ಟೇಲ್‌’ ಚಿತ್ರದಲ್ಲಿ ಸಖತ್‌ ಎನರ್ಜಿಟಿಕ್‌ ಆಗಿ ಪಟ್‌ ಪಟ್‌ ಅಂತಾ ಮಾತನಾಡುತ್ತಾ, ಪ್ರತಿ ಮಾತಿಗೂ “ಹೆಂಗೆ ನಾವೂ’ ಅಂತಾ ಹೇಳುತ್ತಲೇ ಕೋಟಿ ಕನ್ನಡಿಗರ ಹೃದಯ ಗೆದ್ದೆ ಚೆಲುವೆ ರಚನಾ ಇಂದರ್‌. ಲವ್‌ ಮಾಕ್ಟೇಲ್‌ ಚಿತ್ರದಲ್ಲಿನ ತಮ್ಮ  ಅಭಿನಯಕ್ಕೆ ಸಾಕಷ್ಟು ಪ್ರಶಂಸೆಯನ್ನು ಪಡೆದ ರಚನಾ, ಈಗ ಸಖತ್‌ ಬ್ಯುಸಿಯಾಗಿದ್ದಾರೆ. ಒಂದರ ಮೇಲೊಂದು ಚಿತ್ರಗಳಲ್ಲಿ  ಅಭಿನಯಿಸುತ್ತಿರುವ ರಚನಾ ಕೈಯಲ್ಲಿ ಮೂರ್‍ನಾಲ್ಕು ಸಿನಿಮಾಗಳಿವೆ. ಅದರಲ್ಲಿ “4ಎನ್‌6′ ಹಾಗೂ “ನಾನು ಮತ್ತು ಗುಂಡ-2′ ಚಿತ್ರಗಳು ಕೂಡಾ ಸೇರಿವೆ.

ಡಿಟೆಕ್ಟಿವ್‌ ರಚನಾ:

ನಟಿ ರಚನಾ ಇಂದರ್‌ “4 ಎನ್‌ 6′ ಎಂಬ ಸಿನಿಮಾದಲ್ಲಿ  ನಟಿಸಿದ್ದು, ಸದ್ದಿಲ್ಲದೇ ಚಿತ್ರೀಕರಣ ಪೂರೈಸಿದೆ ಚಿತ್ರತಂಡ. ಮರ್ಡರ್‌ ಮಿಸ್ಟರಿ ಜೊತೆಗೆ ಥ್ರಿಲ್ಲರ್‌ ಕಥಾಹಂದರದ ಈ ಚಿತ್ರವನ್ನು ಸಾಯಿಪ್ರೀತಿ ಅವರು ನಿರ್ಮಾಣ ಮಾಡುತ್ತಿದ್ದಾರೆ. ನವೀನ್‌ ಕುಮಾರ್‌ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರಕ್ಕೆ  ದರ್ಶನ್‌ ಶ್ರೀನಿವಾಸ್‌ ಅವರು  ನಿರ್ದೇಶನವಿದೆ. ಕೊಲೆಯೊಂದರ ತನಿಖೆಯ ಸುತ್ತ ನಡೆಯುವ ಕಥಾಹಂದರ ಒಳಗೊಂಡ ಚಿತ್ರ ಇದಾಗಿದ್ದು, ನಟಿ ರಚನಾ ಇಂದರ್‌ ಅವರು ಮೊದಲ ಬಾರಿಗೆ ಫಾರೆನ್ಸಿಕ್‌ ಡಿಟೆಕ್ಟಿವ್‌ ಪಾತ್ರದಲ್ಲಿ ನಟಿಸಿದ್ದಾರೆ.

ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಲ್ಲಿ ಬಿಝಿಯಾಗಿರುವ ಚಿತ್ರತಂಡ ಶೀಘ್ರದಲ್ಲಿ ಚಿತ್ರದ ಟೀಸರ್‌  ರಿಲೀಸ್‌ ಮಾಡಲಿದೆ. ಚರಣ್‌ ತೇಜ್‌ ಅವರ ಛಾಯಾಗ್ರಹಣ, ಸತ್ಯಕಹಿ ಅವರ ಸಂಭಾಷಣೆ ಹಾಗೂ ಸಾಯಿ ಸೋಮೇಶ್‌ ಅವರ ಸಂಗೀತ ಚಿತ್ರಕ್ಕಿದೆ. ಭವಾನಿ ಪ್ರಕಾಶ್‌, ಮೇಘನಾ, ಸಂಜಯ್‌ ನಾಯಕ್‌, ಸೌರವ್‌, ಸತ್ಯ ಹಾಗೂ ರೇಣುಕಾ ಹಾಗೂ ಇತರರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಮಾಡಲಿಂಗ್‌ ಬಯಸಿದ್ದ ರಚನಾ:

ಸಾಮಾನ್ಯವಾಗಿ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿಕೊಡಬೇಕು ಅಂದರೆ ಒಂದು ಬ್ಯಾಗ್ರೌಂಡ್‌, ಮಾಡಲಿಂಗ್‌ ಅನುಭವ ಇರಬೇಕು. ಇಲ್ಲ ಅಂದರೆ ತುಸು ಕಷ್ಟ ಇಲ್ಲಿ ಉಳಿಯಲು ಅನ್ನೋ ಭಾವನೆಯಿದೆ. ಮಾಡೆಲಿಂಗ್‌ ಕ್ಷೇತ್ರದಲ್ಲಿ ಮಿಂಚಿ ಬಳಿಕ ನಟಿಯಾದವರ ಸಂಖ್ಯೆ ಬಹಳಷ್ಟಿದೆ. ಈ ನಿಟ್ಟಿನಲ್ಲಿ ತಾನು ಮಾಡೆಲಿಂಗ್‌ ಪ್ರವೇಶಿದರೆ ಸಿನಿರಂಗಕ್ಕೆ ಪ್ರವೇಶ ಪಡೆಯಬಹುದು ಎಂಬ ಆಸೆ ರಚನಾಗೆ. ಬಾಲ್ಯದ ದಿನಗಳಿಂದ ಅಭಿನಯ, ಸಿನಿಮಾ ಕ್ಷೇತ್ರದಲ್ಲಿ  ಆಸಕ್ತಿ ಇದ್ದ  ರಚನಾಗೆ ಮಾಡೆಲಿಂಗ್‌ ಮೂಲಕ ಸಿನಿರಂಗ ಪ್ರವೇಶಿಸಬಹುದು ಎಂದು ಮೊದಲು ಅದರ ತಯಾರಿ ಆರಂಭಿಸದರಂತೆ. ಮಾಡೆಲ್‌ಗ‌ಳಂತೆ ಫೋಟೋ ಶೂಟ್‌ ಕೂಡಾ ಮಾಡಿಸಿದ್ದರಂತೆ. ಅದರ ಪರಿಣಾಮ ಈಗ ಚಿತ್ರರಂಗದಲ್ಲಿ ಅವಕಾಶ ಸಿಕ್ಕಿ, ಬಿಝಿಯಾಗುತ್ತಿದ್ದಾರೆ.  ಇಂಥದ್ದೇ ಪಾತ್ರ ಮಾಡಬೇಕು ಎಂದು ಗೆರೆ ಹಾಕಿಕೊಂಡಿಲ್ಲವಂತೆ ರಚನಾ. “ನಾನು ಪಾತ್ರ ಎಂಥದ್ದೇ ಆದರು ನನಗೆ ಅಭಿನಯದ ಅವಕಾಶ ವಿರಬೇಕು. ಆದರೆ ಆ್ಯಕ್ಷನ್‌ ಪಾತ್ರಗಳು, ಚಿತ್ರದ ಕಥೆಯನ್ನು ಪ್ರಭಾವಿಸುವ ಪಾತ್ರಗಳು ಮಾಡಬೇಕು. ತೆರೆ ಮೇಲೆ ಕೇವಲ ಬಂದು ಹೋಗುವ ಬದಲು  ಅಭಿನಯನಕ್ಕೆ ಒತ್ತು ಇರುವ ಪಾತ್ರ ನನಗಿಷ್ಟ’ ಎನ್ನುವುದು ರಚನಾ ಅವರ ಆಶಯ.

ಬಯಸದೇ ಬಂದ ಭಾಗ್ಯ :

ತರಬೇತಿ ಕೇಂದ್ರದಲ್ಲಿ ಅಭಿನಯದ ಕುರಿತು ಪಳಗುವ ಮುನ್ನವೇ ಬಂದ ಮೊದಲ ಸಿನಿಮಾದ ಅವಕಾಶ ಅಭಿನಯದ ಕುರಿತು ಸಾಕಷ್ಟು ಕಲಿಯುವಂತೆ ಮಾಡಿತ್ತು. ಚಿತ್ರತಂಡ ಅಭಿನಯದ ಮತ್ತಷ್ಟು ಮಜಲುಗಳನ್ನು  ರಚನಾಗೆ ತಿಳಿಸಿತ್ತು. “ಆಗ ತಾನೆ ನಟನಾ ತರಬೇತಿಗೆ ಸೇರಿದವಳು ನಾನು , ಈ ಚಿತ್ರಕ್ಕೆ ಆಯ್ಕೆ ಆದೆ. ಹಾಗಾಗಿ, ಅಭಿನಯದ ಕುರಿತು ಅಷ್ಟು  ತಿಳಿದಿರಲಿಲ್ಲ . ಆದರೆ ಲವ್‌ ಮಾಕ್ಟೇಲ್‌ನಲ್ಲಿ ಅದರ ಅನುಭವ ಪಡೆದೆ. ಮೊದಲ ಚಿತ್ರದ ಮೂಲಕ ಕಲಿತೆ’ ಎನ್ನುವುದು ರಚನಾ ಮಾತು.

ಟಾಪ್ ನ್ಯೂಸ್

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

1-qweeqw

Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!

ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

Bagheera: ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

Bhairathi Ranagal; ಶಿವಣ್ಣ ಡ್ರೀಮ್‌ ಪ್ರಾಜೆಕ್ಟ್ ಭೈರತಿ ಮೈಲುಗಲ್‌!

Bhairathi Ranagal; ಶಿವಣ್ಣ ಡ್ರೀಮ್‌ ಪ್ರಾಜೆಕ್ಟ್ ಭೈರತಿ ಮೈಲುಗಲ್‌!

Sandalwood: ಫ್ಯಾಮಿಲಿ ಡ್ರಾಮಾದಲ್ಲಿ ಸಂತೋಷ ಸಂಗೀತ

Sandalwood: ಫ್ಯಾಮಿಲಿ ಡ್ರಾಮಾದಲ್ಲಿ ಸಂತೋಷ ಸಂಗೀತ

BBK11: ಎದ್ದು ಬಿದ್ದು ಟಾಸ್ಕ್ ಸೋತ ಹನುಮಂತು: ರಿಯಲ್ ಹುಲಿ ನೀವೇ ಎಂದ ಸಹಸ್ಪರ್ಧಿ

BBK11: ಎದ್ದು ಬಿದ್ದು ಟಾಸ್ಕ್ ಸೋತ ಹನುಮಂತು: ರಿಯಲ್ ಹುಲಿ ನೀವೇ ಎಂದ ಸಹಸ್ಪರ್ಧಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

3

Uppinangady: ಕಬ್ಬಿಣದ ರಾಡಿನಿಂದ ಹಲ್ಲೆ; ದೂರು ದಾಖಲು

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

15

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಮಗುಚಿ ಬಿದ್ದ ಕ್ರೇನ್‌; ತಪ್ಪಿದ ಅನಾಹುತ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.