ನಟಿಯರು ಹೀರೋಯಿನ್ ಪಾತ್ರದಿಂದ ಹೊರಬರಲೇ ಬೇಕು…: ಸೋನು ಗೌಡ ನೇರ ಮಾತು
Team Udayavani, Mar 25, 2021, 12:53 PM IST
“ಸಿನಿಮಾರಂಗದಲ್ಲಿ ಯಾವುದೇ ಒಬ್ಬ ನಟಿ ಇಡೀ ಲೈಫ್ ಹೀರೋಯಿನ್ ಪಾತ್ರದಲ್ಲೇ ಇರಲು ಸಾಧ್ಯವಿಲ್ಲ. ಕಾಲ ಬದಲಾದಂತೆ, ನಟಿಯರು ಹೀರೋಯಿನ್ ಪಾತ್ರದಿಂದ ಹೊರಬಂದು ಬದಲಾಗಬೇಕು. ಇಲ್ಲ ಅಂದ್ರೆ ಸಿನಿಮಾ ರಂಗದಿಂದ ದೂರ ಉಳಿಯಬೇಕು. ನಾನು ಈ ಸತ್ಯವನ್ನು ಅರ್ಥ ಮಾಡಿಕೊಂಡಿದ್ದೇನೆ. ಹಾಗಾಗಿ, ನಾನು ಹೀರೋಯಿನ್ ಪಾತ್ರಗಳಿಗೆ ಮಾತ್ರ ಸೀಮಿತವಾಗಿಲ್ಲ. ಒಬ್ಬ ನಟಿಯಾಗಿ ನನಗೆ ಒಪ್ಪುವಂಥ ಎಲ್ಲ ಥರದ ಪಾತ್ರಗಳನ್ನು ಮಾಡುತ್ತಿದ್ದೇನೆ’ ಇದು ನಟಿ ಸೋನು ಗೌಡ ಮಾತು.
ಇತ್ತೀಚೆಗೆ ಸೋನು ಗೌಡ ಹೀರೋಯಿನ್ ಪಾತ್ರಗಳಿಗಿಂತ ಹೆಚ್ಚಾಗಿ ಬೇರೆ ಥರದ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಸೋನು ಅವರಿಂದ ಬರುವ ಉತ್ತರ ಇದು.
ಇದನ್ನೂ ಓದಿ:ದರ್ಶನ್-ಸುದೀಪ್ ಒಂದಾಗಬೇಕು: ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಅಭಿಯಾನ
“ಯಾವುದೇ ನಟ ಅಥವಾ ನಟಿ ತಾನು ಜೀವನ ಪೂರ್ತಿ ಹೀರೋಯಿನ್ ಅಥವಾ ಹೀರೋ ಆಗಿಯೇ ಸ್ಕ್ರೀನ್ ಮೇಲೆ ಇರಬೇಕು ಅಂದುಕೊಳ್ಳುವುದು ನನ್ನ ಪ್ರಕಾರ ಸರಿಯಲ್ಲ. ಕಲಾವಿದರಾದವರು ಎಲ್ಲ ಥರದ ಪಾತ್ರಗಳಿಗೂ, ಪ್ರಯೋಗಗಳಿಗೂ ತೆರೆದು ಕೊಳ್ಳಬೇಕು. ಹಾಗಾದಾಗ ಮಾತ್ರ ಅವರು ಹೆಚ್ಚು ಪ್ರಸ್ತುತರಾಗಿರುತ್ತಾರೆ’ ಅನ್ನೋದು ಸೋನು ಅಭಿಪ್ರಾಯ.
ಇನ್ನು ಸದ್ಯದಲ್ಲೇ ತೆರೆ ಕಾಣಲಿರುವ “ಯುವರತ್ನ’ ಚಿತ್ರದಲ್ಲಿ ಸೋನು ಗೌಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರದ ಬಗ್ಗೆ ಮಾತನಾಡುವ ಸೋನು, “ಈ ಹಿಂದೆ “ಗುಲ್ಟಾ’ ಸಿನಿಮಾದಲ್ಲಿ ಮಾಡಿದ ಥರದ್ದೇ, ಅದಕ್ಕೆ ಹತ್ತಿರವಾಗಿರುವಂಥ ಮತ್ತೂಂದು ಪಾತ್ರ “ಯುವರತ್ನ’ ಸಿನಿಮಾದಲ್ಲಿ ಸಿಕ್ಕಿದೆ. ಇದಕ್ಕಿಂತ ಹೆಚ್ಚಾಗಿ ನನ್ನ ಪಾತ್ರದ ಬಗ್ಗೆ ಈಗಲೇ ಹೆಚ್ಚೇನೂ ಹೇಳುವಂತಿಲ್ಲವಾಗಿದ್ದರಿಂದ, ಅದರ ಬಗ್ಗೆ ಹೆಚ್ಚೇನು ಗುಟ್ಟು ಬಿಟ್ಟುಕೊಡುವಂತಿಲ್ಲ. ಆದರೆ ಸಿನಿಮಾದಲ್ಲಿ ನನ್ನ ಪಾತ್ರವು ಬಲವಾದ ಹಿನ್ನೆಲೆಯಿದೆ. ನನ್ನ ಪಾತ್ರದ ಹೆಚ್ಚಿನ ಭಾಗ ವಿಶ್ವವಿದ್ಯಾನಿಲಯಗಳಲ್ಲಿ ಚಿತ್ರೀಕರಿಸಲಾಗಿದೆ. ಅಷ್ಟೇ ಅಲ್ಲ ಈ ಸಿನಿಮಾದಲ್ಲಿ ನಾನು ಯಾರೊಬ್ಬರಿಗೂ ಜೋಡಿಯಾಗಿಲ್ಲ ಅದು ಮತ್ತೂಂದು ವಿಶೇಷ’ ಎನ್ನುತ್ತಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Viral Pics: ಡೇಟಿಂಗ್ ರೂಮರ್ಸ್ ನಡುವೆ ವಿಜಯ್ – ರಶ್ಮಿಕಾ ಸೀಕ್ರೆಟ್ ಲಂಚ್ ಡೇಟ್
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.